ಅಪ್ರಾಪ್ತರು ಸಿಕ್ಕ ತಕ್ಷಣ ಮುಂದಿನ ಕಾನೂನು ಕ್ರಮ ನಡೆಯಬೇಕು. ಆದರೆ ಅವರನ್ನು ಕರೆತಂದ ಎಂಟು ಮಂದಿಯನ್ನು ಬಂಧಿಸಿಲ್ಲ. ರಾಜ್ಯ ಸರ್ಕಾರ ಹಾಗೂ ಸಂಬಂಧಿತ ಇಲಾಖೆಗಳು ಅಕ್ರಮದ ವಿರುದ್ಧ ಕೇಸ್ ದಾಖಲಿಸಬೇಕು
ಬಂಗಾರಪೇಟೆ: ಬಿಹಾರದಿಂದ ಬಂದ ಅಪ್ರಾಪ್ತ 42 ಮುಸ್ಲಿಂ ಬಾಲಕರ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಬೇಕು ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಆಗ್ರಹಿಸಿದರು.
ಈ ಪ್ರಕರಣವನ್ನು ಒತ್ತಡಗಳಿಗೆ ಮಣಿಯದೆ ತನಿಖೆ ನಡೆಸಿ ಅವರ ಬಗ್ಗೆ ಸತ್ಯಾಂಶವನ್ನು ಬೆಳಕಿಗೆ ತರಬೇಕೆಂದು ಮುತಾಲಿಕ್ ಅವರು ನಗರದ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ರವಿಕುಮಾರ್‌ಗೆ ಮನವಿ ಸಲ್ಲಿಸಿದರು.ಅಪ್ರಾಪ್ತ ಬಾಲಕರ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ನಡೆಯುತ್ತಿದೆ ಎಂಬ ಅನುಮಾನ ವ್ಯಕ್ತಪಡಿಸಿದ ಮುತಾಲಿಕ್, ಬಾಲಕರನ್ನು ಕರೆತಂದವರ ವಿರುದ್ಧ ಇನ್ನೂ ಪ್ರಕರಣ ದಾಖಲಿಸದಿರುವುದನ್ನು ಪ್ರಶ್ನಿಸಿದರು. ಅಪ್ರಾಪ್ತರು ಸಿಕ್ಕ ತಕ್ಷಣ ಮುಂದಿನ ಕಾನೂನು ಕ್ರಮ ನಡೆಯಬೇಕು. ಆದರೆ ಅವರನ್ನು ಕರೆತಂದ ಎಂಟು ಮಂದಿಯನ್ನು ಬಂಧಿಸಿಲ್ಲ. ರಾಜ್ಯ ಸರ್ಕಾರ ಹಾಗೂ ಸಂಬಂಧಿತ ಇಲಾಖೆಗಳು ಅಕ್ರಮದ ವಿರುದ್ಧ ಕೇಸ್ ದಾಖಲಿಸಬೇಕು ಎಂದು ಹೇಳಿದರು.
ಮುತಾಲಿಕ್ ನೀಡಿದ ದೂರನ್ನು ಸ್ವೀಕರಿಸಿದ ಪೊಲೀಸ್ ಇನ್‌ಸ್ಪೆಕ್ಟರ್ ರವಿಕುಮಾರ್ ಅವರು ಕಾನೂನುಬದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಸುಂದರೇಶ್ ನರಗಲ್ ದೊಡ್ಡಬಳ್ಳಾಪುರ ಗುರೂಜಿ ಶ್ರೀನಿವಾಸ್, ರಮೇಶ್ ಗೌಡ ಸೇರಿ ವಿವಿಧ ಹಿಂದೂಪರ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು. ಶಾಂತ ಜೀವ ಜ್ಯೋತಿ ಜಿಲ್ಲಾ ಸಂಯೋಜಕ ಮಂಜುನಾಥ್ ಅವರು 112ಕ್ಕೆ ಕರೆ ಮಾಡಿ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ 42 ಅಪ್ರಾಪ್ತ ಬಾಲಕರು ಪತ್ತೆಯಾಗಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.
-5ಕೆಬಿಪಿಟಿ.2.
ಬಂಗಾರಪೇಟೆ ಪೊಲೀಸರಿಗೆ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಮನವಿ ಸಲ್ಲಿಸಿದರು
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.