ಮೈಸೂರು: ತುಘಲಕ್‌ ದಸರಾ ಎಂದು ಆರೋಪಿಸಿ ಪ್ರತಿಭಟನೆ

KannadaprabhaNewsNetwork |  
Published : Oct 25, 2026, 01:15 AM IST
10 | Kannada Prabha

ಸಾರಾಂಶ

ಮೈಸೂರಿನಲ್ಲಿ ಈ ಬಾರಿ ನಡೆದ ವಿಶ್ವ ವಿಖ್ಯಾತ ದಸರಾ ಅವ್ಯವಸ್ಥೆ ಅವಘಡಗಳ ಕೇಂದ್ರ ಬಿಂದುವಾಗಿದೆ. ಜಿಲ್ಲಾಡಳಿತದ ವೈಫಲ್ಯತೆ ಅಧಿಕಾರಿಗಳ ದಬ್ಬಾಳಿಕೆ ಹೊರಗಡೆಯಿಂದ ಬಂದ ಪೊಲೀಸ್ ಇಲಾಖೆಯ ಬೇಜವಾಬ್ದಾರಿತನ ಎದ್ದು ಕಾಣುತ್ತಿತ್ತು.

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರಿನಲ್ಲಿ ನಡೆದಿರುವುದು ಪ್ರಜಾ ದಸರಾನಾ ಇಲ್ಲ ತುಘಲಕ್ ದಸರಾನಾ? ಅಧಿಕಾರಿಗಳ ದರ್ಬಾರ್ ದಸರಾ ಆಗಿ ಪರಿವರ್ತನೆ ಆಗುತ್ತಿದೆ ಎಂದು ಆರೋಪಿಸಿ ಮೈಸೂರು ಕನ್ನಡ ವೇದಿಕೆ ಪದಾಧಿಕಾರಿಗಳು ಶನಿವಾರ ನಗರದ ಹಳೇ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟಿಸಿದರು.

ಮೈಸೂರಿನಲ್ಲಿ ಈ ಬಾರಿ ನಡೆದ ವಿಶ್ವ ವಿಖ್ಯಾತ ದಸರಾ ಅವ್ಯವಸ್ಥೆ ಅವಘಡಗಳ ಕೇಂದ್ರ ಬಿಂದುವಾಗಿದೆ. ಜಿಲ್ಲಾಡಳಿತದ ವೈಫಲ್ಯತೆ ಅಧಿಕಾರಿಗಳ ದಬ್ಬಾಳಿಕೆ ಹೊರಗಡೆಯಿಂದ ಬಂದ ಪೊಲೀಸ್ ಇಲಾಖೆಯ ಬೇಜವಾಬ್ದಾರಿತನ ಎದ್ದು ಕಾಣುತ್ತಿತ್ತು. ವಿಪರ್ಯಾಸವೆಂದರೆ ಈ ಬಾರಿಯ ದಸರಾ ಸಚಿವರಿಗೆ ಅವಕಾಶ ಕಲ್ಪಿಸಿಕೊಡುವುದರಲ್ಲಿ ದುರ್ನಡತೆ ತೋರಿರುವ ಕೆಲವು ಪೊಲೀಸ್ ಅಧಿಕಾರಿಗಳ ದಬ್ಬಾಳಿಕೆ, ಮಾಧ್ಯಮಗಳ ಮೇಲೆ ನಡೆದುಕೊಂಡ ರೀತಿ, ಮಗುವಿನ ಮೇಲೆ ನಡೆದ ಲಾಠಿಯ ಹಲ್ಲೆ ಇವೆಲ್ಲವೂ ಪೊಲೀಸ್ ಇಲಾಖೆಯ ವೈಫಲ್ಯತೆಗೆ ಸಾಕ್ಷಿ ಎಂದು ಅವರು ಆರೋಪಿಸಿದರು.

ರಾಜ್ಯದ ಮುಖ್ಯಮಂತ್ರಿಗಳು ಈ ಬಾರಿ ದಸರಾ ನಿರ್ವಹಣೆಗಾಗಿ ಹಲವು ಸಚಿವರ ನೇಮಕ ಮಾಡಿದ್ದರು. ಮತ್ತೊಂದೆಡೆ ಸಚಿವರ ಪ್ರವೇಶಕ್ಕೆ ನಿರಾಕರಿಸಿದ ಪೊಲೀಸರ ನಡುವಳಿಕೆ ನೋಡಿದರೆ ಯಾವ ಪುರುಷಾರ್ಥಕ್ಕೆ ದಸರಾ ಮಾಡಿದರೂ ಎಂಬ ಭಾವನೆ ಜನರಲ್ಲಿ ಮೂಡಿದೆ, ಇದೆ ಕೆಲವು ವರ್ಷಗಳ ಹಿಂದೆ ನಾಡಿನ ಅಧಿದೇವತೆ ಚಾಮುಂಡೇಶ್ವರಿ ಹೆಸರಿನಲ್ಲಿ ನಡೆಯುವ ಮೈಸೂರು ದಸರಾ ತನ್ನದೇ ಆದ ಸಂಪ್ರದಾಯ ಪದ್ದತಿಯನ್ನು ಅಳವಡಿಸಿಕೊಂಡಿದ್ದು ಅಂಬಾರಿ ಹೊರುವ ಆನೆಯ ಆಯ್ಕೆಯಲ್ಲಿ ನೀತಿ ನಿಯಮ ಪಾಲನೆ ಮಾಡುತ್ತಿದ್ದರು.

ಶಿವಮೊಗ್ಗದಲ್ಲಿ ನಡೆದ ಘಟನೆಯಿಂದ ಪಾಠ ಕಲಿಯಬೇಕಿದೆ ಹಾಗೂ ವಿಶ್ವವಿಖ್ಯಾತ ದಸರಾಗಳಲ್ಲಿ ಅನೇಕ ವರ್ಷಗಳಿಂದ ಸಂಪ್ರದಾಯವಾಗಿ ರೂಢಿಸಿಕೊಂಡು ಬಂದಿದ್ದ ಜಟ್ಟಿ ಕಾಳಗ ನಿಲ್ಲಿಸಲಾಗಿದೆ ಎಂದು ಅವರು ಆರೋಪಿಸಿದರು.

ಈ ಸಂಬಂಧ ತಪ್ಪಿತಸ್ಥರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ವೇದಿಕೆ ಅಧ್ಯಕ್ಷ ಎಸ್, ಬಾಲಕೃಷ್ಣ ನಾಲಾ ಬೀದಿ ರವಿ ಬೋಗಾದಿ ಸಿದ್ದೇಗೌಡ ಗೋಪಿ, ಸಾಯಿ ಚಾಮರಾಜು ಮಂಡಕಳ್ಳಿ, ಪ್ಯಾಲೇಸ್ ಬಾಬು ಬೀಡಾ ಬಾಬು, ಸುನೀಲ್, ಎಲ್ಐಸಿ ಸಿದ್ದಪ್ಪ ಗೋವಿಂದರಾಜು, ಕಾವೇರಮ್ಮ, ಮಾಲಿನಿ, ಭವಾನಿ, ಹೊನ್ನಕೆರೆ ಸ್ವಾಮಿ, ಹರೀಶ್, ಮಾದಪ್ಪ, ಶಿವಕುಮಾರ್ ಸ್ವಾಮಿ, ಚಿನ್ನಪ್ಪ, ಶಿವುಗೌಡ, ಸ್ವಾಮಿ ಗೈಡ್, ಮನೋಹರ್, ಮಹದೇವ್ ಕಾವಲು ಪಡೆ ಬಸವಣ್ಣ ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೃಷಿಯಲ್ಲಿ ಗೆದ್ದ ಸಿರಿಗೆರೆಯ ಎಂಟೆಕ್ ಪದವೀಧರ!
ಎನ್‌ಸಿಡಿ ತಪಾಸಣೆಯಲ್ಲಿ ಚಿಕ್ಕಮಗಳೂರಿಗೆ ರಾಷ್ಟ್ರಮಟ್ಟದ ಪ್ರಶಸ್ತಿ: ಯು.ಟಿ. ಖಾದರ್ ಅಭಿನಂದನೆ