ಕನ್ನಡಪ್ರಭ ವಾರ್ತೆ ಮುಧೋಳ
ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ನೀರಿನ ಸಮಸ್ಯೆ ಇನ್ನೂ ಬಿಗಡಾಯಿಸುವ ಲಕ್ಷಣಗಳಿವೆ. ಆದ್ದರಿಂದ ಮುಧೋಳ ನಗರಸಭೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುತ್ತಿದ್ದು, ಜನರಿಗೆ ನೀರು ಪೂರೈಕೆಯಲ್ಲಿ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತಿದೆ. ಮುಧೋಳ ನಗರದ ಸಮೀಪದಲ್ಲಿರುವ ಹಳೇ ಗುಡದಿನ್ನಿ ಪುನರ್ವಸತಿಯಲ್ಲಿರುವ ಬೋರ್‌ವೆಲ್‌ನಿಂದ 3.5 ಕಿಮೀ ಪೈಪ್‌ಲೈನ್ ಮಾಡಲಾಗಿದೆ. ಅಲ್ಲಿಂದ ನೀರು ತಂದು ನಗರದ ಬಸ್ ಡಿಪೋ ಹಿಂದಿನ 100 ಆಶ್ರಯ ಮನೆಗಳಿಗೆ ಹಾಗೂ ಅಲ್ಲಿನ ಸುತ್ತಮುತ್ತಲಿನ ಮನೆಗಳಿಗೆ ಸಾರ್ವಜನಿಕ ನಲ್ಲಿಯ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ.
ಮೆಳ್ಳಿಗೇರಿ ಲೇಔಟ್‌ನಿಂದ ಜಯನಗರ, ಜಯನಗರ ಸ್ಲಂ, ವಿನಾಯಕ ನಗರ, ಬಳ್ಳೂರ ಪ್ಲಾಟ್‌ಗಳಲ್ಲಿರುವ ಸುಮಾರು 300 ಮನೆಗಳ 6 ಸಾವಿರ ಜನತೆಗೆ ನಲ್ಲಿಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಪವನಚುಕ್ಕಿಯಲ್ಲಿ ಬೋರ್‌ವೆಲ್ ಕೊರೆದು ಪವನಚುಕ್ಕಿ ಹಾಗೂ ಸಿದ್ಧರಾಮೇಶ್ವರ ನಗರದ ಸುಮಾರು 250 ಮನೆಗಳಿಗೆ ನೀರು ನೀಡಲಾಗುತ್ತಿದೆ. ಬೋರ್‌ವೆಲ್ ನೀರನ್ನು ಟೆಸ್ಟ್ ಮಾಡಿ ನಂತರವೇ ನೀರನ್ನು ಬಿಡಲಾಗುತ್ತದೆ.ರಾತ್ರಿ ಹಗಲೆನ್ನದೇ ನಗರಸಭೆ ಪೌರಾಯುಕ್ತ ಗೋಪಾಲ ಕಾಸೆ ಅವರ ಮಾರ್ಗದರ್ಶನದಲ್ಲಿ ನಗರಸಭೆ ಸಿಬ್ಬಂದಿ, ಜಲಸಂರಕ್ಷಣೆ ಹಾಗೂ ನೀರು ಪೂರೈಕೆಗೆ ಕಾರ್ಯ ನಿರ್ವಹಿಸುತ್ತಿದೆ. ಸಮಸ್ಯೆ ಇರುವೆಡೆ ಸ್ವತಃ ಪೌರಾಯುಕ್ತರೇ ಭೇಟಿ ನೀಡುತ್ತಿದ್ದಾರೆ. ನಗರಸಭೆಯ ಈ ಕಾರ್ಯಕ್ಕೆ ನಗರದ ನಿವಾಸಿ ರತ್ನಾ ಕಾಂಬಳೆ ಹಾಗೂ ಇನ್ನಿತರರು ಸಂತಸ ವ್ಯಕ್ತಪಡಿಸಿದ್ದಾರೆ.
- ರಾಜು ಚವ್ಹಾಣ
ಇಂಜನಿಯರ್ -----ಮೆಳ್ಳಿಗೇರಿ ಲೇಔಟ್‌ನಿಂದ ಜಯನಗರ, ಜಯನಗರ ಸ್ಲಂ, ವಿನಾಯಕ ನಗರ, ಬಳ್ಳೂರ ಪ್ಲಾಟ್‌ಗಳಲ್ಲಿರುವ ಸುಮಾರು 300 ಮನೆಗಳ 6 ಸಾವಿರ ಜನತೆಗೆ ನಲ್ಲಿಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಪವನಚುಕ್ಕಿಯಲ್ಲಿ ಬೋರ್‌ವೆಲ್ ಕೊರೆದು ಪವನಚುಕ್ಕಿ ಹಾಗೂ ಸಿದ್ಧರಾಮೇಶ್ವರ ನಗರದ ಸುಮಾರು 250 ಮನೆಗಳಿಗೆ ನೀರು ನೀಡಲಾಗುತ್ತಿದೆ. ಬೋರ್‌ವೆಲ್ ನೀರನ್ನು ಟೆಸ್ಟ್ ಮಾಡಿ ನಂತರವೇ ನೀರನ್ನು ಬಿಡಲಾಗುತ್ತದೆ.- ಗೋಪಾಲ ಕಾಸೆ
ನಗರಸಭೆ ಪೌರಾಯುಕ್ತ --------