ಎಲ್.ಎಸ್. ಶ್ರೀಕಾಂತ್
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಅಂಗವಾಗಿ ಆಹಾರ ಇಲಾಖೆಯಿಂದ ನಗರದ ಮಹಾರಾಜ ಕಾಲೇಜಿನಲ್ಲಿ ಆಯೋಜಿಸಿರುವ ಆಹಾರ ಮೇಳದಲ್ಲಿ ಜನವೋ… ಜನ.., ವಿವಿಧ ಜಿಲ್ಲೆಗಳ ವಿಶಿಷ್ಟ ಶೈಲಿಯ ತಿಂಡಿ, ತಿನಿಸು ಸವಿಯಲು ಸಾವಿರಾರು ತಿಂಡಿ ಪ್ರಿಯರು ಭೇಟಿ ನೀಡುತ್ತಿದ್ದಾರೆ.
ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ತಿಂಡಿ ಪ್ರಿಯರು ಉದ್ಘಾಟನಾ ದಿನದಿಂದಲೆ ಎಲ್ಲ ಮಳಿಗೆಗಳು ತುಂಬಿ, ವ್ಯಾಪಾರ ವಹೀವಾಟು ಜೋರಾಗಿ ನಡೆಯುತ್ತಿದೆ,ಮೊದಲ ದಿನ ತಕ್ಕಮಟ್ಟಿಗೆ ಇದ್ದ ಜನರು, ಎರಡನೇ ದಿನವಾದ ಮಂಗಳವಾರ ಹೆಚ್ಚು ಜನರು ಭೇಟಿ ನೀಡಿ ತಮ್ಮ ಇಷ್ಟವಾದ ತಿಂಡಿಗಳನ್ನು ಸವಿದರು.
ಈ ಬಾರಿ 160 ಮಳಿಗೆಗೆ ಅವಕಾಶ
ಆಹಾರ ಮೇಳದಲ್ಲಿ ಹೆಚ್ಚು ಆಕರ್ಷಣಿಯವಾದ ಬಂಬೂ ಬಿರಿಯಾನಿ, ಉತ್ತರ ಕರ್ನಾಟಕ ಶೈಲಿ, ಕರಾವಳಿ ಪಾರಂಪರಿಕ ಆಹಾರ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ.
ಸಸ್ಯಹಾರಿಗಳಿಗೆ ದಾವಣಗೆರೆ ಬೆಣ್ಣೆ ದೋಸೆ, ರೊಟ್ಟಿ ತಟ್ಟೆ ಕಡುಬಿನ ಕಟ್ಟೆ, ಕಂಬನ ಮನೆ, ಧಾರವಾಡ ಜೋಳದ ರೊಟ್ಟಿ, ಬಾಂಬೆ ಚಾಟ್ಸ್ ಹೌಸ್, ಬಂಗಾರ್ ಪೇಟೆ ಪಾನಿಪುರಿ ಮತ್ತು ಚಾಟ್ಸ್, ಉತ್ತರ ಕರ್ನಾಟಕದ ಜೋಳದ ರೊಟ್ಟಿ, ಗಿರ್ಮಿಟ್, ಮಿರ್ಚಿ, ಬಜ್ಜಿ, ಶೆಖೆ ಗಿಣ್ಣು ಮತ್ತು ಅವಲಕ್ಕಿ ಗಿಣ್ಣು, ಮಿಸ್ಟರ್‌ಮಶ್ರೂಮ್, ಮಶ್ರೂಮ್ ಮಡಿಕೆ ಬಿರಿಯಾನಿ, ಬಾಗಲಕೋಟೆ ಜೋಳದ ರೊಟ್ಟಿ, ಚನಾ ಬತೂರ ಮಶ್ರೂಮ್ ಬೈಟ್ಸ್, ಕರಾವಳಿ ಶೈಲಿಯ ತಿಂಡಿಗಳು, ಫ್ರೆಶ್ ಜ್ಯೂಸ್, ಬಿಸಿ ಬಿಸಿ ಹೋಳಿಗೆ, ಚುರುಮುರಿ ಸೇರಿದಂತೆ ವಿವಿಧ ಬಗೆಯ ತಿನಿಸುಗಳ ಮಳಿಗೆಗಳು ಜನರನ್ನು ಆಕರ್ಷಿಸುತ್ತಿದೆ.
ಮಾಂಸಹಾರ ಪ್ರಿಯರಿಗಾಗಿ 40 ಮಳಿಗೆಯಲ್ಲಿ ವಿವಿಧ ಶೈಲಿಯ ತಿನಿಸುಗಳು ಲಭ್ಯವಿದ್ದು, ಅದರಲ್ಲೂ ಬೊಂಬು ಬಿರಿಯಾನಿ ರುಚಿ ನೋಡಲು ಮಾಂಸಪ್ರಿಯರು ಮುಗಿಬಿದ್ದಿದ್ದಾರೆ.
ಹೊಸಕೋಟೆ ಮಣಿ, ಬಿರಿಯಾನಿ, ಮೈಸೂರಿನ ಪ್ರಖ್ಯಾತಿ ಪಡೆದಿರುವ ಹೋಟೆಲ್ ಹನುಮಂತು, ಚಿಕನ್ ಕೀಮಾ ದೋಸಾ, ಮಂಡ್ಯ ನಾಟಿ ಪಲಾವ್, ಮಿರ್ಚಿ ಚಿಕನ್ ಪಲಾವ್, ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದಿಂದ ಮತ್ಸ್ಯ ದರ್ಶಿನಿ, ನಾಟಿಕೋಳಿ ಮಡಿಕೆ ಬಿರಿಯಾನಿ, ಬೆಂಗಳೂರಿನ ಚಿಕ್ಕಪೇದೆ ದೊನ್ನೆ ಬಿರಿಯಾನಿ, ವಿವಿಧ ಬಗೆಯ ಮಡಿಕೆ ಬಿರಿಯಾನಿ, ಹಳ್ಳಿ ಮೈಸೂರು ಒತ್ತು ಶಾವಿಗೆ, ಮೈಸೂರು ಬಿರಿಯಾನಿ ಮಳಿಗೆಗಳು ಮಾಂಸ ಪ್ರಿಯರನ್ನು ಕೈ ಬೀಸಿ ಕರೆಯುತ್ತಿದೆ.