ಸರ್ಕಾರಿ ಶಾಲಾ ಮಕ್ಕಳು ಮುಖ್ಯ ಶಿಕ್ಷಕ ಪ್ರಕಾಶ್ ಮಾರ್ಗದರ್ಶನದಲ್ಲಿ ಪೌರಾಣಿಕ ನಾಟಕದಲ್ಲಿ ಅಭಿನಯಿಸಿದರು.
ನೆಲಮಂಗಲ: ರಾಮಾಯಣ, ಮಹಾಭಾರತ ಕಥೆಗಳು, ಪಾತ್ರಗಳು ಹಾಗೂ ಘಟನೆಗಳನ್ನು ಆಧರಿಸಿ ರಚಿತವಾದ ಪೌರಾಣಿಕ ನಾಟಕಗಳು ಧಾರ್ಮಿಕ, ನೈತಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಬಿಂಬಿಸುತ್ತವೆ ಮತ್ತು ಜನಸಾಮಾನ್ಯರಿಗೆ ಆದರ್ಶ ಜೀವನ ಮಾರ್ಗ ತೋರಿಸುತ್ತವೆ ಎಂದು ನೆಲಮಂಗಲ ಯೋಜನಾ ಪ್ರಾಧಿಕಾರದ ಮಾಜಿ ಸದಸ್ಯ ಚಿಕ್ಕನಾಗಯ್ಯ ತಿಳಿಸಿದರು.
ನಗರದ ಜಕ್ಕಸಂದ್ರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಶ್ರೀ ವಿನಾಯಕ ಕೃಪಾಪೋಷಿತ ನಾಟಕ ಮಂಡಳಿಯಿಂದ ಸರ್ಕಾರಿ ಶಾಲಾ ಮಕ್ಕಳು ಪಾತ್ರಧಾರಿಗಳಾಗಿ ಪ್ರದರ್ಶಿಸಿದ ಕುರುಕ್ಷೇತ್ರ ಪೌರಾಣಿಕ ನಾಟಕಕ್ಕೆ ಚಾಲನೆ ನೀಡಿ ಮಾತನಾಡಿದರು. ಸರ್ಕಾರಿ ಶಾಲಾ ಮಕ್ಕಳು ಮುಖ್ಯ ಶಿಕ್ಷಕ ಪ್ರಕಾಶ್ ಮಾರ್ಗದರ್ಶನದಲ್ಲಿ ಪೌರಾಣಿಕ ನಾಟಕದಲ್ಲಿ ಅಭಿನಯಿಸಿದರು. ಡ್ರಾಮಾ ಮಾಸ್ಟರ್ ಹೊನ್ನಸಂದ್ರ ಇಂದ್ರ ಕುಮಾರ್ ಸಂಗೀತ ನಿರ್ದೇಶನ ನೀಡಿದರು. ಕುರುಬರ ಸಂಘದ ಕಾರ್ಯದರ್ಶಿ ಬೀಡಿ ಗಂಗರಾಜು, ನೆಲಮಂಗಲ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಂ ನಾರಾಯಣಗೌಡ, ಗ್ರಾಪಂ ಸದಸ್ಯರಾದ ಡಿ.ನಾಗರಾಜು, ಮುನಿಬೈರಮ್ಮ, ರಾಜಣ್ಣ, ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಲೋಕೇಶ್, ಮಹಾಸಭಾಧ್ಯಕ್ಷ ಎನ್.ರಾಜಶೇಖರ್, ಸರ್ಕಾರ ನೌಕರ ಸಂಘದ ಅಧ್ಯಕ್ಷ ಕೆ.ಎನ್.ನಾಗೇಶ್ ಇತರರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.