ಚನ್ನಪಟ್ಟಣ: ತಾಲೂಕಿನ ಕೃಷ್ಪಾಪುರ ಗ್ರಾಮದ ಬಳಿ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದ್ದ ಗ್ರಾಪಂ ಸದಸ್ಯೆ ಪತಿಯ ಶವದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಇದು ಆತ್ಮಹತ್ಯೆ ಅಲ್ಲ, ಕೊಲೆ ಎಂಬುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದ್ದು, ಪತ್ನಿಯೇ ಸುಪಾರಿ ಕೊಟ್ಟು ಗಂಡನನ್ನು ಕೊಲೆ ಮಾಡಿಸಿರುವ ವಿಚಾರ ಪೊಲೀಸ್ ತನಿಖೆಯಿಂದ ಹೊರ ಬಿದ್ದಿದೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಚಂದ್ರಕಲಾ, ಯೋಗೇಶ, ಶಾಂತರಾಜು, ಸೂರ್ಯಕುಮಾರ್, ಶಿವಲಿಂಗ, ಚಂದನ್‌ನನ್ನು ಪೊಲೀಸರು ಬಂಧಿಸಿದ್ದಾರೆ.
೩.೫ ಲಕ್ಷ ಸುಫಾರಿ: ಗ್ರಾಪಂ ಸದಸ್ಯೆ ಚಂದ್ರಕಲಾಗೆ ಬೆಂಗಳೂರಿನ ಯೋಗೀಶ್ ಎಂಬಾತನ ಜತೆ ಸಂಬಂಧವಿದ್ದು, ಈ ಹಿನ್ನೆಲೆಯಲ್ಲಿ ಗಂಡನ ಕೊಲೆಗೆ ಆಕೆ ಯೋಗೀಶ್ ಜತಗೂಡಿ ೩.೫ ಲಕ್ಷಕ್ಕೆ ಸುಫಾರಿ ನೀಡಿದ್ದಳು ಎನ್ನಲಾಗಿದ್ದು, ಇದೀಗ ಈಕೆಯೂ ಸೇರಿದಂತೆ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಅನುಮಾನ ವ್ಯಕ್ತಪಡಿಸಿದ್ದ ತಂದೆ:ನನ್ನ ಮಗ ಲೋಕೇಶ್‌ಗೂ ನನ್ನ ಸೊಸೆಗೂ ಜಮೀನು ಮಾರಾಟ ವಿಚಾರವಾಗಿ ಜಗಳ ನಡೆದಿದೆ. ಇದಲ್ಲದೇ ನನ್ನ ಸೊಸೆಗೆ ಬೇರೆಯವರ ಜತೆ ಸಂಬಂಧವಿದ್ದು, ನನ್ನ ಸೊಸೆ ಹಾಗೂ ಇತರರು ಸೇರಿ ನನ್ನ ಮಗನನ್ನು ಕೊಲೆ ಮಾಡಿದ್ದಾರೆ ಎಂದು ಲೋಕೇಶ್ ತಂದೆ ಶಂಕೆ ವ್ಯಕ್ತಪಡಿಸಿ ದೂರು ನೀಡಿದ್ದರು.
ಲೋಕೇಶ್ ಶವ ಪತ್ತೆ ಬಳಿಕ ಚನ್ನಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಚಂದ್ರಕಲಾ, ಇದು ಆತ್ಮಹತ್ಯೆ ಅಲ್ಲ ಕೊಲೆ ಎಂದು ವಾದಿಸಿದ್ದಳು. ಪೊಲೀಸರು ನನ್ನ ಸಹೋದರನನ್ನು ವಿಚಾರಣೆ ನೆಪದಲ್ಲಿ ಕರೆಸಿ, ಮೆಡಿಕಲ್ ಸ್ಟೋರ್‌ನಲ್ಲಿ ನನ್ನ ಸಹೋದರನೇ ವಿಷದ ಬಾಟಲು ಖರೀದಿಸಿದ್ದ ಎಂದು ಹೇಳಿಕೆ ನೀಡುವಂತೆ ಬಲವಂತ ಮಾಡಿದ್ದಾರೆ ಎಂದು ಆರೋಪಿಸಿದ್ದಳು.
ಪೊಟೋ೨೫ಸಿಪಿಟಿ2:
ಪೊಟೋ೨೫ಸಿಪಿಟಿ4:
ಪೊಟೋ೨೫ಸಿಪಿಟಿ6:
ಪೊಟೋ೨೫ಸಿಪಿಟಿ೬: