ಕನ್ನಡ ಕವನಗಳನ್ನು ಜನಪ್ರಿಯವಾಗಿಸಿದ ಸಂಗೀತ

KannadaprabhaNewsNetwork |  
Published : Dec 04, 2024, 12:31 AM IST
ಪೊಟೋ: 2ಎಸ್‌ಎಂಜಿಕೆಪಿ03ಶಿವಮೊಗ್ಗದ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಸಮಿತಿ, ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ದೇವಂಗಿ ಟಿ. ಚಂದ್ರಶೇಖರ ದತ್ತಿ ಮತ್ತು ರಂಗಗೀತೆಗಳ ಕಲಿಕಾ ಶಿಬಿರದ ಸಮಾರೋಪವನ್ನು ಜನಪದ ವಾದ್ಯಗಳನ್ನು ನುಡಿಸುವ ಮೂಲಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ. ಮಂಜುನಾಥ ಉದ್ಘಾಟಿಸಿದರು. | Kannada Prabha

ಸಾರಾಂಶ

ದೇವಂಗಿ ಟಿ.ಚಂದ್ರಶೇಖರ ದತ್ತಿ ಮತ್ತು ರಂಗಗೀತೆಗಳ ಕಲಿಕಾ ಶಿಬಿರದ ಸಮಾರೋಪದಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಮಂಜುನಾಥ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಕನ್ನಡ ಸಾಹಿತ್ಯ ಪ್ರಕಾರದಲ್ಲಿ ಕಾವ್ಯಗಳು ಜನಪ್ರಿಯ ಆಗುವಲ್ಲಿ ಸಂಗೀತ ಮತ್ತು ಗಾಯಕರ ಪಾತ್ರ ಮಹತ್ವದಾಗಿ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಿ.ಮಂಜುನಾಥ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಸಮಿತಿ, ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ಸಹಯೋಗದಲ್ಲಿ ನಡೆದ ದೇವಂಗಿ ಟಿ.ಚಂದ್ರಶೇಖರ ದತ್ತಿ ಮತ್ತು ರಂಗಗೀತೆಗಳ ಕಲಿಕಾ ಶಿಬಿರದ ಸಮಾರೋಪವನ್ನು ಜನಪದ ವಾದ್ಯಗಳನ್ನು ನುಡಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಪ್ರಖ್ಯಾತ ಗಾಯಕರಾಗಿದ್ದ ದೇವಂಗಿ ಟಿ.ಚಂದ್ರಶೇಖರ್ ಸಾಧನೆ ಅಪಾರ. ರೇಡಿಯೋ ಬಂದ ಕಾಲದಲ್ಲಿ ತಮ್ಮ ಸುಮದುರ ಕಂಠದಿಂದ ಕುವೆಂಪು ಒಳಗೊಂಡಂತೆ ಅನೇಕ ಕವಿಗಳ ಕವನಗಳಿಗೆ ರಾಗ ಸಂಯೋಜನೆ ಮಾಡಿ ಹಾಡಿದರು. ಅದರಿಂದ ಆ ಹಾಡುಗಳು ಜನಮಾನಸದಲ್ಲಿ ಹಸಿರಾಗಿಸುವಲ್ಲಿ ಅವರ ಪಾತ್ರ ಅಪಾರವಾಗಿತ್ತು ಎಂದು ಹೇಳಿದರು.

ದತ್ತಿದಾನಿಗಳಾದ ತೀರ್ಥಹಳ್ಳಿ ದೇವಂಗಿಯ ಡಿ.ಸಿ.ಚೈತನ್ಯದೇವ, ಡಾ.ಚೈತ್ರಾ, ಶ್ರೀನಿವಾಸ, ಡಾ.ಡಿ.ಸಿ.ಮೈತ್ರೇಯ, ಸುರೇಂದ್ರ ಎಚ್.ಡಿ. ಇವರ ಆಶಯದಂತೆ ವ್ಯಕ್ತಿ, ವ್ಯಕ್ತಿತ್ವಕ್ಕೆ ಸಾಹಿತ್ಯ ಸಂಗೀತದ ಪ್ರಭಾವ ಕುರಿತು ಉಪನ್ಯಾಸ ಏರ್ಪಡಿಸಲಾಗಿತ್ತು.

ಸಂಗೀತ, ಸಾಹಿತ್ಯ, ನಾಟಕ ಸೇರಿ ಎಲ್ಲಾ ಪ್ರಕಾರಗಳು ವೈಭವೀಕರಣ, ಸಂತೋಷ ಎಲ್ಲವನ್ನೂ ಒಳಗೊಂಡಿರುತ್ತದೆ. ಗ್ರೀಕ್, ರೋಮನ್ ನಾಟಕಗಳು ಹೆಚ್ಚು ಪ್ರಭಾವ ಬೀರಿದ್ದರು ಸಹಿತ ಆಧುನಿಕ ರಂಗಭೂಮಿಗೆ ಒಳ್ಳೆಯ ನಾಟಕ ಬರೆಯುವವರು ವಿರಳರಾಗುತ್ತಿದ್ದಾರೆ. ಭಾಷಾಂತರ ನಾಟಕಗಳು ಅನಿವಾರ್ಯವಾಗಿದೆ. ನಾಟಕ ಕಲಿಸುವ ವೇದಿಕೆಗಳು ಕಲಿಯುವ ಆಸಕ್ತ ಯುವಜನರು ಹೆಚ್ಚಾಗಬೇಕು. ಸಾಂಸ್ಕೃತಿಕ ಚಟುವಟಿಕೆಗಳು ವೇಗವಾಗಿ ನಡೆಯಬೇಕು. ಹಾಗಾದಾಗ ಮೊಬೈಲ್ ಹಂಗು ತೊರೆಯಬಹುದು ಎಂದು ಜಗದೀಶ್.ಆರ್ (ಜಾಣಿ) ಅಭಿಪ್ರಾಯ ವ್ಯಕ್ತಪಡಿಸಿದರು.

ಕಾಲೇಜು ಪ್ರಾಂಶುಲರಾದ ಪ್ರೊ ಟಿ. ಅವಿನಾಶ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಡಾ.ಪ್ರಕಾಶ್ ಮರಗನಳ್ಳಿ, ಡಾ.ಜಿ.ಆರ್.ಲವ, ಡಿ.ಗಣೇಶ್, ಸ್ವಾಮಿ, ಬಿ. ಚಂದ್ರೇಗೌಡ, ನಾರಾಯಣ, ರಾಮಪ್ಪಗೌಡರು, ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!