ಕನ್ನಡಪ್ರಭ ವಾರ್ತೆ ಪಾಂಡವಪುರ
ಮೈಸೂರಿನ ಎಂಐಟಿ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ 3ನೇ ವರ್ಷದ ಎಂಜಿನಿಯರ್ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರು 5 ದಿನಗಳ ಕಾಲ ಬೆಳಗ್ಗೆಯಿಂದ ಸಂಜೆ ತನಕ ಸ್ವಚ್ಛತಾ ಕಾರ್ಯ ನಡೆಸಿದ್ದಾರೆ.
ಕುಂತಿಬೆಟ್ಟದಲ್ಲಿರುವ ಪ್ರವಾಸಿ ಸ್ಥಳವಾದ ಕಲ್ಯಾಣಿ, ದೇವಸ್ಥಾನದ ಆವರಣ, ದಾರಿಗಳು, ಬೆಟ್ಟ ಹತ್ತುವ ಮೆಟ್ಟಿಲುಗಳು, ಕೆಲ ಬಂಡೆಗಳು, ಗುಹೆ, ಬೃಹತ್ ಬಸವ ವಿಗ್ರಹ ಸೇರಿದಂತೆ ಇನ್ನಿತರ ಸ್ಥಳಗಳನ್ನು ಎಂಐಟಿ ವಿದ್ಯಾರ್ಥಿಗಳು ಸಂಪೂರ್ಣ ಸ್ವಚ್ಛಗೊಳಿಸಿ, ಸುಂದರವಾಗಿ ಕಾಣುವಂತೆ ಶ್ರಮಿಸಿದ್ದಾರೆ.ಮೈಸೂರು ಎಂಐಟಿ ಕಾಲೇಜಿನ ಶ್ರಮದಾನದಲ್ಲಿ ಎಂಐಟಿ ಸಂಸ್ಥೆ ಅಧ್ಯಕ್ಷ ನ್ಯಾಮನಹಳ್ಳಿ ಮುರಳಿ, ಪ್ರಾಂಶುಪಾಲ ನರೇಶ್ ಕುಮಾರ್, ಸಿಎಸ್ ವಿಭಾಗದ ಮುಖ್ಯಸ್ಥ ಡಾ.ಶಿವಮೂರ್ತಿ ನೇತೃತ್ವದಲ್ಲಿ ವಿದ್ಯಾರ್ಥಿಗಳಾದ ಎಸ್.ಮನೋಜ್, ಜಿ.ಮಿಲಿಂದ್ ಶರ್ಮಾ, ಕೆ.ನಿಸರ್ಗ, ಬಿ.ಎಸ್.ನಿಶಾಂತ್ ಕುಮಾರ್, ಪಿ.ಆರ್.ನಿಶಾಂತ್, ಎನ್.ಆರ್.ಪ್ರವೀಣ್, ಆರ್.ನಿತಿನ್, ಎಸ್.ರಕ್ಷಿತ್, ರವೀಂದ್ರ ಗೌಡ ಎಸ್ ಪಾಟೀಲ್, ಎಸ್.ಸಮರ್ಥ ಚೌದರಿ, ಆರ್.ಶ್ರೇಯಸ್, ಜಿ.ಎನ್.ಸುಮಂತ್ ಸೇರಿದಂತೆ ಅನೇಕ ವಿದ್ಯಾರ್ಥಿಗಳಿದ್ದರು.
ಮಂಡ್ಯ: ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ಮತ್ತು ಕೆನರಾ ಬ್ಯಾಂಕ್‌ನ ಸಹಯೋಗದಲ್ಲಿ ನಡೆಸುತ್ತಿರುವ ರುಡ್ ಸೆಟ್ ಸಂಸ್ಥೆಯಿಂದ ಎಂಬ್ರಾಯ್ಡರಿ ಮತ್ತು ಫ್ಯಾಬ್ರಿಕ್ ಪೇಟಿಂಗ್ ಕುರಿತ 30 ದಿನಗಳ ಉಚಿತ ತರಬೇತಿಯು ಮೇ 15 ರಿಂದ ಆರಂಭವಾಗಲಿದ್ದು, ಗ್ರಾಮೀಣ ಆಸಕ್ತ ಯುವಕ-ಯುವತಿಯರಿಂದ ಅರ್ಜಿ ಆಹ್ವಾನಿಸಲಾಗಿದೆ.
ತರಬೇತಿಯು ಕಡ್ಡಾಯವಾಗಿ ವಸತಿಯುತವಾಗಿದೆ. ತರಬೇತಿಯ ಅವಧಿಯಲ್ಲಿ ಉಚಿತವಾಗಿ ಊಟ ಮತ್ತು ವಸತಿ ನೀಡಲಾಗುವುದು ಹಾಗೂ ತರಬೇತಿ ಪೂರ್ಣಗೊಂಡ ನಂತರ ಕೇಂದ್ರ ಸರ್ಕಾರದ ಗ್ರಾಮಿಣಾಭಿವೃದ್ಧಿ ಸಚಿವಾಲಯದಿಂದ ಪ್ರಮಾಣಪತ್ರವನ್ನು ವಿತರಿಸಲಾಗುವುದು.
ಮಂಡ್ಯ: ರಾಜ್ಯ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಅಂಗಸಂಸ್ಥೆ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ರಾಷ್ಟ್ರೀಯ ಕೃಷಿ ವಿಸ್ತರಣೆ ನಿರ್ವಹಣೆ ಸಂಸ್ಥೆ, ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ, ಭಾರತ ಸರ್ಕಾರ ಸಹಯೋಗದೊಂದಿಗೆ Application of UAVs and Drones for Agriculture ವಿಷಯ ಕುರಿತು ಮೇ 14 ರಿಂದ 16 ರವರೆಗೆ 3 ದಿನಗಳ ಕಾಲ ಆನ್ ಲೈನ್ ಮೂಲಕ ತರಬೇತಿ ಕಾರ್ಯಗಾರವನ್ನು ಆಯೋಜಿಸಲಾಗಿದೆ. ಸಮ್ಮೇಳನದಲ್ಲಿ ವಿಷಯಾಧರಿತ ಉಪನ್ಯಾಸಗಳನ್ನು ನೀಡಲು ವಿವಿಧ ಪ್ರತಿಷ್ಠಿತ ಸಂಸ್ಥೆಗಳಿಂದ ನುರಿತ ವಿಜ್ಞಾನಿಗಳನ್ನು ಆಹ್ವಾನಿಸಲಾಗುತ್ತಿದೆ. ಸ್ನಾತಕೋತ್ತರ ವಿಜ್ಞಾನ ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು, ಪ್ರಾಧ್ಯಾಪಕರು, ಯುವ ವಿಜ್ಞಾನಿಗಳು ಮೇ 10 ರೊಳಗೆ ತಮ್ಮ ಹೆಸರು ನೊಂದಾಯಿಸಿಕೊಂಡು ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು.