ಕನ್ನಡಪ್ರಭ ವಾರ್ತೆ ಆಲೂರು
ಕಾಂಗ್ರೆಸ್ ಸರ್ಕಾರ ಬಡವರ ಪರವಾದ ಪಕ್ಷವಾಗಿದೆ. ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿದ್ದು, ತಾಲೂಕುಗಳಿಗೆ ಆಗಬೇಕಾದ ಅಭಿವೃದ್ಧಿ ಕಾರ್ಯಗಳತ್ತ ಗಮನಹರಿಸಲಾಗುವುದು ಎಂದರು. ಹಾಸನ ಜಿಲ್ಲೆಯಲ್ಲಿಯೇ ಆಲೂರು ತಾಲೂಕು ಅತಿ ಚಿಕ್ಕ ಹಾಗೂ ಅಭಿವೃದ್ಧಿಯಲ್ಲಿ ಕುಂಠಿತವಾಗಿರುವ ತಾಲೂಕಾಗಿದ್ದು, ನನ್ನ ಅವಧಿಯಲ್ಲಿ ಸರ್ಕಾರದಿಂದ ಹಾಗೂ ನನ್ನ ಕೈಯಲ್ಲಿ ಆಗಬೇಕಾದ ಕೆಲಸಗಳನ್ನು ಮಾಡಿ ಆಲೂರು ಪಟ್ಟಣವನ್ನು ಮಾದರಿ ಪಟ್ಟಣವನ್ನಾಗಿ ಮಾಡಲು ಮುಂದಾಗಿರುವುದಾಗಿ ಭರವಸೆ ನೀಡಿದರು. ಈಗಾಗಲೇ ಸಂಸದರ ಅನುದಾನದಲ್ಲಿ ತಾಲೂಕಿನ ಕ್ರೀಡಾಂಗಣದಲ್ಲಿ ಶೌಚಾಲಯ ಹಾಗೂ ಹೈಮಾಸ್ಕ್ ದೀಪಗಳನ್ನು ಅಳವಡಿಸಲಾಗಿದೆ. ಪಟ್ಟಣದ ವ್ಯಾಪಾರಸ್ಥರಿಗೆ ಫುಡ್‌ಕೋರ್ಟ್ ನಿರ್ಮಿಸಲು ಅನುದಾನವನ್ನು ತಂದಿದ್ದು, ಅತಿ ಶೀಘ್ರದಲ್ಲಿ ಫುಡ್‌ಕೋರ್ಟ್ ನಿರ್ಮಾಣಕ್ಕೆ ಚಾಲನೆ ನೀಡುವುದಾಗಿ ತಿಳಿಸಿದರು.ಈ ಸಂದರ್ಭದಲ್ಲಿ ಅಂಚೆ ನಿರೀಕ್ಷಕ ಸಂತೋಷ್ ಮಲೋತ್, ಅಂಚೆಪಾಲಕರಾದ ನಂದಿನಿ ಎಚ್ ಪಿ, ಅಂಚೆ ಮೇಲ್ವಿಚಾರಕ ಮಧು ಹಾಗೂ ಸಿಬ್ಬಂದಿ ವರ್ಗದವರು ಸೇರಿದಂತೆ ಪೃಥ್ವಿ ಜಯರಾಮ್, ಆಲೂರು ಯೂತ್ ಕಾಂಗ್ರೆಸ್ ಅಧ್ಯಕ್ಷರಾದ ಚಂದ್ರಶೇಖರ್, ರಾಜಶೇಖರ್ ಕಾಂಗ್ರೆಸ್ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷರು, ಕಾಂಗ್ರೆಸ್ ಮುಖಂಡರಾಳಾದ ಶಾಂತಕೃಷ್ಣ, ಶಿವಣ್ಣ, ಹರೀಶ್, ಸಂದೇಶ್, ನಾರಾಯಣ, ಯೋಗೀಶ್, ಪನೀಶ್, ರುದ್ರಕುಮಾರ ಮುಂತಾದವರು ಹಾಜರಿದ್ದರು.