ಕನ್ನಡಪ್ರಭ ವಾರ್ತೆ ಆನಂದಪುರ
ಆನಂದಪುರದಲ್ಲಿ ಶುಕ್ರವಾರ ಸಂಜೆ ಕಾರ್ಯಕರ್ತರ ಭೇಟಿಯಾಗಿ ಮಾತನಾಡಿ, ಯಡಿಯೂರಪ್ಪನವರಿಗೆ ಹೊಂದಾಣಿಕೆ ರಾಜಕಾರಣ ಹೊಸದಲ್ಲ. ರಾಜ್ಯದಲ್ಲಿ ಹಿಂದೆ ನಡೆದ ವಿಧಾನಸಭಾ ಚುನಾವಣೆಯಲ್ಲೂ ವರುಣ ಮತ್ತು ಶಿಕಾರಿಪುರ ಕ್ಷೇತ್ರದಲ್ಲಿ ಹೊಂದಾಣಿಕೆ ರಾಜಕಾರಣ ಮಾಡಿಕೊಂಡು ಗೆಲುವು ಸಾಧಿಸಿದ್ದು, ರಾಜ್ಯದ ಜನತೆಗೆ ತಿಳಿದಿದೆ. ಈಗಲೂ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಹೊಂದಾಣಿಕೆ ರಾಜಕಾರಣ ನಡೆದಿದೆ ಎಂದು ಆಪಾದಿಸಿದರು. ಚುನಾವಣೆಯಲ್ಲಿ ತಕ್ಕ ಉತ್ತರ:
ಇಂಥ ಹೊಂದಾಣಿಕೆ ರಾಜಕಾರಣ ಹಾಗೂ ಕುಟುಂಬ ರಾಜಕಾರಣಕ್ಕೆ ಮುಕ್ತಾಯ ಹಾಡಲು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇನೆ. ನನ್ನ ಈ ನಿಲುವಿಗೆ ಪಕ್ಷಾತೀತವಾಗಿ ಹಿಂದೂ ಸಮುದಾಯ ನನ್ನ ಬೆಂಬಲಿಸುತ್ತಿದೆ. ರಾಜ್ಯದಲ್ಲಿ ಅಸಮಾಧಾನಗೊಂಡ ಬಿಜೆಪಿ ನಾಯಕರ ಸಮಾಧಾನ ಮಾಡುವಲ್ಲಿ ರಾಜ್ಯದ ತಂಡ ಯಶಸ್ವಿಯಾಗಿದೆ ಆದರೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಈಶ್ವರಪ್ಪನವರಿಗೆ ಯಾರು ಸಮಾಧಾನ ಮಾಡಿದರೂ ಕೇಳಲ್ಲ ಎಂದು ಹೈಕಮಾಂಡ್ ಗೆ ತಿಳಿದಿದೆ. ಹೀಗಾಗಿ ಹೈಕಮಾಂಡ್ ಈಶ್ವರಪ್ಪನ ಗೆಲುವಿಗೆ ಆಶೀರ್ವದಿಸಿದಂತೆ ಕಾಣುತ್ತದೆ. ಯಡಿಯೂರಪ್ಪನವರ ಕುಟುಂಬ ರಾಜಕಾರಣಕ್ಕೆ ಶಿವಮೊಗ್ಗ ಕ್ಷೇತ್ರದ ಜನತೆ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ನಾರಾಯಣ್, ಸತೀಶ್, ಗಣಪತಿ, ಅರುಣ್, ಆನಂದ, ಸಾಗರದ ಕುರಿ ಮಂಜಣ್ಣ, ಶಿವಮೊಗ್ಗದ ಹೇಮಾರವಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.------------------