ಭಯೋತ್ಪಾದಕರ ವಿರುದ್ಧ ಸಿಡಿದ ಮುಸ್ಲಿಂ ಕಮಿಟಿ

KannadaprabhaNewsNetwork |  
Published : Apr 28, 2025, 11:45 PM IST
28ಕೆಕೆಆರ್10:ಕೊಪ್ಪಳ ಜಿಲ್ಲೆಯ ಯಲಬುರ್ಗಾ, ಕುಕನೂರು ತಾಲೂಕು ಮುಸ್ಲಿಂ ಜಮಾ-ಅತ್ ಕಮಿಟಿ, ಆಹಲೆ ಸುನ್ನತ್ ಜಾಮೀಯಾ ಮಸ್ಜೀದ್ ಕಮಿಟಿಯಿಂದ ಯಲಬುರ್ಗಾ ಪಟ್ಟಣದ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಯಲ್ಲಿ ೨೬ ಜನ ಮೃತಪಟ್ಟಿರುವುದು ಆಘಾತಕಾರಿ ಸಂಗತಿಯಾಗಿದೆ. ಇದು ಹೇಡಿತನ ಮತ್ತು ಅಮಾನವಿಯ ಕೃತ್ಯವಾಗಿದೆ.

ಕೊಪ್ಪಳ(ಯಲಬುರ್ಗಾ):

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿ ಖಂಡಿಸಿ ಯಲಬುರ್ಗಾ, ಕುಕನೂರು ತಾಲೂಕು ಮುಸ್ಲಿಂ ಜಮಾ-ಅತ್ ಕಮಿಟಿ, ಆಹಲೆ ಸುನ್ನತ್ ಜಾಮೀಯಾ ಮಸ್ಜೀದ್ ಕಮಿಟಿಯಿಂದ ಯಲಬುರ್ಗಾ ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ತಹಸೀಲ್ದಾರ್‌ ಮುಖಾಂತರ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.

ಪಟ್ಟಣದ ಜಾಮೀಯಾ ಮಸ್ಜೀದ್‌ದಿಂದ ಟಿಪ್ಪು ಸುಲ್ತಾನ್ ವೃತ್ತ, ಕನಕದಾಸ ವೃತ್ತ ಹಾಗೂ ಪುನೀತ್ ಸರ್ಕಲ್ ಮಾರ್ಗವಾಗಿ ಕಿತ್ತೂರು ರಾಣಿ ಚೆನ್ನಮ್ಮ ವೃತ್ತಕ್ಕೆ ಪ್ರತಿಭಟನಾ ಮೆರವಣಿಗೆ ಆಗಮಿಸಿ, ಕೃತ್ಯದಲ್ಲಿ ಭಾಗಿಯಾದವರ ವಿರುದ್ಧ ಘೋಷಣೆ ಕೂಗಲಾಯಿತು.

ಸಮಾಜದ ಹಿರಿಯರಾದ ಎಚ್.ಎಚ್. ಹಿರೇಮನಿ, ಅಖ್ತರ್‌ಸಾಬ್ ಖಾಜಿ ಮಾತನಾಡಿ, ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಯಲ್ಲಿ ೨೬ ಜನ ಮೃತಪಟ್ಟಿರುವುದು ಆಘಾತಕಾರಿ ಸಂಗತಿಯಾಗಿದೆ. ಇದು ಹೇಡಿತನ ಮತ್ತು ಅಮಾನವಿಯ ಕೃತ್ಯವಾಗಿದ್ದು, ಈ ಘಟನೆಯಲ್ಲಿ ಮೃತಪಟ್ಟವರಿಗೆ ತೀವ್ರ ಸಂತಾಪ ಸೂಚಿಸುತ್ತೇವೆ. ದಾಳಿಯು ಘೋರ ಕೃತ್ಯವಾಗಿದ್ದು, ಶಾಂತವಾಗಿದ್ದ ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರ ದಾಳಿ‌ ನಡೆದಿರುವುದು ಖಂಡನೀಯ. ಈ ಕೃತ್ಯದ ಹಿಂದೆ ಇರುವವರನ್ನು ಆದಷ್ಟು ಶೀಘ್ರವೇ ಬಂಧಿಸಿ ತಕ್ಕ ಶಿಕ್ಷೆ ನೀಡಬೇಕು. ಭಯೋತ್ಪಾದನೆ ವಿರುದ್ಧ ಇನ್ನಷ್ಟು ಕಠಿಣ ಕ್ರಮ ಕೈಗೊಂಡು ದೇಶದಲ್ಲಿ ಶಾಂತಿ ವಾತಾವರಣ ನಿರ್ಮಿಸಬೇಕು. ಸೌರ್ಹದತೆ ನೆಲೆಸಲು ಅಗತ್ಯ ಕ್ರಮ ವಹಿಸಬೇಕು. ಇಂತಹ ಕೃತ್ಯವನ್ನು ಸರ್ಕಾರಗಳು ಗಂಭೀರವಾಗಿ ಪರಿಗಣಿಸಿ ಕೃತ್ಯ ಎಸಗಿರುವ ಉಗ್ರ ಸಂಘಟನೆಗಳನ್ನು ಗುರುತಿಸಿ ಅವುಗಳನ್ನು ಸೆದೆಬಡಿಯಬೇಕು ಎಂದು ಆಗ್ರಹಿಸಿದರು.

ಪ್ರಮುಖರಾದ ಬಾಬುಸಾಬ್ ಕುಂದಗೊಳ, ಮಹೆಬೂಬ್‌ಸಾಬ್ ಮಕಾಂದಾರ, ಎಂ.ಎಫ್. ನದಾಫ್‌, ರಹೆಮನ್‌ಸಾಬ್ ನಾಯಕ, ಬಾಬುಸಾಬ್ ಮಂಡಲಗಿರಿ, ಪಾಷಾಸಾಬ್ ಕನಕಗಿರಿ, ಮಹೆಮೂದ್‌ಮಿಯಾ ಖಾಜಿ, ತಾಜುದ್ದಿನ್‌ಸಾಬ್ ಮಕಾನದಾರ, ರಾಶಿದ್‌ಖಾಜಿ, ಮೈನು ಎಲಿಗಾರ, ಮೊಹಮ್ಮದ್ಅಲಿ ಸಂಕನೂರ, ಶಾಬುದ್ದಿನ್‌ ಎಲಿಗಾರ, ಎಂ.ಡಿ. ರಫಿ ಕೊಪ್ಪಳ, ಪಾಷಾ ಗುಳೆದಗುಡ್ಡ, ಅಬ್ಬಾಸ್ ಕೊತ್ವಾಲ್, ಮೈನುಸಾಬ್ ವಣಗೆರಿ, ಅಜ್ಮೀರ್ ಹಿರೇಮನಿ, ಹುಸೆನ್ ನಿಲಗಾರ, ರಾಜಸಾಬ್ ನಾಲಬಂದ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈತರ ಯೂರಿಯಾ ಕದ್ದು ತಮಿಳ್ನಾಡಿಗೆ ಸಾಗಣೆ ದಂಧೆ ಪತ್ತೆ
ಗೃಹಲಕ್ಷ್ಮಿ ಸ್ಕೀಂ ₹5000 ಕೋಟಿ ಹಗರಣ: ಬಿಜೆಪಿ