ಪರಸ್ಪರ ಹೊಂದಾಣಿಕೆ ಗುಣವೇ ಸುಖೀ ದಾಂಪತ್ಯಕ್ಕೆ ಮೂಲಾಧಾರ

KannadaprabhaNewsNetwork |  
Published : Jun 18, 2026, 01:45 AM IST
15 HRR. 02ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಸಭಾಂಗಣದಲ್ಲಿ ಭಾನುವಾರ ಕರ್ನಾಟಕ ಎಲ್ಐಸಿ ವೃತ್ತಿನಿರತ ಮತ್ತು ನಿವೃತ್ತ ನೌಕರರ ಹಿತರಕ್ಷಣಾ ವೇದಿಕೆ (ವಿವಿಕೆ) ವತಿಯಿಂದ ರಾಜ್ಯ ಮಟ್ಟದ ವಾಲ್ಮೀಕಿ ನಾಯಕ ವಧು-ವರರ ಸಮಾವೇಶದಲ್ಲಿ ಪ್ರಸನ್ನಾನಂದ ಶ್ರೀ ಭಾಗವಹಿಸಿದ್ದರು. | Kannada Prabha

ಸಾರಾಂಶ

ಪರಸ್ಪರ ಅರ್ಥೈಸಿಕೊಳ್ಳುವ ಮನೋಭಾವ ಮತ್ತು ಹೊಂದಾಣಿಕೆಯ ಗುಣವು ಸುಖೀ ದಾಂಪತ್ಯಕ್ಕೆ ಮೂಲಾಧಾರ ಎಂದು ಜೀವ ವಿಮಾ ನಿಗಮದ ಪ್ರಾದೇಶಿಕ ಮಾರುಕಟ್ಟೆ ಪ್ರಬಂಧಕ ಆರ್.ಎಂ. ಕೇಶವಮೂರ್ತಿ ಹೇಳಿದ್ದಾರೆ.

- ರಾಜ್ಯಮಟ್ಟದ ವಾಲ್ಮೀಕಿ ನಾಯಕ ವಧು-ವರರ ಸಮಾವೇಶದಲ್ಲಿ ಆರ್.ಎಂ.ಕೇಶವಮೂರ್ತಿ ಅಭಿಮತ

- - -

ಕನ್ನಡಪ್ರಭ ವಾರ್ತೆ ಹರಿಹರ

ಪರಸ್ಪರ ಅರ್ಥೈಸಿಕೊಳ್ಳುವ ಮನೋಭಾವ ಮತ್ತು ಹೊಂದಾಣಿಕೆಯ ಗುಣವು ಸುಖೀ ದಾಂಪತ್ಯಕ್ಕೆ ಮೂಲಾಧಾರ ಎಂದು ಜೀವ ವಿಮಾ ನಿಗಮದ ಪ್ರಾದೇಶಿಕ ಮಾರುಕಟ್ಟೆ ಪ್ರಬಂಧಕ ಆರ್.ಎಂ. ಕೇಶವಮೂರ್ತಿ ಹೇಳಿದರು.

ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಸಭಾಂಗಣದಲ್ಲಿ ಭಾನುವಾರ ಕರ್ನಾಟಕ ಎಲ್ಐಸಿ ವೃತ್ತಿನಿರತ ಮತ್ತು ನಿವೃತ್ತ ನೌಕರರ ಹಿತರಕ್ಷಣಾ ವೇದಿಕೆ (ವಿವಿಕೆ) ವತಿಯಿಂದ ಆಯೋಜಿಸಿದ್ದ ರಾಜ್ಯಮಟ್ಟದ ವಾಲ್ಮೀಕಿ ನಾಯಕ ವಧು-ವರರ ಸಮಾವೇಶದಲ್ಲಿ ಅವರು ಮಾತನಾಡಿದರು.

ಇಂದಿನ ಯುವಜನರು ವಿವಾಹಕ್ಕೂ ಮುನ್ನ ತಮ್ಮ ನಿರೀಕ್ಷೆಗಳು, ಗುರಿಗಳು ಹಾಗೂ ಜೀವನ ಮೌಲ್ಯಗಳ ಬಗ್ಗೆ ಮುಕ್ತವಾಗಿ ಚರ್ಚಿಸಿಕೊಳ್ಳುವುದು ಅಗತ್ಯವಾಗಿದೆ. ವೈವಾಹಿಕ ಜೀವನದಲ್ಲಿ ನಿಬಂಧನೆಗಳು ಮತ್ತು ಹೊಂದಾಣಿಕೆ ಎರಡೂ ವಧು-ವರರ ಜೋಡಿಗಳಂತೆಯೇ ಸಾಗಬೇಕಾದ ಅಂಶಗಳಾಗಿವೆ. ಮದುವೆ ಎನ್ನುವುದು ಕೇವಲ ಇಬ್ಬರ ಸಂಬಂಧವಲ್ಲ. ಎರಡು ಕುಟುಂಬಗಳ ಬಾಂಧವ್ಯವೂ ಹೌದು. ಜೀವನದಲ್ಲಿ ಕೆಲವು ಸಂದರ್ಭಗಳಲ್ಲಿ ತಮ್ಮ ಅಭಿಪ್ರಾಯಗಳ ಬಗ್ಗೆ ದೃಢವಾಗಿರುವುದು ಅಗತ್ಯವಾದರೆ, ಮತ್ತೊಂದೆಡೆ ಪರಸ್ಪರ ಹೊಂದಾಣಿಕೆ ಮಾಡಿಕೊಂಡು ಸಾಗುವುದು ಸಹ ಅಷ್ಟೇ ಮುಖ್ಯ ಎಂದರು.

ಸಮಾವೇಶದ ಸಾನ್ನಿಧ್ಯ ವಹಿಸಿದ್ದ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಶ್ರೀ ಮಾತನಾಡಿ, ಶ್ರೀರಾಮನು ಆದರ್ಶ ಪುರುಷ, ಏಕಪತ್ನಿವ್ರತಸ್ಥ ಹಾಗೂ ಧರ್ಮನಿಷ್ಠ ರಾಜನಾಗಿದ್ದು, ಅವರ ಮಹೋನ್ನತ ಜೀವನ ಚರಿತ್ರೆಯನ್ನು ರಾಮಾಯಣ ಮಹಾಕಾವ್ಯದ ಮೂಲಕ ಜಗತ್ತಿಗೆ ಪರಿಚಯಿಸಿದವರು ವಾಲ್ಮೀಕಿ ಮಹರ್ಷಿಗಳು ಎಂದು ಹೇಳಿದರು.

ಪ್ರತಿಯೊಬ್ಬ ವಧು-ವರರು ರಾಮನ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಕುಟುಂಬ ಹಾಗೂ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ನೈತಿಕ ಮೌಲ್ಯಗಳು ಬೆಳೆಯುತ್ತವೆ. ಈ ನಿಟ್ಟಿನಲ್ಲಿ ವಿವಿಕೆ ಸಂಸ್ಥೆಯವರು ವಧು-ವರರ ಸಮಾವೇಶ ಮೂಲಕ ಸಮಾಜಮುಖಿ ಕಾರ್ಯಕ್ರಮ ಮಾಡಿರುವುದು ಅಭಿನಂದನೀಯ ಎಂದರು.

ಬೆಳಗಾವಿಯ ಎಲ್‌ಐಸಿ ಅಭಿವೃದ್ಧಿ ಅಧಿಕಾರಿ ವೆಂಕಟೇಶ್ ಪೂಜಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿವಿಕೆ ರಾಜ್ಯಾಧ್ಯಕ್ಷ ಬಿ.ಟಿ. ಬಸವರಾಜ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಎಲ್‌ಐಸಿ ವೃತ್ತಿನಿರತ ಮತ್ತು ನಿವೃತ್ತ ನೌಕರರ ಹಿತರಕ್ಷಣಾ ವೇದಿಕೆ (ವಿವಿಕೆ) ಗೌರವ ಅಧ್ಯಕ್ಷ ಡಿ.ಕೆ.ರಾಮಚಂದ್ರಪ್ಪ, ಕಾರ್ಯದರ್ಶಿ ನಂದೀಶ್ ಬ್ಯಾಡಗಿ, ಖಜಾಂಚಿ ಮಹೇಶ್, ದಾವಣಗೆರೆಯ ಸಿ.ರವಿ, ಹೊಸಪೇಟೆಯ ಚಂದ್ರಾಮಪ್ಪ ದೊರೆ ಹಾಗೂ ವಿವಿಕೆ ಪದಾಧಿಕಾರಿಗಳು ಉಪಸ್ಥಿತರಿದ್ದರು.

- - -

(ಕೋಟ್) ರಾಮಾಯಣ ಕೇವಲ ಒಂದು ಕಥೆಯಲ್ಲ. ಅದು ಮಾನವ ಜೀವನಕ್ಕೆ ದಾರಿದೀಪವಾಗಿರುವ ಮೌಲ್ಯಗಳ ಗ್ರಂಥವಾಗಿದೆ. ಶ್ರೀರಾಮನು ತಂದೆ- ತಾಯಿಯ ಆಜ್ಞೆ ಪಾಲನೆ, ಸತ್ಯನಿಷ್ಠೆ, ಧರ್ಮಪಾಲನೆ ಹಾಗೂ ಏಕಪತ್ನಿವ್ರತದ ಮೂಲಕ ಆದರ್ಶ ಜೀವನ ನಡೆಸಿದ ಮಹಾಪುರುಷ. ರಾಮನ ಜೀವನ ಇಂದಿಗೂ ಸಮಾಜಕ್ಕೆ ಮಾರ್ಗದರ್ಶಕವಾಗಿದೆ.

- ಶ್ರೀ ಪ್ರಸನ್ನಾನಂದ ಪುರಿ ಸ್ವಾಮೀಜಿ, ವಾಲ್ಮೀಕಿ ಗುರುಪೀಠ, ರಾಜನಹಳ್ಳಿ.

- - -

-15HRR.02:

ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಸಭಾಂಗಣದಲ್ಲಿ ಭಾನುವಾರ ಕರ್ನಾಟಕ ಎಲ್ಐಸಿ ವೃತ್ತಿನಿರತ ಮತ್ತು ನಿವೃತ್ತ ನೌಕರರ ಹಿತರಕ್ಷಣಾ ವೇದಿಕೆ (ವಿವಿಕೆ) ವತಿಯಿಂದ ರಾಜ್ಯಮಟ್ಟದ ವಾಲ್ಮೀಕಿ ನಾಯಕ ವಧು-ವರರ ಸಮಾವೇಶದಲ್ಲಿ ಪ್ರಸನ್ನಾನಂದ ಶ್ರೀ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೌಟುಂಬಿಕ ಕಲಹ: ಆತ್ಮಹತ್ಯೆಗೆ ಶರಣಾದ ಆಟೋ ಚಾಲಕ
ಅಕ್ರಮವಾಗಿ ನಿರ್ಮಿಸಿಕೊಂಡಿದ್ದ ಅಂಗಡಿಗಳ ತೆರವು