ನನ್ನ ಸೊಸೆಯೇ ಸರಿಯಿಲ್ಲ: ಪ್ರಜ್ವಲ್‌ ವಿರುದ್ಧ ಆರೋಪಿಸಿದ ಸಂತ್ರಸ್ತ ಮಹಿಳೆಯ ಅತ್ತೆ

KannadaprabhaNewsNetwork |  
Published : Apr 30, 2024, 02:06 AM IST
29ಎಚ್ಎಸ್ಎನ್12 : ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂತ್ರಸ್ತ ಮಹಿಳೆಯ ಅತ್ತೆ ಗೌರಮ್ಮ. | Kannada Prabha

ಸಾರಾಂಶ

ಹೊಳೆನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಸಂತ್ರಸ್ತ ಮಹಿಳೆಯ ಅತ್ತೆಯೇ ಇದೀಗ ರೇವಣ್ಣ ಹಾಗೂ ಪ್ರಜ್ವಲ್‌ ಪರ ನಿಂತಿದ್ದು, ತನ್ನ ಸೊಸೆಯೇ ಸರಿಯಿಲ್ಲ. ರೇವಣ್ಣ, ಪ್ರಜ್ವಲ್‌ ಹಾಗೂ ಭವಾನಿ ಅಕ್ಕನವರು ದೇವರಿದ್ದಂತೆ ಎಂದು ಹೇಳಿದ್ದಾರೆ. ಸಂತ್ರಸ್ತ ಮಹಿಳೆಯ ಅತ್ತೆ ಗೌರಮ್ಮ (ಪತಿಯ ತಾಯಿ) ಹಾಸನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ರೇವಣ್ಣ, ಪ್ರಜ್ವಲ್‌ ದೇವರಿದ್ದಂತೆ । ಸುದ್ದಿಗೋಷ್ಠಿಯಲ್ಲಿ ಹೇಳಿಕೆ

ಕನ್ನಡಪ್ರಭ ವಾರ್ತೆ ಹಾಸನ

ತನ್ನ ಮೇಲೆ ಎಚ್‌.ಡಿ.ರೇವಣ್ಣ ಹಾಗೂ ಪ್ರಜ್ವಲ್‌ ರೇವಣ್ಣ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ಹೊಳೆನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಸಂತ್ರಸ್ತ ಮಹಿಳೆಯ ಅತ್ತೆಯೇ ಇದೀಗ ರೇವಣ್ಣ ಹಾಗೂ ಪ್ರಜ್ವಲ್‌ ಪರ ನಿಂತಿದ್ದು, ತನ್ನ ಸೊಸೆಯೇ ಸರಿಯಿಲ್ಲ. ರೇವಣ್ಣ, ಪ್ರಜ್ವಲ್‌ ಹಾಗೂ ಭವಾನಿ ಅಕ್ಕನವರು ದೇವರಿದ್ದಂತೆ ಎಂದು ಹೇಳಿದ್ದಾರೆ.

ಮಾಧ್ಯಮಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಸಂತ್ರಸ್ತ ಮಹಿಳೆಯ ಅತ್ತೆ ಗೌರಮ್ಮ (ಪತಿಯ ತಾಯಿ), ‘ಪ್ರಜ್ವಲ್ ರೇವಣ್ಣ ವಿರುದ್ಧ ಪ್ರಕರಣ ದಾಖಲು ಮಾಡಿರುವ ಸಂತ್ರಸ್ತೆ ಈ ಹಿಂದೆ ಸಾಲ ಮಾಡಿಕೊಂಡಿದ್ದ ವೇಳೆ ಸಾಲ ಕೊಟ್ಟವರು ಸಂತ್ರಸ್ತೆ ಜೊತೆಗೆ ಗಲಾಟೆ ಮಾಡುತ್ತಿದ್ದರು. ಅದಾದ ಬಳಿಕ ಜೆಡಿಎಸ್ ನಾಯಕಿ ಭವಾನಿ ರೇವಣ್ಣ ಅವರ ಮನೆಯಲ್ಲಿ ನಾಲ್ಕು ವರ್ಷಗಳು ಮನೆ ಕೆಲಸ ಮಾಡಿದ್ದಾರೆ. ನಾಲ್ಕು ವರ್ಷ ಭವಾನಿ ರೇವಣ್ಣ ಅವರ ಮನೆಯಲ್ಲಿ ಕೆಲಸ ಮಾಡಿದ ವೇಳೆ ಅವರನ್ನು ಭವಾನಿ ರೇವಣ್ಣ, ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣ ಚೆನ್ನಾಗಿ ನೋಡಿಕೊಂಡಿದ್ದಾರೆ. ಆದರೆ ಅವರು ಇದ್ದಕ್ಕಿದ್ದಂತೆ ಅವರ ಮನೆಯಲ್ಲಿ ಕೆಲಸ ಬಿಟ್ಟು ಹೋಗಿದ್ದಾರೆ. ಅದಾದ ಬಳಿಕ ಘಟನೆ ನಡೆದು ಇಷ್ಟು ದಿನ ಕಳೆದರೂ ದೂರು ನೀಡದ ಮಹಿಳೆ ಚುನಾವಣೆ ವೇಳೆ ಯಾರದೋ ಮಾತು ಕೇಳಿಕೊಂಡು ದೇವೇಗೌಡರ ಕುಟುಂಬದ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ’ ಎಂದು ದೂರಿದರು.

‘ಕೆಲಸಕ್ಕೆ ಬಂದ ಐದು ವರ್ಷದ ಹಿಂದೆಯೇ ಆರೋಪ ಮಾಡಬಹುದಿತ್ತು. ಆದರೆ ಚುನಾವಣೆ ಸಂದರ್ಭದಲ್ಲಿ ಮಾಡಿರುವುದು ಸುಳ್ಳು ಆರೋಪ. ಬೇಕಾದರೆ ಶ್ರೀ ಮಂಜುನಾಥ ಸ್ವಾಮಿ ಆಣೆ ಮಾಡಲು ನಾವು ಸಿದ್ಧ’ ಎಂದು ಹೇಳಿದರು.

‘ವಿಡಿಯೋ ಮಿಕ್ಸಿಂಗ್ ಮಾಡಿರಬಹುದು. ಇದು ಸತ್ಯವಲ್ಲ. ಹತ್ತಿರದಿಂದ ನೋಡಿರುವ ನಾವು ಅವರ ಬಗ್ಗೆ ತಿಳಿದುಕೊಂಡಿದ್ದೇವೆ’ ಎಂದು ಸ್ಪಷ್ಟಪಡಿಸಿದರು.ಎಚ್.ಡಿ. ರೇವಣ್ಣರ ಸಂಬಂಧಿಕರಾದ ಜಯಂತಿ, ಶಿಲ್ಪ, ವಕೀಲರಾದ ಗೋಪಾಲ್‌, ರಾಧ, ಜ್ಯೋತಿ, ಮಂಜುನಾಥ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿ ವಿವಸ್ತ್ರ ಕೇಸ್‌ನಲ್ಲಿ ತಲೆದಂಡಕ್ಕೆ ಬಿಜೆಪಿ ಗಡುವು
ಶೀಘ್ರ ‘ಬಾಕಿ ಲಕ್ಷ್ಮಿ’ ಬಿಡುಗಡೆ - ಬಿಪಿಎಲ್‌ ರದ್ದಾದವರಿಗೆ ಇಲ್ಲ ಗೃಹಲಕ್ಷ್ಮಿ ಹಣ