ತುರುವೇಕೆರೆ:
ಒಟ್ಟು 12 ಸ್ಥಾನಗಳಲ್ಲಿ ಸಾಲಗಾರರ ಕ್ಷೇತ್ರದಿಂದ 11 ನಿರ್ದೇಶಕರ ಪೈಕಿ 9 ಮಂದಿ ಮುರುಳೀಕುಪ್ಪೆ ಶ್ರೀನಿವಾಸ್ ರವರ ತಂಡ ಜಯಗಳಿಸಿದರೆ, ಪ್ರತಿಸ್ಪರ್ಧಿ ತಂಡದಿಂದ ಇಬ್ಬರು ನಿರ್ದೇಶಕರು ಗೆದ್ದರೆ, ಸಾಲಗಾರರಲ್ಲದ ಕ್ಷೇತ್ರದಿಂದ ಓರ್ವರು ಜಯಗಳಿಸಿದ್ದಾರೆ. ಮುರುಳೀಕುಪ್ಪೆ ಶ್ರೀನಿವಾಸ್ ತಂಡದಲ್ಲಿ ಸಾಲಗಾರರ ಕ್ಷೇತ್ರದಿಂದ ಕಾಂತಮ್ಮ, ಗಿರೀಶ್, ಗಂಗವೀರಯ್ಯ, ತಿಮ್ಮೇಶ್, ಮಕ್ಬುಲ್ ಪಾಷಾ, ಯಶೋಧಾ, ಶ್ರೀನಿವಾಸಯ್ಯ, ಪಿ.ರಮೇಶ್, ಗೋವಿಂದಯ್ಯ ಜಯಗಳಿಸಿದರು. ಪ್ರತಿಸ್ಪರ್ಧಿಗಳಾಗಿದ್ದ ಪುಟ್ಟೇಗೌಡರ ತಂಡದಿಂದ ಪುಟ್ಟೇಗೌಡ, ಮಧುಸೂಧನ್ ಜಯಗಳಿಸಿದರೆ, ಸಾಲಗಾರರಲ್ಲದ ಕ್ಷೇತ್ರದಿಂದ ಸದಾಶಿವಯ್ಯ ಜಯಗಳಿಸಿದ್ದಾರೆ. ಚುನಾವಣಾಧಿಕಾರಿಗಳಾಗಿ ವೆಂಕಟೇಶ್ ಕರ್ತವ್ಯ ನಿರ್ವಹಿಸಿದ್ದರು. ಸಿಇಓ ಕೆ.ಟಿ.ಶ್ರೀನಿವಾಸ್ ಚುನಾವಣಾ ಪ್ರಕ್ರಿಯೆಯಲ್ಲಿ ಚುನಾವಣಾಧಿಕಾರಿಗಳಿಗೆ ಸಹಕರಿಸಿದರು.