ಮುಷ್ಟ್ರಹಳ್ಳಿ ಆರೋಗ್ಯ ಕೇಂದ್ರಕ್ಕೆ ಅನಾರೋಗ್ಯ!

KannadaprabhaNewsNetwork |  
Published : Dec 11, 2024, 12:47 AM IST
10ಕೆಬಿಪಿಟಿ.1.ಬಂಗಾರಪೇಟೆ ತಾಲೂಕಿನ ಮುಷ್ಟ್ರಹಳ್ಳಿ ಆರೋಗ್ಯ ಉಪ ಕೇಂದ್ರ ಬಾಗಿಲಿಗೆ ಬೀಗ ಹಾಕಿರುವುದರಿಂದ ಸುತ್ತಲೂ ಕಸದ ತೊಟ್ಟಿಯಾಗಿದೆ. | Kannada Prabha

ಸಾರಾಂಶ

ಆಂಧ್ರ ಮತ್ತು ತಮಿಳುನಾಡಿನ ಗಡಿ ಭಾಗಕ್ಕೆ ಅಂಟಿಕೊಂಡಿರುವ ತಾಲೂಕಿನ ದೋಣಿಮಡಗು ಗ್ರಾಪಂ ವ್ಯಾಪ್ತಿಯ ಮುಷ್ಟ್ರಹಳ್ಳಿಯಲ್ಲಿ ದಶಕಗಳ ಹಿಂದೆ ಪ್ರಾಥಮಿಕ ಆರೋಗ್ಯ ಉಪ ಕೇಂದ್ರವನ್ನು ತೆರೆಯಲಾಗಿತ್ತು, ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಕೊರತೆಯಿಂದ ಈಗ ಬಾಗಿಲು ಮುಚ್ಚಿದೆ.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಬಡವರ ಆರೋಗ್ಯ ರಕ್ಷಣೆಗಾಗಿ ಸರ್ಕಾರ ಹೆಚ್ಚು ಆದ್ಯತೆ ನೀಡುತ್ತಾ ದೂರದ ಗ್ರಾಪಂಗಳಲ್ಲಿಯೂ ಪ್ರಾಥಮಿಕ ಆರೋಗ್ಯ ಉಪ ಕೇಂದ್ರಗಳನ್ನು ತೆರೆದು ಅವರ ಸ್ಥಳದಲ್ಲೆ ಉತ್ತಮ ಚಿಕಿತ್ಸೆಗೆ ವ್ಯವಸ್ಥೆ ಮಾಡಿದೆ. ಆದರೆ ಕೆಲವು ಕಡೆ ಪ್ರಾಥಮಿಕ ಆರೋಗ್ಯ ಉಪ ಕೇಂದ್ರಗಳು ಇದ್ದರೂ ವೈದ್ಯರು ಹಾಗೂ ಸಿಬ್ಬಂದಿ ಕೊರತೆಯಿಂದಾಗಿ ಆರೋಗ್ಯ ಕೇಂದ್ರದ ಬಾಗಿಲು ಮುಚ್ಚಿರುವುದರಿಂದ ಬಡ ರೋಗಿಗಳು ಚಿಕಿತ್ಸೆಗಾಗಿ ಅಲೆಯುವಂತಾಗಿದೆ. ಆಂಧ್ರ ಮತ್ತು ತಮಿಳುನಾಡಿನ ಗಡಿ ಭಾಗಕ್ಕೆ ಅಂಟಿಕೊಂಡಿರುವ ತಾಲೂಕಿನ ದೋಣಿಮಡಗು ಗ್ರಾಪಂ ವ್ಯಾಪ್ತಿಯ ಮುಷ್ಟ್ರಹಳ್ಳಿಯಲ್ಲಿ ದಶಕಗಳ ಹಿಂದೆ ಪ್ರಾಥಮಿಕ ಆರೋಗ್ಯ ಉಪ ಕೇಂದ್ರವನ್ನು ತೆರೆಯಲಾಗಿತ್ತು, ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಕೊರತೆಯಿಂದ ಈಗ ಬಾಗಿಲು ಮುಚ್ಚಿದೆ. ಇದರಿಂದಾಗಿ ಗ್ರಾಮಸ್ಥರು ಕೇಂದ್ರದ ಮುಂದಿನ ಜಾಗವನ್ನು ಕಸ ಎಸೆಯಲು ಬಳಸುತ್ತಿದ್ದಾರೆ. ಹೀಗಾಗಿ ಆರೋಗ್ಯ ಉಪ ಕೇಂದ್ರದ ಸುತ್ತ ತ್ಯಾಜ್ಯ ಸಂಗ್ರಹವಾಗುತ್ತಿದೆ. 20 ಗ್ರಾಮಗಳಿಗೆ ಅನುಕೂಲ

ಈ ಪಂಚಾಯ್ತಿಯ ೨೦ಕ್ಕೂ ಹೆಚ್ಚಿನ ಗ್ರಾಮಗಳ ಗ್ರಾಮಸ್ಥರಿಗೆ ಆರೋಗ್ಯ ಕೆಟ್ಟರೆ ಪಕ್ಕದ ತೊಪ್ಪನಹಳ್ಳಿ ಗ್ರಾಪಂ ಆರೋಗ್ಯ ಕೇಂದ್ರಕ್ಕೆ ಹೋಗಬೇಕಾಗಿದೆ, ಆದರೆ ಅಲ್ಲಿಯೂ ವೈದ್ಯರು ಹಾಗೂ ಸಿಬ್ಬಂದಿ ಸಕಾಲಕ್ಕೆ ಸಿಗದೆ ಜನರು ತಮ್ಮ ಆರೋಗ್ಯ ರಕ್ಷಣೆಗಾಗಿ ೧೦ರಿಂದ ೧೫ ಕಿ.ಮೀ ದೂರ ಅಲೆಯುವಂತಾಗಿದೆ. ತೊಪ್ಪನಹಳ್ಳಿ ಕೇಂದ್ರ ನಿತ್ಯ ತೆರೆಯುತ್ತದೆ, ಆದರೆ ಸಕಾಲಕ್ಕೆ ವೈದ್ಯರು ಸಿಗದ ಕಾರಣ ಜನರು ಜ್ವರ,ಕೆಮ್ಮು,ನೆಗಡಿ ಬಂದರೂ ಪಕ್ಕದ ಆಂಧ್ರ ಇಲ್ಲವೆ ತಮಿಳುನಾಡಿನತ್ತ ಮುಖಮಾಡುತ್ತಿದ್ದಾರೆ. ಮುಷ್ಟ್ರಹಳ್ಳಿ ಉಪ ಕೇಂದ್ರಕ್ಕೆ ಬಣ್ಣ ಹಚ್ಚಲಾಗಿದೆ,ಆದರೆ ಬಾಗಿಲು ಮಾತ್ರ ತೆಗೆಯುತ್ತಿಲ್ಲ.

ಈ ಪ್ರದೇಶದ ಜನರೂ ಆಂಧ್ರದ ಕುಪ್ಪಂಗೆ ಹೋಗುವಂತಾಗಿದೆ. ಇದರ ನಡುವೆ ತೊಪ್ಪನಹಳ್ಳಿ ಪಂಃಯಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದೆ. ತಮಿಳುನಾಡಿನಿಂದ ಬಂದವರು ನಕಲಿ ಕ್ಲಿನಿಕ್‌ಗಳನ್ನು ತೆರೆದು ರಾಜರೋಷವಾಗಿ ಚಿಕಿತ್ಸೆ ನೀಡುತ್ತಿದ್ದಾರೆ. ಆದರೂ ತಾಲೂಕು ಆಡಳಿತ ಇತ್ತ ಕಡೆ ಗಮನಹರಿಸಿಲ್ಲ.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌