ಕೊಪ್ಪಳ: ಒತ್ತಡದ ಜೀವನದಲ್ಲಿ ಸಂಗೀತ ಕಲಿಕೆ, ಕೇಳುವುದರಿಂದ ಮನಸ್ಸಿಗೆ ಶಾಂತಿ ದೊರಕುತ್ತದೆ. ಇದರಿಂದ ಸಂಸ್ಕಾರ ಬರುತ್ತದೆ ಎಂದು ಶ್ರೀಗುರುಕೃಪಾ ಸಂಗೀತ ಹಾಗೂ ಸಾಂಸ್ಕೃತಿಕ ಕಲಾ ಸಂಘದ ಅಧ್ಯಕ್ಷ ದಾನಪ್ಪ ಕವಲೂರು ಹೇಳಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪತ್ರಕರ್ತ ದತ್ತು ಕಮ್ಮಾರ ಮಾತನಾಡಿ, ಮಕ್ಕಳು ಓದಿನ ಜತೆಗೆ ಸಂಗೀತ ಕಲಿಯುವುದನ್ನು ರೂಢಿಸಿಕೊಳ್ಳಬೇಕು ಎಂದರು.
ವಿಶ್ವಗುರು ಶ್ರೀಬಸವೇಶ್ವರ ಟ್ರಸ್ಟಿನ ಮುಖಂಡ ರಾಜೇಶ್ ಸಸಿಮಠ ಮಾತನಾಡಿ, ಮಕ್ಕಳಿಗೆ ಮೊಬೈಲ್ ಕೊಡುವುದನ್ನು ಬಿಟ್ಟು ಶರಣರ ವಚನ, ದಾಸರ ಕೀರ್ತನ ಕೇಳಿಸುವುದು ಹಾಗೂ ಕಲಿಸುವುದು ಪ್ರತಿಯೊಬ್ಬ ತಂದೆ-ತಾಯಂದಿರ ಕರ್ತವ್ಯ. ಇಂತಹ ಸಂಸ್ಕಾರದಿಂದ ಮಕ್ಕಳು ಭವಿಷ್ಯದಲ್ಲಿ ಉತ್ತಮ ರೀತಿಯಲ್ಲಿ ಬದುಕಲು ಅನುಕೂಲವಾಗುತ್ತದೆ ಎಂದು ಅಭಿಪ್ರಾಯಪಟ್ಟರು.ಹಿರಿಯ ಕಲಾವಿದ ಮಹಾದೇವಪ್ಪ ವಂದಾಲ್ ಹಾಗೂ ಶ್ರೀನಿವಾಸ್ ಜೋಶಿ ಅವರನ್ನು ಸಂಸ್ಥೆಯಿಂದ ಸನ್ಮಾನಿಸಲಾಯಿತು.
ಸಂಸ್ಥೆಯ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಶ್ರೀಗುರುಕೃಪಾ ಸಂಗೀತ ಹಾಗೂ ಸಾಂಸ್ಕೃತಿಕ ಕಲಾಸಂಘದ ಕಾರ್ಯದರ್ಶಿ ಶಕುಂತಲಾ ಬೆನ್ನಾಳ, ಸ್ಪಂದನಾ ಹಿಂದಲಮನಿ, ವೈಭವಿ ಕೋಡ್ಬಳೆ ಸೇರಿದಂತೆ ಮೊದಲಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.