ಕನ್ನಡಪ್ರಭ ವಾರ್ತೆ ಬೆಂಗಳೂರು
ಪದ್ಮನಾಭನಗರದ ರಾಘವೇಂದ್ರ ಲೇಔಟ್‌ನ ನಿವಾಸಿ ಸೋಹನ್ ದಾಸ್ (18) ಮೃತ ದುರ್ದೈವಿ. ಈ ವೇಳೆ ಹಲ್ಲೆಗೊಳಗಾಗಿದ್ದ ಮೃತನ ತಾಯಿ ಸೀಮಾದಾಸ್‌ನನ್ನು ನೆರೆಹೊರೆಯವರ ಸಹಕಾರದಲ್ಲಿ ಪೊಲೀಸರು ರಕ್ಷಸಿದ್ದಾರೆ. ಈ ಘಟನೆ ಸಂಬಂಧ ಸೀಮಾಳ ಪ್ರಿಯಕರ ಸುದೀಪ್‌ನನ್ನು ಬಂಧಿಸಲಾಗಿದೆ.
3 ದಿನಗಳ ಹಿಂದೆ ಮನೆಯಲ್ಲಿ ಸುದೀಪ್ ಹಾಗೂ ಸೀಮಾ ಮಧ್ಯೆ ಜಗಳವಾಗಿದೆ. ಆಗ ಕೆರಳಿದ ಆತ, ತನ್ನ ಪ್ರಿಯತಮೆ ಹಾಗೂ ಆಕೆಯ ಪುತ್ರನಿಗೆ ಮನಬಂದಂತೆ ಹೊಡೆದಿದ್ದಾನೆ. ಈ ಹಲ್ಲೆಯಿಂದ ಸೋಹನ್ ಮೃತಪಟ್ಟಿದ್ದಾನೆ. ಬಳಿಕ ತನ್ನ ಸೀಮಾಳನ್ನು ಕೋಣೆಯಲ್ಲಿ ಕೂಡಿ ಹಾಕಿ ಆರೋಪಿ ಪರಾರಿಯಾಗಿದ್ದಾನೆ. 3 ದಿನಗಳ ಬಳಿಕ ಮೃತದೇಹದ ಕೊಳೆತ ವಾಸನೆ ಬಂದಾಗ ನೆರೆಹೊಯವರಿಗೆ ಘಟನೆ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಮೃತದೇಹದ ಜೊತೆ 3 ದಿನಗಳಿದ್ದ ತಾಯಿ:
ಹೀಗಿರುವಾಗ ತನ್ನ ಸ್ನೇಹಿತರ ಚಾರಿತ್ರ್ಯದ ಬಗ್ಗೆ ಸುದೀಪ್‌ಗೆ ಶಂಕೆ ಮೂಡಿದೆ. ಇದೇ ವಿಚಾರವಾಗಿ ಕಳೆದ 6 ತಿಂಗಳಿಂದ ಮನೆಯಲ್ಲಿ ಪ್ರತಿ ದಿನಗಳ ಅವರ ಮಧ್ಯೆ ಜಗಳವಾಗಿದೆ. ಈ ಗಲಾಟೆ ಬಗ್ಗೆ ನೆರೆಹೊರೆಯವರು ದೂರು ಹಿನ್ನಲೆಯಲ್ಲಿ ಮನೆ ಖಾಲಿ ಮಾಡುವಂತೆ ಸುದೀಪ್‌ಗೆ ಮಾಲಿಕ ಮಲ್ಲಯ್ಯ ತಾಕೀತು ಮಾಡಿದ್ದರು. ನ.16 ರಂದು ರಾತ್ರಿ 9 ಗಂಟೆಯಲ್ಲಿ ಸುದೀಪ್ ಮನೆಯಲ್ಲಿ ಜೋರು ಗಲಾಟೆ ನಡೆದು ನಿಶ್ಯಬ್ಧವಾಗಿದೆ. ಆಗಲೂ ಸಹ ಮನೆ ಮಾಲಿಕರಿಗೆ ಸುದೀಪ್ ಅಕ್ಕಪಕ್ಕದ ನಿವಾಸಿಗಳು ಕರೆ ಮಾಡಿ ದೂರು ಹೇಳಿದ್ದಾರೆ. ಆಗ ಅಪಾರ್ಟ್‌ಮೆಂಟ್ ಕಾವಲುಗಾರನಿಗೆ ಕರೆ ಮಾಡಿ ವಿಚಾರಿಸಿದಾಗ ಸುದೀಪ್ ಫ್ಲ್ಯಾಟ್‌ನಲ್ಲಿ ಶಾಂತವಾಗಿದೆ ಎಂದು ಮಲ್ಲಯ್ಯ ಅವರಿಗೆ ಆತ ಹೇಳಿದ್ದಾನೆ.
ಆ ಕೊಠಡಿಯ ಬಾಗಿಲನ್ನು ಸಹ ಕೀ-ಮೇಕರ್ನ ಸಹಾಯದಿಂದ ತೆರೆದು ಸೀಮಾ ರವರನ್ನು ರಕ್ಷಿಸಲಾಯಿತು. ಬಳಿಕ ಘಟನೆ ಬಗ್ಗೆ ವಿಚಾರಿಸಿದಾಗ ತಮ್ಮ ಹಾಗೂ ತಮ್ಮ ಮಗ ಸೋಹಮ್ ದಾಸ್‌ನ ಜೊತೆ ಜಗಳ ತೆಗೆದು ಸುದೀಪ್ ಹಲ್ಲೆ ನಡೆಸಿರುವುದಾಗಿ ತಿಳಿಸಿದರು. ಆಗ ಸ್ನಾನದ ಮನೆಯಲ್ಲಿ ಸೋಹಮ್ ದಾಸ್ ಮೃತದೇಹ ಪತ್ತೆಯಾಯಿತು. ಸೋಹನ್‌ಗೆ ಚಾಕುವಿನಿಂದ ಇರಿದು ಹಾಗೂ ಸುತ್ತಿಗೆಯಿಂದ ಹೊಡೆದು ಸುದೀಪ್ ಹತ್ಯೆ ಮಾಡಿ ಬಳಿಕ ಮನೆಗೆ ಬೀಗ ಹಾಕಿ ಆರೋಪಿ ಪರಾರಿಯಾಗಿದ್ದ. ಈ ಸಂಬಂಧ ಗಾಯಾಳು ಸೀಮಾ ದೂರು ಆಧರಿಸಿ ಬನಶಂಕರಿ ಠಾಣೆ ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆಗಿಳಿದರು. ಮರುದಿನವೇ ಆರೋಪಿ ಬಂಧನವಾಯಿತು ಎಂದು ಪೊಲೀಸರು ಹೇಳಿದ್ದಾರೆ.
ತನ್ನ ಸ್ನೇಹಿತೆ ಮೇಲೆ ಹಲ್ಲೆ ಹಾಗೂ ಆಕೆಯ ಪುತ್ರನ ಹತ್ಯೆಗೈದ ಬಳಿಕ ಧರ್ಮಸ್ಥಳಕ್ಕೆ ತೆರಳಿ ತಪ್ಪು ಕಾಣಿಕೆಯನ್ನು ಸಲ್ಲಿಸಿ ಕ್ಷಮಿಸುವಂತೆ ಆರೋಪಿ ಸುದೀಪ್ ಬಿನ್ನಹಿಸಿದ್ದ ಸಂಗತಿ ಗೊತ್ತಾಗಿದೆ. ಈ ಕೃತ್ಯ ಎಸಗಿದ ಬಳಿಕ ರಾತ್ರಿಯೇ ಧರ್ಮಸ್ಥಳಕ್ಕೆ ಆರೋಪಿ ತೆರಳಿದ್ದ. ಅಲ್ಲಿಂದ ಮರಳಿದ ಕೆಲವೇ ತಾಸಿನಲ್ಲಿ ಆತನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ನಾನು ಸೀಮಾಳಿಗಾಗಿ ಕುಟುಂಬ ತೊರೆದು ಬಂದೆ. ಆದರೆ ಆಕೆ ಚಾರಿತ್ರ್ಯ ಹೀನಳಾಗಿದ್ದಳು. ಹಲವು ಬಾರಿ ನೈತಿಕ ಬದುಕು ನಡೆಸುವಂತೆ ಹೇಳಿದರು ಕೇಳಲಿಲ್ಲ. ನನ್ನ ಜೀವನ ಹಾಳು ಮಾಡಿದ್ದಳು. ಇದಕ್ಕಾಗಿ ಆಕೆ ಮೇಲೆ ಹಲ್ಲೆ ನಡೆಸಿದೆ ಎಂದು ವಿಚಾರಣೆ ವೇಳೆ ಆರೋಪಿ ಸುದೀಪ್ ಹೇಳಿಕೆ ನೀಡಿರುವುದಾಗಿ ತಿಳಿದು ಬಂದಿದೆ.