ಪ್ರಾಚೀನ ಕಾಲದಿಂದ ಅಸ್ಥಿತ್ವದಲ್ಲಿರುವ ಭಿತ್ತಿಚಿತ್ರ ಕಲೆ

KannadaprabhaNewsNetwork |  
Published : May 29, 2024, 12:53 AM IST
ಕ್ಯಾಪ್ಷನಃ28ಕೆಡಿವಿಜಿ38ಃದಾವಣಗೆರೆ ದೃಶ್ಯ ಕಲಾ ಮಹಾವಿದ್ಯಾಲಯದಲ್ಲಿ ನಡೆದ ಎನ್ನೆಸ್ಸೆಸ್ ಶಿಬಿರದಲ್ಲಿ ಸಹಾಯಕ ದತ್ತಾತ್ರೇಯ ಎನ್.ಭಟ್ ಭಿತ್ತಿ ಚಿತ್ರಕಲೆ ಕುರಿತ ಉಪನ್ಯಾಸ ನೀಡಿದರು. | Kannada Prabha

ಸಾರಾಂಶ

ವಿಶ್ವದಲ್ಲಿ ಭಿತ್ತಿಚಿತ್ರ ಕಲೆ ಬಹಳ ಪುರಾತನವಾದುದು. ಭಾರತದಲ್ಲಿ ಕೂಡ ಇತ್ತು. ಮಾನವರು ಅಕ್ಷರ ಕಲಿತು ಗ್ರಂಥ ಬರೆಯಲು ಆರಂಭಿಸುವುದಕ್ಕಿಂತ ಪೂರ್ವದಲ್ಲಿ ಅದು ಜನರನ್ನು ತಲುಪಲು ಮಾಧ್ಯಮ ಆಗಿತ್ತು ಎಂದು ದೃಶ್ಯ ಕಲಾ ಮಹಾವಿದ್ಯಾಲಯದ ಬೋಧನಾ ಸಹಾಯಕ ದತ್ತಾತ್ರೇಯ ಎನ್. ಭಟ್ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಎನ್‌ಎಸ್‌ಎಸ್‌ ಶಿಬಿರದಲ್ಲಿ ಭಿತ್ತಿಚಿತ್ರ ಉಪನ್ಯಾಸದಲ್ಲಿ ದತ್ತಾತ್ರೇಯ ಭಟ್ ಅಭಿಮತ - - - ಕನ್ನಡಪ್ರಭ ವಾರ್ತೆ, ದಾವಣಗೆರೆ

ವಿಶ್ವದಲ್ಲಿ ಭಿತ್ತಿಚಿತ್ರ ಕಲೆ ಬಹಳ ಪುರಾತನವಾದುದು. ಭಾರತದಲ್ಲಿ ಕೂಡ ಇತ್ತು. ಮಾನವರು ಅಕ್ಷರ ಕಲಿತು ಗ್ರಂಥ ಬರೆಯಲು ಆರಂಭಿಸುವುದಕ್ಕಿಂತ ಪೂರ್ವದಲ್ಲಿ ಅದು ಜನರನ್ನು ತಲುಪಲು ಮಾಧ್ಯಮ ಆಗಿತ್ತು ಎಂದು ದೃಶ್ಯ ಕಲಾ ಮಹಾವಿದ್ಯಾಲಯದ ಬೋಧನಾ ಸಹಾಯಕ ದತ್ತಾತ್ರೇಯ ಎನ್. ಭಟ್ ಹೇಳಿದರು.

ನಗರದ ದಾವಣಗೆರೆ ವಿವಿ ಎನ್‌ಎಸ್‌ಎಸ್‌ ಯೋಜನಾ ವಿಭಾಗ, ವಿವಿ ದೃಶ್ಯ ಕಲಾ ಮಹಾವಿದ್ಯಾಲಯ ಸಹಯೋಗದಲ್ಲಿ ಕಾಲೇಜಿನಲ್ಲಿ ಆಯೋಜಿಸಿದ ಎನ್‌ಎಸ್‌ಎಸ್‌ ಶಿಬಿರದಲ್ಲಿ ಮಂಗಳವಾರ ಭಿತ್ತಿಚಿತ್ರ ಕಲೆ ಕುರಿತು ಉಪನ್ಯಾಸ ನೀಡಿದ ಅವರು, ಪ್ರಸ್ತುತ ದಿನಗಳಲ್ಲಿ ಚಿತ್ರಕಲಾ ಕ್ಷೇತ್ರದಲ್ಲಿ ಈ ಕಲೆಗಳ ಕುರಿತು ತಿಳಿಹೇಳುವ ಕೆಲಸ ಆಗಬೇಕಿದೆ ಎಂದರು.

ಈ ಸಂದರ್ಭ ಕಾಲೇಜಿನ ಎನ್‌ಎಸ್‌ಎಸ್‌ ಕಾರ್ಯಕ್ರಮ ಅಧಿಕಾರಿ ಡಾ.ಸತೀಶ ಕುಮಾರ ವಲ್ಲೇಪುರ, ದಾವಿವಿ ಸ್ನಾತಕೋತ್ತರ ಯೋಗ ವಿಜ್ಞಾನ ಅಧ್ಯಯನ ವಿಭಾಗದ ಸಂಯೋಜನಾ ಧಿಕಾರಿ ಡಾ.ಶಿವವೀರಕುಮಾರ ಚಂಡ್ರಕಿಮಠ, ಶಿಬಿರಾಧಿಕಾರಿ ಡಾ.ಗಿರೀಶಕುಮಾರ, ಸಹಾಯಕರಾದ ಡಾ.ಸಂತೋಷ ಕುಲಕರ್ಣಿ, ಹರೀಶ್ ಎಸ್. ಎಚ್, ಪ್ರಮೋದ ಅಚಾರ್, ಶಿವಶಂಕರ್ ಸುತಾರ, ರಂಗನಾಥ್, ನವೀನ್ ಕುಮಾರ್, ಅರುಣ್ ಕುಮಾರ್, ಶಿಬಿರಾರ್ಥಿಗಳು ಇದ್ದರು.

- - - -28ಕೆಡಿವಿಜಿ38ಃ:

ದಾವಣಗೆರೆ ದೃಶ್ಯ ಕಲಾ ಮಹಾವಿದ್ಯಾಲಯದಲ್ಲಿ ನಡೆದ ಎನ್‌ಎಸ್‌ಎಸ್‌ ಶಿಬಿರದಲ್ಲಿ ಸಹಾಯಕ ದತ್ತಾತ್ರೇಯ ಎನ್. ಭಟ್ ಭಿತ್ತಿ ಚಿತ್ರಕಲೆ ಕುರಿತ ಉಪನ್ಯಾಸ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ