ವೃದ್ಧೆಯ ಕೊಲೆ: ಆರೋಪಿ ಬಂಧನ

KannadaprabhaNewsNetwork |  
Published : Mar 12, 2026, 12:15 AM IST
 ಫೋಟೋ ಇದೆ : 11 ಕೆಜಿಎಲ್ 1 : ಮೃತ ನಾಗಮ್ಮ | Kannada Prabha

ಸಾರಾಂಶ

ಹಣದ ವಿಚಾರಕ್ಕೆ ಸಂಬಂಧಿಸಿದಂತೆ ವೃದ್ಧೆಯೊಬ್ಬರನ್ನು ಕೊಲೆ ಮಾಡಿದ ಘಟನೆ ಇಲ್ಲಿನ ತಾಲೂಕಿನ ಹುಲಿಯೂರು ದುರ್ಗ ಹೋಬಳಿ ಉಜ್ಜನಿ ಗ್ರಾಮದಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಕುಣಿಗಲ್

ಹಣದ ವಿಚಾರಕ್ಕೆ ಸಂಬಂಧಿಸಿದಂತೆ ವೃದ್ಧೆಯೊಬ್ಬರನ್ನು ಕೊಲೆ ಮಾಡಿದ ಘಟನೆ ಇಲ್ಲಿನ ತಾಲೂಕಿನ ಹುಲಿಯೂರು ದುರ್ಗ ಹೋಬಳಿ ಉಜ್ಜನಿ ಗ್ರಾಮದಲ್ಲಿ ನಡೆದಿದೆ. ನಾಗಮ್ಮ (75) ಕೊಲೆಯಾದ ವೃದ್ಧೆ. ಕೊಲೆ ಮಾಡಿದ ಆರೋಪಿಯನ್ನು ಮುತ್ತುರಾಜ ಎಂದು ಗುರುತಿಸಲಾಗಿದ್ದು ಪೊಲೀಸರು ಬಂಧಿಸಿದ್ದಾರೆ.

ದಿ. 10ರ ಬೆಳಿಗ್ಗೆ ದೂರವಾಣಿ ಮುಖಾಂತರ ತಾಯಿಯನ್ನು ಸಂಪರ್ಕಿಸುವಾಗ ತಾಯಿ ಫೋನ್ ಕರೆ ಸ್ವೀಕರಿಸಲಿಲ್ಲ. ಈ ಸಂಬಂಧ ಪಕ್ಕದ ಮನೆಯವರಿಗೆ ಕರೆ ಮಾಡಿ ಮಾಹಿತಿಯನ್ನು ಪಡೆಯಲಾಗಿ ಆಕೆ ಮಂಚದ ಮೇಲೆ ಮಲಗಿರುವ ದೃಶ್ಯವನ್ನು ಕಂಡು ಯಾವುದೇ ಕೂಗುಗಳಿಗೆ ಸ್ಪಂದಿಸದೆ ಇದ್ದಾಗ ಬಾಗಿಲು ಒಡೆದು ಒಳ ಹೋಗಿ ಪರಿಶೀಲನೆ ನಡೆಸಿದಾಗ ವೃದ್ದೆ ಮೃತಪಟ್ಟಿದ್ದಾಳೆ ಎಂದು ದೃಢಪಟ್ಟಿದೆ ಈ ಸಂಬಂಧ ಹುಲಿಯೂರುದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಖರಣ ದಾಖಲಿಸಿದ್ದು ತನಿಖೆ ಕೈಗೊಂಡ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಚುರುಕುಗೊಳಿಸಿ ಕೇವಲ 12ಗಂಟೆ ಒಳಗೆ ಆರೋಪಿಯನ್ನು ಹೊಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಗ್ರಾಮದಲ್ಲಿ ಹುದ್ದೆ ಏಕಾಂಗಿಯಾಗಿ ಮನೆಯಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದ್ದು, ತನ್ನ ಬಳಿ ಇಟ್ಟುಕೊಂಡಿದ್ದ 1ಲಕ್ಷ ರು. ಹಣವನ್ನು ಬಿಜಿ ಕೊಪ್ಪಲ್ ಗ್ರಾಮದ ಮುತ್ತುರಾಜ ಎಂಬುವನಿಗೆ ಬಡ್ಡಿ ಆಸೆಗಾಗಿ ನೀಡಿದ್ದರು. ಹಣದ ಬಡ್ಡಿ ವಿಚಾರವಾಗಿ ಮುತ್ತುರಾಜು ಹಾಗೂ ನಾಗಮ್ಮ ನಡುವೆ ಜಗಳವಾಗಿದ್ದು ಆರೋಪಿ ವೃದ್ಧೆಯನ್ನು ಉಸಿರು ಕಟ್ಟಿಸಿ ಕೊಲೆ ಮಾಡಿದ್ದಾನೆ ಎಂದು ಬಂಧಿತ ಆರೋಪಿಯನ್ನು ವಿಚಾರಣೆ ವೇಳೆ ತಿಳಿಸಿದ್ದಾನೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬದುಕಿನ ಸಂಕಷ್ಟ ದೂರ ಮಾಡುವ ಶಕ್ತಿ ಶಿವನಾಮಸ್ಮರಣೆಯಲ್ಲಿದೆ
ಗಾಡಿ ಓಟದ ಸ್ಪರ್ಧೆ: ಮಾರುತಿ ಆರಂಜ್ಯೋತಿ ತಂಡ ಪ್ರಥಮ