ಬೇಡಿಕೆ ಈಡೇರಿಕೆಗಾಗಿ ಪೌರ ನೌಕರರ ಪ್ರತಿಭಟನೆ

KannadaprabhaNewsNetwork |  
Published : May 30, 2025, 12:49 AM IST
ಬೇಡಿಕೆ ಈಡೆರಿಕೆಗಾಗಿ ಪೌರ ನೌಕರರ ಪ್ರತಿಭಟನೆ | Kannada Prabha

ಸಾರಾಂಶ

ಕೊಪ್ಪ, ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯಾದ್ಯಂತ ಅನಿರ್ದಿಷ್ಟ ಅವಧಿಗೆ ಮುಷ್ಕರ ನಡೆಸಲಾಗುತ್ತಿದೆ. ಕೇಂದ್ರ ಕಚೇರಿ ಆದೇಶದನ್ವಯ ಕೊಪ್ಪದಲ್ಲೂ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ರಾಜ್ಯ ಪೌರಸೇವಾ ನೌಕರರ ಸಂಘದ ಕೊಪ್ಪ ಘಟಕದ ಅಧ್ಯಕ್ಷ ನಾರಾಯಣ್ ತಿಳಿಸಿದ್ದಾರೆ.

ಪೌರಸೇವಾ ನೌಕರರ ಸಂಘ ಕೊಪ್ಪ ಘಟಕದ ಅಧ್ಯಕ್ಷ ನಾರಾಯಣ್

ಕನ್ನಡಪ್ರಭ ವಾರ್ತೆ, ಕೊಪ್ಪ

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯಾದ್ಯಂತ ಅನಿರ್ದಿಷ್ಟ ಅವಧಿಗೆ ಮುಷ್ಕರ ನಡೆಸಲಾಗುತ್ತಿದೆ. ಕೇಂದ್ರ ಕಚೇರಿ ಆದೇಶದನ್ವಯ ಕೊಪ್ಪದಲ್ಲೂ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ರಾಜ್ಯ ಪೌರಸೇವಾ ನೌಕರರ ಸಂಘದ ಕೊಪ್ಪ ಘಟಕದ ಅಧ್ಯಕ್ಷ ನಾರಾಯಣ್ ತಿಳಿಸಿದ್ದಾರೆ.

ರಾಜ್ಯದ ಎಲ್ಲಾ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು. ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹೊರಗುತ್ತಿಗೆ ಯಡಿ ಕೆಲಸ ನಿರ್ವಹಿಸುತ್ತಿರುವ ನೀರು ಸರಬರಾಜು, ಚಾಲಕರು, ಲೋಡರ್ಸ್, ಕ್ಲೀನರ್, ಪೌರಕಾರ್ಮಿಕರು, ಎಲ್ಲರನ್ನು ಖಾಯಂ ಗೊಳಿಸಿ ಸರ್ಕಾರಿ ನೌಕರರಾಗಿ ಘೋಷಿಸಬೇಕು ಎಂದು ಚಿತ್ರದುರ್ಗದ ಪೌರ ನೌಕರರ ಸಂಘದ ಕೇಂದ್ರ ಕಚೇರಿಯವರು ಕರೆ ಕೊಟ್ಟಿದ್ದು ಅದರಂತೆ ಮೇ.೨೭ ರಿಂದ ಮುಷ್ಕರ ಆರಂಭಿಸಲಾಗಿದೆ.

ಪಟ್ಟಣ ಪಂಚಾಯ್ತಿ ಮುಂಭಾಗದಲ್ಲಿ ಕುಳಿತು ಬೇಡಿಕೆ ಈಡೇರಿಕೆಗಾಗಿ ಶಾಂತಿಯತವಾಗಿ ಪ್ರತಿಭಟಿಸುತ್ತಿದ್ದೇವೆ. ನಮ್ಮ ಬೇಡಿಕೆ ಈಡೇರದಿದ್ದಲ್ಲಿ ಮುಂದಿನ ದಿನಗಳಲ್ಲಿ ನೈರ್ಮಲ್ಯ ಮತ್ತು ನೀರು ಸರಬರಾಜು ಸೇರಿದಂತೆ ಇತರೆ ಕೆಲಸಗಳನ್ನು ಸಂಪೂರ್ಣ ವಾಗಿ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲಾಗುವುದು ಎಂದರು.ಬೇಡಿಕೆಗಳ ಮನವಿಯನ್ನು ಮುಖ್ಯಾಧಿಕಾರಿಗಳ ಮುಖೇನ ಸರಕಾರಕ್ಕೆ ಸಲ್ಲಿಸಲಾಯಿತು. ಪಟ್ಟಣ ಪಂಚಾಯ್ತಿ ಸ್ಥಾಯಿ ಸಮಿತಿ ಅಧ್ಯಕ್ಷ ಇದ್ದಿನಬ್ಬ (ಇಸ್ಮಾಯಿಲ್) ಅಧ್ಯಕ್ಷೆ ರೇಖಾಪ್ರಕಾಶ್, ಉಪಾಧ್ಯಕ್ಷೆ ಗಾಯತ್ರಿ ಎ. ಶೆಟ್ಟಿ, ಸದಸ್ಯೆ ಸುಜಾತ ಮುಂತಾದವರು ಪ್ರತಿಭಟನಾ ಸ್ಥಳದಲ್ಲಿ ಪೌರಕಾರ್ಮಿಕರೊಂದಿಗೆ ಕುಳಿತು ಪ್ರತಿಭಟನೆಗೆ ನೈತಿಕ ಬೆಂಬಲ ನೀಡಿದರು.

ಪೌರ ಸಂಘದ ಉಪಾಧ್ಯಕ್ಷ ಎಸ್. ಮೂರ್ತಿ, ಸರ್ವ ಸದಸ್ಯರು, ಪೌರಸೇವಾ ನೌಕರರು, ಬಿಲ್ ಕಲೆಕ್ಟರ್ ಎಚ್. ತಮ್ಮಣ್ಣ ಇತರ ಸಿಬ್ಬಂದಿ ಇದ್ದರು.

ಕ್ಯಾಪ್ಷನ್‌:

ಬೇಡಿಕೆಗಳ ಮನವಿಯನ್ನು ಮುಖ್ಯಾಧಿಕಾರಿಗಳ ಮುಖೇನ ಸರಕಾರಕ್ಕೆ ಸಲ್ಲಿಸಲಾಯಿತು. ರಾಜ್ಯ ಪೌರಸೇವಾ ನೌಕರರ ಸಂಘದ ಕೊಪ್ಪ ಘಟಕದ ಅಧ್ಯಕ್ಷ ನಾರಾಯಣ್ಪ, ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಇದ್ದಿನಬ್ಬ (ಇಸ್ಮಾಯಿಲ್) ಇತರರಿದ್ದರು.

PREV

Recommended Stories

ಹಿಂದೂ ಮಹಾಗಣಪತಿ ಮೂರ್ತಿಯ ವಿಸರ್ಜನೆ
ಪ್ಲಾನಿಂಗ್‌ ಆ್ಯಂಡ್ ಆರ್ಕಿಟೆಕ್ಚರ್‌ ಸ್ಕೂಲ್‌ ಆರಂಭಕ್ಕೆ ಸಿದ್ಧತೆ: ಡಿಕೆಶಿ