ಮೈಸೂರಿನ ಈ ರೈತನ ಜಮೀನಲ್ಲಿ ಮಾಡೆಲ್‌ಗಳೇ ದೃಷ್ಟಿ ಬೊಂಬೆಗಳು ! ಏನ್‌ ಐಡಿಯಾ ಗುರು !

Published : Feb 21, 2025, 10:28 AM IST
paddy

ಸಾರಾಂಶ

ಫಲವತ್ತಾದ ಬಾಳೆ ಬೆಳೆಗೆ ಸಾರ್ವಜನಿಕರ ದೃಷ್ಟಿ ಬೀಳಬಾರದೆಂಬ ಕಾರಣಕ್ಕೆ ರೈತನೊಬ್ಬ ತನ್ನ ಜಮೀನಿನ ಸುತ್ತಲೂ ದೃಷ್ಟಿ ಬೊಂಬೆಯ ಬದಲಾಗಿ ಮಾಡೆಲ್‌ಗಳ ಅರೆಬೆತ್ತಲೆ ಫೋಟೋಗಳನ್ನು ಅಳವಡಿಸಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಕಕ್ಕರಹಟ್ಟಿ ಗ್ರಾಮದಲ್ಲಿ ನಡೆದಿದೆ.

ನಂಜನಗೂಡು : ಫಲವತ್ತಾದ ಬಾಳೆ ಬೆಳೆಗೆ ಸಾರ್ವಜನಿಕರ ದೃಷ್ಟಿ ಬೀಳಬಾರದೆಂಬ ಕಾರಣಕ್ಕೆ ರೈತನೊಬ್ಬ ತನ್ನ ಜಮೀನಿನ ಸುತ್ತಲೂ ದೃಷ್ಟಿ ಬೊಂಬೆಯ ಬದಲಾಗಿ ಮಾಡೆಲ್‌ಗಳ ಅರೆಬೆತ್ತಲೆ ಫೋಟೋಗಳನ್ನು ಅಳವಡಿಸಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಕಕ್ಕರಹಟ್ಟಿ ಗ್ರಾಮದಲ್ಲಿ ನಡೆದಿದೆ. 

ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಕಕ್ಕರಹಟ್ಟಿ ನಿವಾಸಿ ಸೋಮೇಶ್ ಎನ್ನುವವರೇ ಮಾಡೆಲ್‌ಗಳ ಭಾವಚಿತ್ರ ಅಳವಡಿಸಿರುವ ರೈತ. ಸೋಮೇಶ್ ತಮ್ಮ 4 ಎಕರೆ ಜಮೀನಿನಲ್ಲಿ ಬೆಳೆದಿರುವ ಬಾಳೆ ಬೆಳೆ ಫಲವತ್ತಾಗಿ ನೋಡುಗರನ್ನು ಆಕರ್ಷಿಸುತ್ತಿದೆ. ಹಾಗಾಗಿ ತನ್ನ ಬೆಳೆಗಳಿಗೆ ಜನರ ದೃಷ್ಟಿ ಬೀಳಬಾರದೆಂಬ ಉದ್ದೇಶದಿಂದ ಜಮೀನಿನ ಸುತ್ತಲೂ ಸುಮಾರು 10 ಸ್ಥಳಗಳಲ್ಲಿ ಮಾಡೆಲ್‌ಗಳ ಅರೆ ಬೆತ್ತಲೆ ಭಾವಚಿತ್ರ ಅಳವಡಿಸಿದ್ದಾರೆ.

ರಸ್ತೆ ಮಾರ್ಗದಲ್ಲಿ ಸಾಗುವ ಜನರು ಬಾಳೆ ಗಿಡದತ್ತ ಕಣ್ಣು ಹಾಯಿಸದೆ ಸುತ್ತಲೂ ಅಳವಡಿಸಿರುವ ಮಾಡೆಲ್ ಫೋಟೋಗಳನ್ನು ಕಣ್ತುಂಬಿಕೊಂಡು ಸಾಗುತ್ತಿದ್ದು, ಕೆಲ ಪಡ್ಡೆ ಹುಡುಗರ ನಿದ್ದೆಗೆಡಿಸಿದೆ. ಇದರಿಂದ ಕೆಲವರಿಗೆ ಇರಿಸು ಮುರಿಸು ಉಂಟಾಗಿ ಗ್ರಾಮಸ್ಥರನ್ನೂ ಕೆರಳಿಸಿದೆ. 

PREV
Stay updated with the latest news from Mysore News (ಮೈಸೂರು ಸುದ್ದಿ) — including local governance, city/civic developments, tourism and heritage, culture and festivals, crime reports, environment, education, business and community events from Mysore district and city on Kannada Prabha News.

Recommended Stories

ಸ್ವದೇಶಿ ಬಳಸಿ ದೇಶ ಬೆಳಸಿ ಅಭಿಯಾನ ಬದಲಾವಣೆಗೆ ನಾಂದಿ
ಯುವ ಬ್ರಿಗೇಡ್ ವತಿಯಿಂದ ಕಪಿಲಾ ನದಿ ಸ್ವಚ್ಛತೆ