ಕನ್ನಡಪ್ರಭವಾರ್ತೆ ಬೀರೂರು
ಮಂಗಳವಾರ ಮದ್ಯಾಹ್ನ ಸರಸ್ವತಿಪುರಂ ಬಡಾವಣೆಯಲ್ಲಿ ನೆಲೆಸಿರುವ ಕಾರ್ಣೀಕದೊಡೆಯ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಗೆ ಶ್ರಾವಣ ಮಾಸದ ಅಂಗವಾಗಿ ಪೂಜೆ ಸಲ್ಲಿಸಿ ಮಾತನಾಡಿದರು.
ಕಳೆದ ಲೋಕಸಭಾ ಚುನಾವಣೆ ಪ್ರಚಾರದ ವೇಳೆ ಸರಸ್ವತಿಪುರಂ ಬಡಾವಣೆಗೆ ರಾತ್ರಿ 11.45ರ ಸುಮಾರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕಾರ್ಯಕರ್ತರು ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ ಪವಾಡದ ಬಗ್ಗೆ ತಿಳಿಸಿದ ಹಿನ್ನಲೆ ಅಂದು ಚುನಾವಣೆಯಲ್ಲಿ ಹಲವು ಬಾರಿ ಸೋತು ಕುಗ್ಗಿದ ನನಗೆ ಇದೊಂದು ಬಾರಿ ಕೈಹಿಡಿದು ಅವಕಾಶ ಮಾಡಿಕೊಡು ಎಂದು ಬೇಡಿದ ಸಂದರ್ಭದಲ್ಲಿ ಸ್ವಾಮಿಯು ಮದ್ಯರಾತ್ರಿಯ ಸಂದರ್ಭದಲ್ಲೂ ಕೂಡ ಬಲಗಡೆ ಅಪ್ಪಣೆ ನೀಡಿ ಆಶೀರ್ವಾದ ಮಾಡಿದ್ದು ಇನ್ನು ಮರೆಯಲಾಗದ್ದು, ಆ ಸಮಯದಿಂದ ನನ್ನ ಕುಗ್ಗಿದ್ದ ಮನಸ್ಸು ಚೇತರಿಸಿಕೊಂಡು ಗೆಲ್ಲುವ ಉತ್ಸಾಹಕ್ಕೆ ಪುಷ್ಠಿ ನೀಡಿತ್ತು ಎಂದು ಹೇಳಿದರು.ಚುನಾವಣೆಯಲ್ಲಿ ಸ್ವಾಮಿಯ ಆಶೀರ್ವಾದದ ಫಲವಾಗಿ ಕಡೂರು ಕ್ಷೇತ್ರದಲ್ಲಿ ಅತಿ ಹೆಚ್ಚು ಮತ ಗಳಿಸಿ ಜಯಶೀಲನಾದೆ. ತದನಂತರದ ವಿಜಯೋತ್ಸವ, ಸಂಸತ್ ಕಲಾಪದಲ್ಲಿ ಭಾಗಿ, ಹೀಗೆ ಹಲವಾರು ಒತ್ತಡದ ಕಾರ್ಯಕ್ರಮಗಳಲ್ಲಿ ತಲ್ಲೀನನಾಗಿ ಸ್ವಾಮಿದರ್ಶನಕ್ಕೆ ಭೇಟಿ ನೀಡಲು ಸಾಧ್ಯವಾಗಿರಲಿಲ್ಲ. ಇಂದು ಶ್ರೀಸ್ವಾಮಿಯೇ ಕಡೂರು ಕ್ಷೇತ್ರದ ಮೊದಲ ಭೇಟಿಗೆ ಅವಕಾಶ ನೀಡಿ ಮುಂದುವರೆಸಿ ವಿವಿಧ ಸಮಸ್ಯೆ ಬಗೆಹರಿಸಲು ಸೂಚಿಸಿದ್ದಾನೆ ಎಂದರು.
ಶಾಸಕ ಕೆ.ಎಸ್.ಆನಂದ್ ಮಾತನಾಡಿ, ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರಿಗೆ ರಾಜಕೀಯ ಪುನರ್‌ಜನ್ಮ ನೀಡಿದ್ದು ಚಿಕ್ಕಮಗಳೂರು ಜಿಲ್ಲೆ. ಅಂತಹ ಕ್ಲಿಸ್ಟಕರ ಸಂದರ್ಭದಲ್ಲಿ ಇಂದಿರಾಗಾಂಧಿ ಯವರು ಬೀರೂರಿಗೆ ಪ್ರಚಾರಕ್ಕೆ ಬಂದ ಸಂದರ್ಭದಲ್ಲಿ ಈ ಸ್ವಾಮಿಗೆ ಬೇಡಿಕೊಂಡ ಫಲವಾಗಿ ಸಂಸದರಾಗಿ ದೇಶದ ಪ್ರಧಾನಿಯಾದರು. ಅಂತೆಯೆ ಬಾಬು ಜಗಜೀವನ್ ರಾಂ, ಶ್ರೀಕಂಠಪ್ಪ, ಹಾಗೂ ಕೆ.ಎಚ್.ಮುನಿಯಪ್ಪರಂತವರು ಸಹ ಇಲ್ಲಿಗೆ ಭೇಟಿ ನೀಡಿ ಆಶೀರ್ವಾದ ಪಡೆದು ವಿಜಯಿಶಾಲಿಯಾಗಿದ್ದರು ಅದರಂತೆಯೇ ನಮ್ಮ ಸಂಸದರಾದ ಶ್ರೇಯಸ್ ಕೂಡ ಇಲ್ಲಿಗೆ ಭೇಟಿ ನೀಡಿ ಆಶೀರ್ವಾದ ದ ಫಲವಾಗಿ ಜಯಶೀಲರಾಗಿದ್ದಾರೆ ಸ್ವಾಮಿಯ ವರ ನಮ್ಮೆಲ್ಲರ ದಯೆ ಎಂದರು.
ಬರುವ ಅಕ್ಟೋಬರ್ 13ರ ಬೆಳಗಿನ ಜಾವ ಮೈಲಾರಸ್ವಾಮಿಯ ಕಾರ್ಣಿಕದ ಭವಿಷ್ಯನುಡಿ ನಡೆಯುತ್ತದೆ. ಸಂಸದರಾದ ತಾವು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸ್ವಾಮಿಯ ಆಶೀರ್ವಾದ ಪಡೆಯುವಂತೆ ದೇಗುಲದ ಗೌಡರು ಸಂಸದರು ಮತ್ತು ಶಾಸಕರಿಗೆ ಮನೊಲಿಸಿದಾಗ , ತಪ್ಪದೇ ಆ ಕಾರ್ಣಿಕಕ್ಕೆ ಬರುವುದಾಗಿ ತಿಳಿಸಿದರು.ಈ ವೇಳೆ ಶಾಸಕ ಕೆ.ಎಸ್.ಆನಂದ್, ಕಾಂಗ್ರೆಸ್ ಮುಖಂಡ ಬೀರೂರು ದೇವರಾಜ್, ಪುರಸಭಾ ಸದಸ್ಯರಾದ ಬಿ.ಕೆ.ಶಶಿಧರ್, ಲೋಕೇಶಪ್ಪ, ದೇಗುಲದ ಗೌಡರಾದ ಶಿವಣ್ಣ, ಕಾಂಗ್ರೆಸ್ ಮುಖಂಡ ಬಿ.ಎನ್.ಮಲ್ಲಿಕಾರ್ಜುನ್, ಕೀರ್ತಿ ಯತೀಶ್,ಎನ್.ಗಿರೀಶ್, ದೇಗುಲದ ಪೂಜಾರರಾದ ಧಶರಥ, ವಿಜೇತ್ ಸೇರಿ ಇತರರಿದ್ದರು.