ಕನ್ನಡಪ್ರಭ ವಾರ್ತೆ ಹೊನ್ನಾಳಿ
ಸಭೆಯಲ್ಲಿ ಡಿವೈಎಸ್‌ಪಿ ರುದ್ರಪ್ಪ ಉಜ್ಜನಕೋಪ್ಪ ಹಾಗೂ ಉಪವಿಭಾಗಾಧಿಕಾರಿ ವಿ.ಅಭಿಷೇಕ್ ಎರಡು ಪಂಗಡಗಳ ಮುಖಂಡರುಗಳ ವಾದಗಳನ್ನು ಆಲಿಸಿದರು. ಅನಂತರ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಕಾಪಾಡಿಕೊಂಡು ಹೋಗುವಂತೆ ತಿಳಿಸಿದರು.
ಸುನ್ನಿ ಜಮಾತ್ ಮುಖಂಡರು ಮಾತನಾಡಿ, ತಮ್ಮ ಪಂಗಡಕ್ಕೆ ಸೇರಿದ ನಾಲ್ಕು ಮಸೀದಿಗಳಿವೆ. ಅಲ್ಲಿ ಮುಸ್ಲಿಂ ಸಮುದಾಯ ಎಲ್ಲ ಪಂಗಡಗಳಿಗೆ ನಮಾಜ್ ಮಾಡಲು ಅವಕಾಶ ಮಾಡಿಕೊಡಲಾಗಿದೆ. ಆದರೆ, ಇತ್ತೀಚೆಗೆ ತಬ್ಲಿಕ್ ಪಂಗಡಕ್ಕೆ ಸೇರಿದ ಎರಡ್ಮೂರು ಕುಟುಂಬದವರು ಸೇರಿ ಪ್ರತ್ಯೇಕ ಮಸೀದಿ ನಿರ್ಮಾಣಕ್ಕೆ ಮುಂದಾಗಿದ್ದರಿಂದ ವಿವಾದ ಸೃಷ್ಠಿಯಾಗಿದೆ ಎಂದು ಸುನ್ನತ್ ಜಮಾತ್ ಪಂಗಡದವರು ಹೇಳಿದರು.ನಮ್ಮ ಧರ್ಮಾಚರಣೆ ನಮ್ಮ ಹಕ್ಕು. ಅದಕ್ಕೆ ಯಾರೂ ವಿರೋಧ ಮಾಡಬಾರದು ಎಂದು ತಬ್ಲಿಕ್ ಪಂಗಡದವರು ವಾದ ಮಾಡಿದರು. ಈ ವಿಷಯವಾಗಿ ಕಳೆದ 15 ದಿನಗಳಿಂದ ಎರಡೂ ಪಂಗಡಗಳ ನಡುವೆ ವಿವಾದ ಉಂಟಾಗಿ, ಪೊಲೀಸ್ ಠಾಣೆ ಮೆಟ್ಟಿಲೇರಿದ್ದರಿಂದ ಸಿಪಿಐ ಸುನಿಲ್ ಕುಮಾರ್ ಅವರು ಶಾಂತಿ-ಸೌಹಾರ್ದ ಸಭೆ ಆಯೋಜಿಸಿದ್ದರು.
ಸಭೆಯಲ್ಲಿ ತಹಸೀಲ್ದಾರ್ ಪಟ್ಟರಾಜ ಗೌಡ, ತಾಪಂ ಇಒ ಪ್ರಕಾಶ್, ಪುರಸಭೆ ಮುಖ್ಯಾಧಿಕಾರಿ ಟಿ.ಲೀಲಾವತಿ, ಪೊಲೀಸ್ ಸಿಬ್ಬಂದಿ ಜಗದೀಶ್, ಸುನ್ನತ್ ಜಮಾತ್ ಹಾಗೂ ತಬ್ಲಿಕ್ ಪಂಗಡಗಳ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.