ಶಂಕರರ ಗೀತೆಗಳಲ್ಲಿ ಬದುಕಿನ ಸಾರ್ಥಕತೆ ಅಡಗಿದೆ

KannadaprabhaNewsNetwork |  
Published : Mar 12, 2026, 12:15 AM IST
56 | Kannada Prabha

ಸಾರಾಂಶ

ಶೃಂಗೇರಿ ಶಂಕರ ಮಠದಲ್ಲಿ ಆಯೋಜಿಸಿದ್ದ ಗೀತ ಶಂಕರ ಜ್ಯೋ

ಕನ್ನಡಪ್ರಭ ವಾರ್ತೆ ನಂಜನಗೂಡುಶ್ರೀ ಶಂಕರರಚಾರ್ಯರು ರಚಿಸಿರುವ ಗೀತೆಗಳಲ್ಲಿ ಮಾನವನ ಬದುಕಿನ ಸಾರ್ಥಕತೆ ಅಡಗಿದೆ ಎಂದು ವಿದ್ಯಾ ವಾಗೀಶ್ವರಿ ಪಂಡಿತರಾದ ಸಂಗೀತ ವಿದ್ವಾನ್ ರಾ.ಸ. ನಂದಕುಮಾರ್ ಹೇಳಿದರು.ಪಟ್ಟಣದ ಶ್ರೀ ಶಂಕರ ಸೇವಾ ಪ್ರತಿಷ್ಠಾನದ ವತಿಯಿಂದ ಶ್ರೀ ಶೃಂಗೇರಿ ಶಂಕರ ಮಠದಲ್ಲಿ ಆಯೋಜಿಸಿದ್ದ ಗೀತ ಶಂಕರ ಜ್ಯೋತಿ ಶಂಕರ ಎಂಬ ಗೀತ ಗಾಯನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಶ್ರೀ ಶಂಕರಾಚಾರ್ಯರು ಸನಾತನ ಭಾರತ ಸಂಸ್ಕೃತಿಯನ್ನು ಇಡೀ ಜಗತ್ತಿಗೆ ಸಾರಿದ ಕೀರ್ತಿ ಶಂಕರಾಚಾರ್ಯರಿಗೆ ಸಲ್ಲುತ್ತದೆ ಅಲ್ಲದೆ, ಸನಾತನ ಧರ್ಮದ ಏಕತೆಗೆ ಅಡಿಪಾಯ ಹಾಕಿದವರಲ್ಲಿ ಶಂಕರಾಚಾರ್ಯರು ಪ್ರಮುಖರು, ಅಲ್ಲದೆ ಭಾರತದ ನಾಲ್ಕು ದಿಕ್ಕುಗಳಲ್ಲಿ ಶೃಂಗೇರಿ, ದ್ವಾರಕ, ಪುರಿ, ಮತ್ತು ಜ್ಯೋಷಿ ಮತವನ್ನು ಪ್ರತಿಷ್ಠಾಪಿಸಿ ಹಿಂದೂ ಧರ್ಮದ ಪುನರುತ್ಥಾನಕ್ಕೆ ಕಾರಣೀಭೂತರಾಗಿದ್ದಾರೆ, ಅವರು ರಚಿಸಿರುವ ಗೀತೆಗಳಲ್ಲಿ ಮಾನವನ ಬದುಕಿನ ಸಾರ್ಥಕತೆ ಅಡಗಿದೆ ಎಂದು ಹೇಳಿದರು.ಶ್ರೀ ಶಂಕರ ಸೇವಾ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ತಗಡೂರು ಗೋಪಿನಾಥ್ ಮಾತನಾಡಿ, ಶೃಂಗೇರಿ ಶ್ರೀಗಳು ಆಶೀರ್ವದಿಸಿ ನೀಡಿದ ಶ್ರೀ ಶಂಕರರ ಪ್ರತಿಮೆಯಿಂದ ಪ್ರೇರೇಪಿತರಾಗಿ ಶಂಕರ ಸೇವಾ ಪ್ರತಿಷ್ಠಾನ ಸ್ಥಾಪಿಸಿ ಮನೆಮನೆ ಶಂಕರ ಎಂಬ ಕಾರ್ಯಕ್ರಮ ಹಮ್ಮಿಕೊಂಡು ಶಂಕರಾಚಾರ್ಯರ ಸಾಧನೆಯನ್ನು ತಿಳಿಸಲಾಗುತ್ತಿದೆ ಎಂದರು. ಶ್ರೀ ಶ್ರೀಕಂಠೇಶ್ವರ ದೇಗುಲದ ಪ್ರಧಾನ ಅರ್ಚಕ ನೀಲಕಂಠ ದೀಕ್ಷಿತ್ ಮಾತನಾಡಿ, ಶ್ರೀ ಶಂಕರ ಸೇವಾ ಪ್ರತಿಷ್ಠಾನದ ಕಾರ್ಯಕ್ರಮಗಳನ್ನು ಪ್ರಶಂಸಿಸಿದರು. ವಾಗೀಶ್ವರಿ ಪಂಡಿತರಾದ ಸಂಗೀತ ವಿದ್ವಾನ್ ರಾ.ಸ. ನಂದಕುಮಾರ್ ಅವರು ಅವರ ತಂಡದೊಂದಿಗೆ ಶ್ರೀ ಶಂಕರಾಚಾರ್ಯ ವಿರಚಿತ ಗೀತೆಗಳನ್ನು ಹಾಡಿ ಸಭಿಕರ ಮನಸೂರೆಗೊಂಡರು.ನಂಜನಗೂಡಿನ ಸಮಸ್ತ ಜನತೆ ಪಾಲ್ಗೊಂಡು ನಾದಗಂಗೆಯಲ್ಲಿ ಮಿಂದು ಪುನೀತರಾದರು. ಅನನ್ಯ ಪ್ರಾರ್ಥಿಸಿದರು, ಕವಯಿತ್ರಿ ಶೋಭ ನಾಗಶಯನ ನಿರೂಪಿಸಿದರು, ಇಂದಿರೇಶ್ ಸ್ವಾಗತಿಸಿದರು, ರಾಮಮೋಹನ್ ಸಮಿತಿಯ ಸದಸ್ಯರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬದುಕಿನ ಸಂಕಷ್ಟ ದೂರ ಮಾಡುವ ಶಕ್ತಿ ಶಿವನಾಮಸ್ಮರಣೆಯಲ್ಲಿದೆ
ಗಾಡಿ ಓಟದ ಸ್ಪರ್ಧೆ: ಮಾರುತಿ ಆರಂಜ್ಯೋತಿ ತಂಡ ಪ್ರಥಮ