ಮೈಸೂರಿಗೆ ಬಂದಾಗ 4945 ಕೆ.ಜಿ. ಇದ್ದ ದಸರಾ ಆನೆ ಭೀಮನ ತೂಕ ಈಗ 5380 ಕೆ.ಜಿ. ಏರಿಕೆ

ಸಾರಾಂಶ

ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿಯಲ್ಲಿ ಭಾಗವಹಿಸಲು ಕಾಡಿನಿಂದ ನಾಡಿಗೆ ಆಗಮಿಸಿರುವ ಗಜಪಡೆಯ ಭೀಮ ಆನೆ 435 ಕೆ.ಜಿ. ತೂಕ ಹೆಚ್ಚಿಸಿಕೊಂಡಿದೆ. ಆ ಮೂಲಕ ಭೀಮ ತನ್ನ ಹೆಸರಿಗೆ ತಕ್ಕಂತೆ ತಾನೇ ಬಲಶಾಲಿ ಎಂಬುದನ್ನು ಸಾಬೀತುಪಡಿಸಿದೆ.

ಬಿ. ಶೇಖರ್‌ ಗೋಪಿನಾಥಂ

 ಮೈಸೂರು : ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿಯಲ್ಲಿ ಭಾಗವಹಿಸಲು ಕಾಡಿನಿಂದ ನಾಡಿಗೆ ಆಗಮಿಸಿರುವ ಗಜಪಡೆಯ ಭೀಮ ಆನೆ 435 ಕೆ.ಜಿ. ತೂಕ ಹೆಚ್ಚಿಸಿಕೊಂಡಿದೆ. ಆ ಮೂಲಕ ಭೀಮ ತನ್ನ ಹೆಸರಿಗೆ ತಕ್ಕಂತೆ ತಾನೇ ಬಲಶಾಲಿ ಎಂಬುದನ್ನು ಸಾಬೀತುಪಡಿಸಿದೆ.

ಈ ಬಾರಿಯ ದಸರೆಯಲ್ಲಿ ಭಾಗವಹಿಸಲು ಎರಡು ತಂಡಗಳಲ್ಲಿ ಒಟ್ಟು 14 ಆನೆಗಳನ್ನು ತರಲಾಗಿದೆ. ನಗರದ ಧನ್ವಂತ್ರಿ ರಸ್ತೆಯಲ್ಲಿರುವ ಸಾಯಿರಾಂ ವೇ ಬ್ರಿಡ್ಜ್‌ನಲ್ಲಿ 14 ಆನೆಗಳ ತೂಕ ಪರಿಶೀಲನೆ ಕಾರ್ಯ ಸೋಮವಾರ ಬೆಳಗ್ಗೆ ನಡೆಯಿತು. ಈ ತೂಕ ಪರೀಕ್ಷೆಯಲ್ಲಿ ಭೀಮ 435 ಕೆ.ಜಿ. ಹೆಚ್ಚಿಸಿಕೊಂಡು ಮೊದಲ ಸ್ಥಾನ ಪಡೆಯಿತು. ಬಂದಾಗ 4945 ಕೆ.ಜಿ. ಇದ್ದ ಭೀಮ ಈಗ 5380 ಕೆ.ಜಿ. ತೂಕ ಹೊಂದಿದೆ. ಪ್ರಶಾಂತ ಮತ್ತು ಏಕಲವ್ಯ ಆನೆಗಳು 365 ಕೆ.ಜಿ. ತೂಕ ಹೆಚ್ಚಿಸಿಕೊಂಡು 2ನೇ ಸ್ಥಾನ ಹಂಚಿಕೊಂಡಿವೆ.

ಯಾವ ಆನೆ? ಎಷ್ಟು ತೂಕ? (ಕೆ.ಜಿ.ಗಳಲ್ಲಿ)

ಆನೆ ಬಂದಾಗ ಈಗ ಹೆಚ್ಚಿದ ತೂಕ

ಭೀಮ 4945 5380 435

ಪ್ರಶಾಂತ 4875 5240 365

ಏಕಲವ್ಯ 4730 5095 365

ಸುಗ್ರೀವ 5190 5545 355

ಗೋಪಿ 4970 5280 310

ರೋಹಿತ್ 3625 3930 305

ಅಭಿಮನ್ಯು 5560 5820 260

ಮಹೇಂದ್ರ 4910 5150 240

ಹಿರಣ್ಯಾ 2930 3160 230

ಕಂಜನ್ 4515 4725 210

ಲಕ್ಷ್ಮಿ 2480 2625 145

ಧನಂಜಯ 5155 5255 100

ದೊಡ್ಡಹರವೆ ಲಕ್ಷ್ಮಿ 3485 3570 85

ವರಲಕ್ಷ್ಮಿ 3495 3555 60

ಪ್ರಶಾಂತ ಆನೆ ಬಂದಾಗ 4875 ಕೆ.ಜಿ.ಇತ್ತು. ಈಗ 5240 ಕೆ.ಜಿ. ಹೆಚ್ಚಾಗಿದೆ. ಏಕಲವ್ಯ ಆನೆ ಬಂದಾಗ 4730 ಕೆ.ಜಿ. ತೂಕವಿತ್ತು. ಈಗ 5095 ಕೆ.ಜಿ. ಹೆಚ್ಚಿಸಿಕೊಂಡಿದೆ. ಅಂಬಾರಿ ಆನೆ ಅಭಿಮನ್ಯು ಬಂದಾಗ 5560 ಕೆ.ಜಿ. ತೂಕವಿದ್ದು, ಈಗ 5820 ಕೆ.ಜಿ. ಭಾರವಿದ್ದು, 260 ಕೆ.ಜಿ. ತೂಕ ಹೆಚ್ಚಿಸಿಕೊಂಡು 6ನೇ ಸ್ಥಾನದಲ್ಲಿದೆ.

ದೊಡ್ಡಹರವೆ ಲಕ್ಷ್ಮಿ ಆನೆ ಬಂದಾಗ 3485 ಕೆ.ಜಿ. ಇದ್ದು, ಈಗ 3570 ಕೆ.ಜಿ. ಇದೆ, 85 ಕೆ.ಜಿ. ತೂಕ ಹೆಚ್ಚಾಗಿದೆ. ವಯಸ್ಸಿನ ಕಾರಣಕ್ಕೆ ತಾಲೀಮಿನಿಂದ ದೂರ ಉಳಿದಿರುವ ವರಲಕ್ಷ್ಮಿ ಆನೆ ಬಂದಾಗ 3495 ಕೆ.ಜಿ. ಇದ್ದು, ಈಗ 3555 ಕೆ.ಜಿ. ಭಾರವಿದ್ದು, 60 ಕೆ.ಜಿ. ಮಾತ್ರ ತೂಕ ಹೆಚ್ಚಿಸಿಕೊಂಡು ಕೊನೆಯ ಸ್ಥಾನದಲ್ಲಿದೆ.

Share this article