ಭದ್ರಾಪುರ ಕೊಲೆ ಪ್ರಕರಣದ ಆರೋಪಿಗಳಿಗೆ ನ್ಯಾಯಾಲಯ ಮಂಗಳವಾರ ಜೀವಾವಧಿ ಶಿಕ್ಷೆ ವಿಧಿಸಿದೆ.
ಹೊಳೆಹೊನ್ನೂರು : ಭದ್ರಾಪುರ ಕೊಲೆ ಪ್ರಕರಣದ ಆರೋಪಿಗಳಿಗೆ ನ್ಯಾಯಾಲಯ ಮಂಗಳವಾರ ಜೀವಾವಧಿ ಶಿಕ್ಷೆ ವಿಧಿಸಿದೆ.
ಪಟ್ಟಣ ಸಮೀಪದ 2020ರಲ್ಲಿ ಜಮೀನು ವಿವಾದದಲ್ಲಿ ಕರಿಯಪ್ಪ ಎಂಬಾತನನ್ನು 9 ಜನ ಕೊಲೆ ಮಾಡಿದ್ದರು. ಪ್ರಕರಣದ ಪ್ರಮುಖ ಆರೋಪಿಗಳಾದ ಪರಮೇಶ, ಜಗದೀಶ್, ರಮೇಶ, ಗೌತಮ್, ಅಭಿಷೇಕ, ವಿಕ್ರಮ್, ಸಂಜಯ್‍ಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ಇನ್ನಿಬ್ಬರನ್ನು ನಿರ್ದೋಷಿಗಳೆಂದು ಪರಿಗಣಿಸಿ ಬಿಡುಗಡೆ ಮಾಡಿದೆ. ಪ್ರಕರಣದ 4ನೇ ಆರೋಪಿ ಮಂಜಪ್ಪ ಹಾಗೂ 7ನೇ ಆರೋಪಿ ಶರತ್‍ಗೆ ಬಿಡುಗಡೆ ಭಾಗ್ಯ ಸಿಕ್ಕಿದೆ. ಮೃತ ಕರಿಯಪ್ಪರವರ ಪತ್ನಿ ಗಂಗಮ್ಮ ರವರಿಗೆ 3 ಲಕ್ಷ ರುಪಾಯಿ ಪರಿಹಾರ ಹಾಗೂ ಸಾಕ್ಷಿ 1 ರಿಂದ 5 ರವರೆಗೆ 1 ಲಕ್ಷ ರುಪಾಯಿಗಳನ್ನು ಪರಿಹಾರ ನೀಡಿದೆ. ಪ್ರಕರಣದ ತನಿಖಾಧಿಕಾರಿಯಾಗಿ ಇ ಓ ಮಂಜುನಾಥ್ ಗ್ರಾಮಾಂತರ ವೃತ್ತ, ಹೊಳೆಹೊನ್ನೂರು ಪೋಲೀಸ್ ಇನ್ಸ್ಪೆಕ್ಟರ್ ಲಕ್ಷ್ಮಿಪತಿ ಆರ್ ಎಲ್. ದೋಷಾರೋಪಣ ಪಟ್ಟಿ ಸಲ್ಲಿಸಿರುತ್ತಾರೆ. ಸದರಿ ಪ್ರಕಾರದಲ್ಲಿ ಸರ್ಕಾರಿ ಅಭಿಯೋಜಕಿ ರತ್ನಮ್ಮ. ಪಿ ಸರ್ಕಾರದ ಪರವಾಗಿ ವಾದ ಮಂಡಿಸಿರುತ್ತಾರೆ. 4 ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಧೀಶರಾದ ಇಂದಿರಾ ಮೈಲಾಸ್ವಾಮಿ ಚಟ್ಟಿಯರ್ ಪ್ರಕರಣದ ವಿಚಾರಣೆ ನೆಡೆಸಿ ಆರೋಪಿತರಿಗೆ ಶಿಕ್ಷೆ ವಿಧಿಸಿರುತ್ತಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.