ಕನ್ನಡಪ್ರಭ ವಾರ್ತೆ, ತರೀಕೆರೆ
ಕೇಂದ್ರ ಸರ್ಕಾರದ ಯೋಜನೆಗಳ ಆರ್ಥಿಕ ನೆರವು ಪಡೆಯಬೇಕೆಂದು ಪುರಸಭೆ ಅಧ್ಯಕ್ಷ ಪರಮೇಶ್ ಹೇಳಿದ್ದಾರೆ.ಪುರಸಭೆ ಕಾರ್ಯಾಲಯದಿಂದ ಪಟ್ಟಣದ ಕನಕ ಕಲಾ ಭವನದಲ್ಲಿ ಏರ್ಪಡಿಸಿದ್ದ ಪ್ರಧಾನ ಮಂತ್ರಿ ಬೀದಿ ಬದಿ ವ್ಯಾಪಾರಿಗಳ ಆತ್ಮನಿರ್ಭರ್ ನಿಧಿ, ಸ್ವನಿಧಿ ಸೇ ಸಮೃದ್ಧಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಯೋಜನೆಯಿಂದ ಬೀದಿ ಬದಿ ವ್ಯಾಪಾರಿಗಳ ಕುಟುಂಬದವರು ಕೂಡ ಸೌಲಭ್ಯ ಪಡೆಯಬಹುದು. ಯೋಜನೆಯಲ್ಲಿ ಬರುವ ಎಂಟು ಯೋಜನೆಗಳ ಸೌಲಭ್ಯ ಪಡೆಯಬಹುದಾಗಿದೆ
ಎಂದು ಹೇಳಿದರು.ಪುರಸಭೆ ಮುಖ್ಯಾಧಿಕಾರಿ ಎಚ್.ಪ್ರಶಾಂತ್ ಮಾತನಾಡಿ, ಪಿಎಂಸ್ವ ನಿಧಿ ಯೋಜನೆ ಸರ್ಕಾರದ ಬಹು ಮುಖ್ಯ ಯೋಜನೆಯಾಗಿದ್ದು, ಬೀದಿ ಬದಿ ವ್ಯಾಪಾರಿಗಳ ಅರ್ಥಿಕ ಮತ್ತು ಸಾಮಾಜಿಕ ಸ್ಥಿತಿ ಸುಧಾರಣೆ ಯಾಗಬೇಕು, ಅನೇಕ ಚಿಕ್ಕ ಪುಟ್ಟ ವ್ಯಾಪಾರ ಮಾಡಬಹುದು, ಯೋಜನೆಯಿಂದ ಹೊಸ ಉದ್ಯಮ ಪ್ರಾರಂಭಿಸಬಹುದು, ಪಿಎಂ ಸ್ವನಿಧಿ ಯೋಜನೆಯಡಿ ಸಾಲ ಸೌಲಭ್ಯ ಬಳಸಿಕೊಂಡು ಆರ್ಥಿಕವಾಗಿ ಸದೃಢವಾಗಹುದು. ಡಿಜಿಟಲ್ ವ್ಯವಹಾರ ಮಾಡುವುದರಿಂದ ದುಡಿಮೆ ಹಣವನ್ನು ಒಂದು ಕಡೆ ಕ್ರೋಡೀಕ ರಿಸದಂತಾಗುತ್ತದೆ. ಚಿಲ್ಲರೆ ನೀಡುವ ಸಮಸ್ಯೆ ಇಲ್ಲದಂತಾಗುತ್ತದೆ. ಸ್ವನಿಧಿ ಸೇ ಸಮೃದ್ಧಿ ಯೋಜನೆಯಡಿ ಬೀದಿ ಬದಿ ವ್ಯಾಪಾರಸ್ಥರು ಒಳಗೊಂಡು ಅವರ ಅವಲಂಬಿತರೂ ವಿವಿಧ ಸಾಮಾಜಿಕ ಭದ್ರತಾ
ಯೋಜನೆಗಳ ಸದುಪಯೋಗ ಪಡೆಯಬಹುದಾಗಿದೆ ಎಂದರು.ಸಮುದಾಯ ಸಂಘಟನಾಧಿಕಾರಿ ಪ್ರಸನ್ನಕುಮಾರ್ ಮಾತನಾಡಿ ನಗದು ರಹಿತ ವ್ಯಾಪಾರ ವ್ಯವಸ್ಥೆ ಯೊಳಗೆ ಬೀದಿ ಬದಿ ವ್ಯಾಪಾರಗಳನ್ನು ತರಬೇಕೆಂಬ ಉದ್ದೇಶದಿಂದ ಪಿಎಂ ಸ್ವನಿಧಿ ಯೋಜನೆಯಡಿ ಎಲ್ಲಾ ಬೀದಿ ವ್ಯಾಪಾರಿಗಳಿಗೆ ಕ್ಯೂ ಆರ್ ಕೋಡ್ ತರಿಸಲಾಗುತ್ತಿದ್ದು ಅದರ ಸದುಪಯೋಗ ಎಲ್ಲರೂ ಪಡೆದುಕೊಳ್ಳಬೇಕು. ಇದರಿಂದ ಕ್ಯಾಷ್ ಬ್ಯಾಕ್ ಸೌಲಭ್ಯಗಳನ್ನು ಬೀದಿ ಬದಿ ವ್ಯಾಪಾರಿಗಳೂ ಕೂಡ ಪಡೆಯಬಹುದು. ಬಡ್ಡಿ ಸಬ್ಸಿಡಿಯನ್ನು ಸರ್ಕಾರ ಡಿಜಿಟಲ್ ಪೇಮೇಂಟ್ ಮಾಡುವ ಬೀದಿ ಬದಿ ವ್ಯಾಪಾರಿ ಗಳಿಗೆ ಈ ಸೌಲಭ್ಯ ಕಲ್ಪಿಸಿರುವುದರಿಂದ ಎಲ್ಲರೂ ನಗದು ರಹಿತ ವ್ಯಾಪಾರ ವ್ಯವಸ್ಥೆ ಅಳವಡಿಸಿ ಕೊಳ್ಳಬೇಕೆಂದು ಅವರು ತಿಳಿಸಿದರು.
ಬೀದಿ ಬದಿ ವ್ಯಾಪಾರಿಗಳಿಗೆ ಕಾರ್ಯಕ್ರಮದಲ್ಲಿ ಕ್ಯೂ ಆರ್ ಕೋಡ್ ವಿತರಿಸಲಾಯಿತು. ಅಭಿಯಾನದ ವ್ಯವಸ್ಥಾಪಕರಾದ ಡಿ.ಸಿ.ಹರ್ಷ, ಕೆನರಾ ಬ್ಯಾಂಕ್ ಅಶೋಕ್ ಮಾತನಾಡಿದರು.ಸಮುದಾಯ ಸಂಪನ್ಮೂಲ ವ್ಯಕ್ತಿ ಜ್ಯೋತಿ, ಜಯಶ್ರೀ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.5ಕೆಟಿಆರ್.ಕೆ.1ಃ
ತರೀಕೆರೆ ಪುರಸಭೆಯಿಂದ ಏರ್ಪಡಿಸಿದ್ದ ಪ್ರಧಾನ ಮಂತ್ರಿ ಬೀದಿ ಬದಿ ವ್ಯಾಪಾರಿಗಳ ಆತ್ಮ ನಿರ್ಭರ್ ನಿಧಿ, ಸ್ವ ನಿಧಿ ಸೇ ಸಮೃದ್ದಿ ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷ ಪರಮೇಶ್ ಮಾತನಾಡಿದರು. ಪುರಸಭೆ ಮುಖ್ಯಾಧಿಕಾರಿ ಎಚ್.ಪ್ರಶಾಂತ್. ಸಮುದಾಯ ಸಂಘಟನಾಧಿಕಾರಿ ಪ್ರಸನ್ನಕುಮಾರ್, ಅಭಿಯಾನದ ವ್ಯವಸ್ಥಾಪಕ ಡಿ.ಸಿ.ಹರ್ಷ ಮತ್ತಿತರರು ಇದ್ದಾರೆ.