ಇನ್ನಷ್ಟು ಜನರಿಗೆ ದಸರಾ ವೈಭವ ತಿಳಿಯಲು ಡಿಜಿಟಲ್‌ ಮಾಧ್ಯಮ ಸಹಕಾರಿ

KannadaprabhaNewsNetwork |  
Published : Jul 27, 2026, 02:15 AM IST
26ಕೆಎಂಎನ್‌ಡಿ-9ಬಹುಜನ ಸಮಾಜ ಪಕ್ಷದ ವತಿಯಿಂದ ಮಂಡ್ಯದಲ್ಲಿ ಛತ್ರಪತಿ ಶಾಹು ಮಹಾರಾಜ್‌ ಮೀಸಲಾತಿ ಜಾರಿ ದಿನವನ್ನು ಆಚರಿಸಲಾಯಿತು.  | Kannada Prabha

ಸಾರಾಂಶ

ತ್ತೀಚಿನ ವರ್ಷಗಳಲ್ಲಿ ಡಿಜಿಟಲ್‌ ಮಾಧ್ಯಮ ಹಿಂದೆಂದಿಗಿಂತ ವೇಗವಾಗಿ ಬೆಳೆಯುತ್ತಿದೆ.

ಕನ್ನಡಪ್ರಭ ವಾರ್ತೆ ಮೈಸೂರುವಿಶ್ವವಿಖ್ಯಾತ ಮೈಸೂರು ದಸರಾ ಆಚರಣೆಯನ್ನು, ಅದರ ಭವ್ಯತೆಯನ್ನು ವಿಶ್ವದಾದ್ಯಂತ ಜನರಿಗೆ ಪರಿಚಯಿಸಲು ಸೇಫ್‌ ವ್ಹೀಲ್ಸ್‌ಗ್ರೂಪ್‌ಆಫ್‌ ಕಂಪನೀಸ್‌ ವತಿಯಿಂದ ಮೈಸೂರು ದಸರಾ ವಿಡಿಯೋವನ್ನು ಇತ್ತೀಚೆಗೆ ಲೋಕಾರ್ಪಣೆಗೊಳಿಸಲಾಯಿತು.ಮೈಸೂರು ಟ್ರಾವಲ್‌ಮಾರ್ಟ್‌ ಕಾರ್ಯಕ್ರಮದಲ್ಲಿ ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್‌ ಶೆಖಾವತ್‌ ಅವರು ವಿಡಿಯೋ ಲೋಕಾರ್ಪಣೆಗೊಳಿಸಿದರು.ಈ ವೇಳೆ ಮಾತನಾಡಿದ ಅವರು, ಇತ್ತೀಚಿನ ವರ್ಷಗಳಲ್ಲಿ ಡಿಜಿಟಲ್‌ ಮಾಧ್ಯಮ ಹಿಂದೆಂದಿಗಿಂತ ವೇಗವಾಗಿ ಬೆಳೆಯುತ್ತಿದೆ. ಎಲ್ಲಾ ವಯೋಮಾನದವರನ್ನೂ ತಲುಪಲು ಇರುವ ಸೂಕ್ತ ಮಾಧ್ಯಮ ಸಾಮಾಜಿಕ ಜಾಲತಾಣ. ಮೈಸೂರು ದಸರಾ ಬಗ್ಗೆ ತಯಾರಿಸಿರುವ ಈ ವಿಡಿಯೋ ಬಹಳ ಚೆಂದವಾಗಿ ಮೂಡಿಬಂದಿದ್ದು, ಇದರಿಂದ ಪ್ರಪಂಚದಾದ್ಯಂತ ಇನ್ನಷ್ಟು ಜನರಿಗೆ ದಸರಾದ ವೈಭವ ತಿಳಿಯುತ್ತದೆ. ದಸರಾ ಮುಂದಿನ ದಿನಗಳಲ್ಲಿ ಇನ್ನೂ ದೊಡ್ಡ ಮಟ್ಟದ ಪ್ರವಾಸಿಗರನ್ನು ಆಕರ್ಷಿಸುತ್ತದೆ ಎಂಬ ನಂಬಿಕೆ ನನಗಿದೆ ಎಂದರು.ಸೇಫ್‌ ವ್ಹೀಲ್ಸ್‌ ಗ್ರೂಪ್‌ ಆಫ್‌ ಕಂಪನೀಸ್‌ ಎಂಡಿ ಬಿ.ಎಸ್. ಪ್ರಶಾಂತ್‌ ಮಾತನಾಡಿ, ಈ ವಿಡಿಯೋವನ್ನು ಕಳೆದ ವರ್ಷ ದಸರಾ ಸಮಯದಲ್ಲಿ ಚಿತ್ರೀಕರಣ ಮಾಡಲಾಗಿತ್ತು. ಅಂತಾರಾಷ್ಟ್ರೀಯ ಮಟ್ಟದ ಜಾಹೀರಾತು ತಯಾರಿಕಾ ಸಂಸ್ಥೆ ಫೋವಿಯಾ ಫಿಲ್ಮ್ಸ್ವತಿಯಿಂದ ಈ ಸತತ ಒಂಭತ್ತು ದಿನಗಳ ಕಾಲ ಈ ವಿಡಿಯೋ ಚಿತ್ರೀಕರಿಸಲಾಗಿದೆ. ಇದಕ್ಕೆ ಒಟ್ಟು 20 ಲಕ್ಷ ರೂ.ಗಳಷ್ಟು ಖರ್ಚಾಗಿದೆ. ಯಾವ ಪ್ರತಿಫಲಾಪೇಕ್ಷೆಯೂ ಇಲ್ಲದೆ ನಮ್ಮ ಮೈಸೂರಿನ ದಸರಾದ ವೈಭವವನ್ನು ಪ್ರಪಂಚದಾದ್ಯಂತ ಎಲ್ಲಾ ಜನರಿಗೂ ಸಾಮಾಜಿಕ ಜಾಲತಾಣಗಳ ಮೂಲಕ ತಲುಪಿಸಲು ನಮ್ಮ ಸಂಸ್ಥೆ ಮಾಡಿರುವ ಪ್ರಯತ್ನ ಇದು ಎಂದರು.ದಸರಾ ಸಂದರ್ಭದಲ್ಲಿ ನಡೆಯುವ ಯುವ ದಸರಾ, ಆಹಾರ ಮೇಳ, ಪಂಜಿನ ಕವಾಯತು, ಫಲಪುಷ್ಪ ಪ್ರದರ್ಶನ, ಪೆಟ್ಶೋ, ವಿಜಯದಶಮಿ ಮೆರವಣಿಗೆ, ವಸ್ತುಪ್ರದರ್ಶನ ಸೇರಿದಂತೆ ಮೈಸೂರಿನ ಅರಮನೆಯ ವೈಭವ, ಚಾಮುಂಡಿ ಬೆಟ್ಟದಲ್ಲಿ ನಡೆಯುವ ಪೂಜೆ- ಪುನಸ್ಕಾರಗಳನ್ನು ಈ ವಿಡಿಯೋದಲ್ಲಿ ಬಹಳ ವಿವರವಾಗಿ ತೋರಿಸಲಾಗಿದೆ. ಈ ವಿಡಿಯೋವನ್ನು ಇನ್ನು ಮುಂದೆ ನಡೆಯುವ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಎಲ್ಲಾ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಎಲ್ಲಾ ಕಾರ್ಯಕ್ರಮ, ಸಮಾರಂಭ, ಟ್ರಾವಲ್ಮಾರ್ಟ್ಗಳಲ್ಲಿ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಪ್ರದರ್ಶಿಸುವುದಾಗಿ ಅವರು ಹೇಳಿದರು.ಮೈಸೂರು ದಸರಾ ಎಂದರೆ ಮೈಸೂರಿನ ಪ್ರವಾಸೋದ್ಯಮ ಪ್ರಮುಖ ಭಾಗ. ವರ್ಷದ ಉಳಿದ ಸಮಯವಿಡೀ ಮೈಸೂರಿಗೆ ಬರುವಷ್ಟೂ ಜನರು ಕೇವಲ ದಸರಾ ಸಮಯದಲ್ಲೇ ಬರುತ್ತಾರೆ. ಆದರೂ ಇನ್ನೂ ಬೇರೆ ಬೇರೆ ಪ್ರಾಂತ್ಯಗಳ ಎಷ್ಟೋ ಜನರಿಗೆ ನಮ್ಮ ಊರಿನ ಈ ಹಬ್ಬದ ಬಗ್ಗೆ ತಿಳಿದಿಲ್ಲ. ದಸರಾ ಒಂದು ದಿನ ಮಾತ್ರವಲ್ಲ, ಒಂಭತ್ತು ದಿನಗಳ ಕಾಲವೂ ನಡೆಯುತ್ತದೆ ಎಂಬುದನ್ನು ಜನರಿಗೆ ಮನದಟ್ಟು ಮಾಡಬೇಕು ಎಂಬುದು ನಮ್ಮ ಉದ್ದೇಶ ಎಂದರು.ಸೇಫ್‌ ವೀಲ್ಸ್‌ ಸಂಸ್ಥೆಯ ವಿಸಿಟ್‌ ಮೈಸೂರು ಯೂಟ್ಯೂಬ್ ನಲ್ಲಿ ಈ ವಿಡಿಯೋ ವೀಕ್ಷಿಸಬಹುದು ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಷಮುಕ್ತ ಬೇಸಾಯದಿಂದಲೇ ರೈತನಿಗೆ ಕೃಷಿಯಲ್ಲಿ ನೆಮ್ಮದಿ
ಶ್ರೀಶೈಲೇಶ್ವರ ವಿದ್ಯಾಕೇಂದ್ರದಲ್ಲಿ ಕಾರ್ಗಿಲ್ ವಿಜಯ್ ದಿವಸ್