ಕನ್ನಡಪ್ರಭವಾರ್ತೆ ತಿಪಟೂರು
ಸಂಭ್ರಮಾಚರಣೆಯಲ್ಲಿ ಮಾತನಾಡಿದ ಮುಖಂಡರುಗಳು ಬಿಜೆಪಿಗೆ ಇತಿಹಾಸದಲ್ಲಿಯೇ ಇದೊಂದು ಅಭೂತಪೂರ್ವವಾದ ದಿನ. ಮತದಾರರು ಅಭಿವೃದ್ಧಿಗೆ ಮಾತ್ರ ಬೆಂಬಲಿಸುತ್ತಾರೆ. ಅಭಿವೃದ್ಧಿ ಮಾಡದ ಸರ್ಕಾರಗಳನ್ನು ಸಹಿಸುವುದಿಲ್ಲ ಎಂಬುದು ಈ ಫಲಿತಾಂಶಗಳಿಂದ ವ್ಯಕ್ತವಾಗಿದೆ. ಪಶ್ಚಿಮ ಬಂಗಾಲದಲ್ಲಿ ಬಂದಿರುವ ಗೆಲುವಿಗೆ ಮುಖಂಡರುಗಳು ಹಾಗೂ ಕಾರ್ಯಕರ್ತರ ಶ್ರಮ ಬಹಳಷ್ಟಿದೆ. ಸಹಸ್ರಾರು ಕಾರ್ಯಕರ್ತರ ಬಲಿದಾನದಿಂದ ಈ ಫಲಿತಾಂಶ ಬಂದಿದೆ. ರಾಜ್ಯದಲ್ಲಿಯೂ ಅಭಿವೃದ್ಧಿ ಮಾಡದ ಕೇವಲ ಭ್ರಷ್ಟಾಚಾರದಿಂದ ತುಂಬಿರುವ ಸರಕಾರ ಆಡಳಿತ ನಡೆಸುತ್ತಿದ್ದು ಜನರು ಈ ಸರಕಾರವನ್ನೂ ಕಿತ್ತೊಗೆಯುವ ದಿನಗಳು ದೂರವಿಲ್ಲ. ಐದು ರಾಜ್ಯಗಳಲ್ಲಿ ನಡೆದ ಚುನಾವಣೆಯ ಫಲಿತಾಂಶ ಬಂದಿದ್ದು ಮೂರು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ ಎಂದರು. ಈ ಸಂದರ್ಭದಲ್ಲಿ ತಾಲೂಕು ಘಟಕದ ಅಧ್ಯಕ್ಷ ಸತೀಶ್, ಪ್ರಸನ್ನಕುಮಾರ್, ರಾಮ್‌ಮೋಹನ್, ಪದ್ಮತಿಮ್ಮೇಗೌಡ, ಜಿಲ್ಲಾ ಯುವಮೋರ್ಜಾ ಸದಸ್ಯ ವಿಶ್ವದೀಪು, ಮುಖಂಡರಾದ ಬಿಸಲೇಹಳ್ಳಿ ಜಗದೀಶ್, ಸಿಂಗ್ರಿದತ್ತ ಪ್ರಸಾದ್, ಜಗಜ್ಯೋತಿ ಲಿಂಗರಾಜು, ಗುಲಾಬಿಸುರೇಶ್, ಚೇತನ್, ಸತ್ಯಗಣಪತಿ ಸಂಘದ ಅಧ್ಯಕ್ಷ ಶ್ರೀಕಂಠ, ಸ್ವಾಮಿ, ದಿಲೀಪ್‌ಸೂಗೂರು, ಬಾಲರಾಜು, ಹರಿಬಾಬು, ಸ್ವಾಮಿ, ಮಂಜುನಾಥ್, ಸಿದ್ದೇಶ್, ಹರ್ಷ, ಸೇರಿದಂತೆ ನೂರಾರು ಕಾರ್ಯಕರ್ತರು ಹಾಜರಿದ್ದರು.