ಪರಸ್ಪರ ಗೌರವವೇ ಉತ್ತಮ ದಾಂಪತ್ಯಕ್ಕೆ ನಾಂದಿ: ಚಿಕ್ಕರಸಿನಕೆರೆ ಶಿವಲಿಂಗಯ್ಯ

KannadaprabhaNewsNetwork |  
Published : Nov 25, 2024, 01:03 AM IST
24ಕೆಎಂಎನ್ ಡಿ16 | Kannada Prabha

ಸಾರಾಂಶ

ದಾಂಪತ್ಯದಲ್ಲಿ ಯಾರು ಮೇಲೂ ಅಲ್ಲ. ಯಾರೂ ಕೀಳು ಅಲ್ಲ. ಸಂಸಾರವೆಂದರೆ ಪರಸ್ಪರ ಅರ್ಥ ಮಾಡಿಕೊಳ್ಳುವುದು. ಪರಸ್ಪರ ಗೌರವಿಸುವುದು. ಬುದ್ಧರ ಪಂಚಶೀಲಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ದಂಪತಿ ಮುನ್ನಡೆದರೆ ಸಮಾಜದಲ್ಲಿ ಆದರ್ಶ ದಂಪತಿಗಳಾವುದರಲ್ಲಿ ಸಂಶಯವಿಲ್ಲ.

ಕನ್ನಡಪ್ರಭ ವಾರ್ತೆ ಭಾರತೀನಗರ

ದಾಂಪತ್ಯದಲ್ಲಿ ಹೆಣ್ಣು ಗಂಡು ಇಬ್ಬರು ಸಮಾನರು. ಇದನ್ನು ಅರಿತು ಪರಸ್ಪರ ಗೌರವ ಹೊಂದಾಣಿಕೆಯಿಂದ ನಡೆದರೆ ಸುಂದರ ಬದುಕು ಹಾಗೂ ಸುಖ ಸಂಸಾರಕ್ಕೆ ನಾಂದಿಯಾಗುತ್ತದೆ ಎಂದು ಜಿಲ್ಲಾ ಬುದ್ದಿಸ್ಟ್ ಒಕ್ಕೂಟದ ಕಾರ್ಯಾಧ್ಯಕ್ಷ ಚಿಕ್ಕರಸಿನಕೆರೆ ಶಿವಲಿಂಗಯ್ಯ ಹೇಳಿದರು.

ಕರಡಕೆರೆ ಗ್ರಾಮದಲ್ಲಿ ಬೌದ್ಧ ಧರ್ಮಾಚರಣೆಯಂತೆ ನಡೆದ ಸರಳ ವಿವಾಹದಲ್ಲಿ ಪಾಲ್ಗೊಂಡು ಮಾತನಾಡಿ, ದಾಂಪತ್ಯದಲ್ಲಿ ಯಾರು ಮೇಲೂ ಅಲ್ಲ. ಯಾರೂ ಕೀಳು ಅಲ್ಲ. ಸಂಸಾರವೆಂದರೆ ಪರಸ್ಪರ ಅರ್ಥ ಮಾಡಿಕೊಳ್ಳುವುದು. ಪರಸ್ಪರ ಗೌರವಿಸುವುದು. ಬುದ್ಧರ ಪಂಚಶೀಲಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ದಂಪತಿ ಮುನ್ನಡೆದರೆ ಸಮಾಜದಲ್ಲಿ ಆದರ್ಶ ದಂಪತಿಗಳಾವುದರಲ್ಲಿ ಸಂಶಯವಿಲ್ಲ ಎಂದರು.

ಇದೇ ವೇಳೆ ಗ್ರಾಮದ ಯುವಕ ಕೆ.ಎನ್.ರತೀಶ ಹಾಗೂ ಶ್ರೀರಂಗಪಟ್ಟಣ ತಾಲೂಕಿನ ಗೊಬ್ಬರಗಾಲ ಗ್ರಾಮದ ಯುವತಿ ಜಿ.ಸಿ.ನಮಿತಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಧಮ್ಮಾಚಾರಿ ಎಂ.ಎಸ್. ಶಿವಣ್ಣ, ಲುಂಬಿನಿ ಬುದ್ಧ ವಿಹಾರದ ಬಂತೇಜಿ ಪನ್ಯಾಸಿ ವಿವಾಹ ಕಾರ್ಯಕ್ರಮ ನಡೆಸಿಕೊಟ್ಟರು.ಗೊರುಚ ಆಯ್ಕೆ ಅಭಿನಂದನೆ

ಹಲಗೂರು: ಮಂಡ್ಯದಲ್ಲಿ ಡಿಸೆಂಬರ್ ನಲ್ಲಿ ನಡೆಯಲಿರುವ ಅಖಿಲ ಭಾರತ 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಾಹಿತಿ ಗೊ.ರು.ಚನ್ನಬಸಪ್ಪ ಚ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದಕ್ಕೆ ದಡಮಳ್ಳಿ ನಿವೃತ್ತಿ ಮುಖ್ಯ ಶಿಕ್ಷಕ ಡಿ.ರಾಮ್ ಅಭಿನಂದನೆ ಸಲ್ಲಿಸಿದ್ದಾರೆ.

ಗಾಯಕ ಕಿಕ್ಕೇರಿ ಕೃಷ್ಣಮೂರ್ತಿಗೆ ಸನ್ಮಾನ

ಸುಗಮ ಸಂಗೀತ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಅವರಿಗೆ ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಕಿಕ್ಕೇರಿ ಕನ್ನಡಿಗರ ಬಳಗದಿಂದ ಗೌರವಿಸಲಾಯಿತು. ಕಿಕ್ಕೇರಿ ಮೂಲದ ಕೊರಟಿಕೆರೆ ಜಯಲಕ್ಷ್ಮಿ, ರವಿ ಅತ್ರೇಯಸ್, ಮಂಜಣ್ಣ ಅಂಗೀರಸ್, ಅನಿಲ್‌ಕುಮಾರ್‌ ಇದ್ದರು. ಇದೇ ವೇಳೆ ಧಮ್ಮಾಚಾರಿಗಳಾದ ನಿರಂಜನ್ ಬೋದ್, ಬಿ. ಅನ್ನದಾನಿ, ಜಯರಾಮು, ವೆಂಕಟಾಚಲಯ್ಯ, ಎಸ್. ಮಹದೇವಯ್ಯ, ಚಂದ್ರಶೇಖರಯ್ಯ, ನಿವೃತ್ತ ಎಂಜಿನಿಯರ್ ಚಂದ್ರಹಾಸ, ಅಂಬರಹಳ್ಳಿ ಸ್ವಾಮಿ, ಕರಡಕೆರೆ ಯೋಗೇಶ, ಗೌತಮ ಪಾಲ್ಗೊಂಡಿದ್ದರು.

PREV

Recommended Stories

ಕಾಂಗ್ರೆಸ್ ಸರ್ಕಾರದಿಂದ ಗ್ರಾಮೀಣಾಭಿವೃದ್ಧಿಗೆ ಹೆಚ್ಚು ಒತ್ತು: ಶಾಸಕ ರಮೇಶ್‌ ಬಂಡಿಸಿದ್ದೇಗೌಡ
ಸರ್ಕಾರಿ ಶಾಲೆ ಉನ್ನತಿಗೆ ಎಲ್ಲರ ಸಹಕಾರ ಅಗತ್ಯ