ಕನ್ನಡಪ್ರಭ ವಾರ್ತೆ ಸುರಪುರ
ಸಂಗೀತಕ್ಕೆ ಅದ್ಭುತ ಶಕ್ತಿಯಿದ್ದು, ಮನಸ್ಸಿಗೆ ನೆಮ್ಮದಿ, ಶಾಂತಿ ದೊರೆಯುತ್ತದೆ. ಸಂಗೀತಕ್ಕೆ ಜೀವ ಕೊಡುವ ಸಂಜೀವಿನಿ ಔಷಧದ ಬಲವಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಶರಣಬಸಪ್ಪ ಯಾಳವಾರ ಹೇಳಿದರು.ನಗರದ ತಿಮ್ಮಾಪುರದ ಜೈಹನುಮಾನ್ ದೇಗುಲದಲ್ಲಿ ಸಗರನಾಡು ಕಲಾವೇದಿಕೆ ರುಕ್ಮಾಪುರ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಬೆಂಗಳೂರು ಸಹಯೋಗದಲ್ಲಿ ನಡೆದ ನೂತನ ವರ್ಷದ ಸಂಗೀತ ಸಂಭ್ರಮ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸುರಪುರ ಸಂಸ್ಥಾನ ಸಂಗೀತ ಕಲಾವಿದರಿಗೆ ರಾಜಾಶ್ರಯ ನೀಡಿತ್ತು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಾಶ್ರಯ ಇಲ್ಲದಿರುವ ಇಂದು ಸುಗೂರೇಶ್ವರ ಮಠ ಮತ್ತು ನಿಷ್ಠಿ ಕಡ್ಲಪ್ಪನವರ ವಿರಕ್ತಮಠಗಳು ಸಂಗೀತ ಕಾರ್ಯಕ್ರಮ ಏರ್ಪಡಿಸುವ ಮೂಲಕ ಸಂಗೀತಗಾರರನ್ನು ಪ್ರೋತ್ಸಾಹಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು. ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಸೂಗೂರೇಶ ವಾರದ ಮತ್ತು ಸಗರನಾಡು ಕಲಾ ವೇದಿಕೆ ಅಧ್ಯಕ್ಷ ರಾಜಶೇಖರ ಗೆಜ್ಜಿ ಮಾತನಾಡಿದರು. ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿವಶರಣಯ್ಯ ಸ್ವಾಮಿ ಬಳುಂಡಗಿ ಮಠ ಅಧ್ಯಕ್ಷತೆ ವಹಿಸಿದ್ದರು.ಇತಿಹಾಸ ತಜ್ಞ, ಪಿಎಸ್‌ಐ ಕೃಷ್ಣ ಸುಬೇದಾರ, ಸಿದ್ದಲಿಂಗಯ್ಯ ಸ್ವಾಮಿ ಕಡ್ಲಪ್ಪ ಮಠ, ಚೆನ್ನಪ್ಪ ಗುಂಡಾನೋರ, ಮಯೂರ ಮಹೇಂದ್ರಕರ್, ಭೀಮರಾಯ ಪತಂಗೆ ಮತ್ತು ವಸಂತಕುಮಾರ್ ಬಣಗಾರ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ಪತ್ರಕರ್ತ ಮಲ್ಲಿಕಾರ್ಜುನ ಗುಳಗಿ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ಕಲಾವಿದರಾದ ಶಿವಶರಣಯ್ಯ ಸ್ವಾಮಿ ನಿಂಗದಳ್ಳಿ ಕಲಬುರ್ಗಿ, ಪ್ರಾಣೇಶ್ ರಾವ್ ಕುಲಕರ್ಣಿ, ಮೋಹನರಾವ್ ಮಾಳದಕರ್, ಶರಣಕುಮಾರ ಯಾಳಗಿ, ದೇವರಾಜ್ ಯರಕಿಹಾಳ, ಕೊಡೇಕಲ್, ಸೋಮನಾಥ ಯಾಳಗಿ, ಉಮೇಶ ಯಾದವ್, ಜ್ಞಾನೇಶ್ವರ ಪಾಣಿಬಾತೆ, ಜಗದೀಶ್ ಪತ್ತಾರ್, ಮಹೇಶ್ ಗೋಗಿ, ಶಿವಶಂಕರ್ ಅಲ್ಲೂರ್, ಕವಿತಾ ಪರತಗಿ, ಸುಸುಮ ಮಹೇಂದ್ರಕರ, ತಾತಯ್ಯ ಗೊಲ್ಲರು ಸಂಗೀತ ಸೇವೆ ನೀಡಿದರೆ ರಮೇಶ್ ಕುಲಕರ್ಣಿ, ಸುರೇಶ್ ಅಂಬೂರೆ, ಸುರೇಶ್ ಹೂಗಾರ್ ತಬಲಾ ಸಾಥ್ ನೀಡಿದರು.ಕಲಾವಿದ ರಮೇಶ್ ಕುಲಕರ್ಣಿ ಸ್ವಾಗತಿಸಿದರು. ಕಸಾಪ ತಾಲೂಕು ಗೌರವ ಕಾರ್ಯದರ್ಶಿ ಎಚ್.ವೈ.ರಾಠೋಡ್ ನಿರೂಪಿಸಿದರು. ಸುರೇಶ್ ಅಂಬುರೆ ವಂದಿಸಿದರು.