ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ
ಜ್ವಾಲಾಮಾಲಿನ ಜೇಸಿ ಸಂಸ್ಥೆಗೆ ಜೇಸಿ ವಲಯ 14ರ ಅಧ್ಯಕ್ಷರ ಅಧಿಕೃತ ಭೇಟಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ. ತೀರ್ಥಹಳ್ಳಿಯಲ್ಲಿ 8 ಶಾಲಾ ಕಾಲೇಜುಗಳಲ್ಲಿ 3 ಜೇಸಿ ವಲಯ ಗಳ 3 ಘಟಕದ ಅಧ್ಯಕ್ಷರು ಸೇರಿ ಒಂದೇ ದಿನ 40 ತರಬೇತಿದಾರರ ತಂಡದೊಂದಿಗೆ 117 ತರಬೇತಿ ನೀಡಿದ್ದು 2500 ಮಕ್ಕಳು ತರಬೇತಿ ಪ್ರಯೋಜನ ಪಡೆದರು. ಇದೊಂದು ಜೇಸಿ ಇತಿಹಾಸದಲ್ಲಿ ಹೊಸ ದಾಖಲೆ. ಜೆಸಿಐ ಬ್ರಾಂಡ್ ಹೆಸರಿನಲ್ಲಿ ಶ್ರೀನಿಧಿ ಗ್ರಾಫಿಕ್ಸ್ ನಾಮಫಲಕ ಉದ್ಘಾಟಿಸಿದ್ದು ಸಂತೋಷ ತಂದಿದೆ. ವಲಯ 14 ರ ಬ್ಯುಸಿನೆಸ್ ಬೋರ್ಡು ಸಹ ಇದೇ ಪ್ರಥಮ. ಜ್ವಾಲಾಮಾಲಿನಿ ಜೇಸಿ ಸಂಸ್ಥೆ ಅಧ್ಯಕ್ಷ ಹಾಗೂ ತಂಡ ಉತ್ಸಾಹದಿಂದ ಸಮಾಜ ಮುಖಿ ಕೆಲಸ ಮಾಡುತ್ತಿದ್ದಾರೆ. ಜೇಸಿ ಸದಸ್ಯರು ಕಟ್ಟುವ ಶುಲ್ಕಕ್ಕೆ ಜೆಸಿಐ ಭಾರತ ಸಹ ವೆಲ್ಫೇರ್ ನಿಧಿ ಕೊಡುತ್ತದೆ ಎಂದರು.
ಸಭೆ ಅಧ್ಯಕ್ಷತೆ ವಹಿಸಿದ್ದ ಜ್ವಾಲಾಮಾಲಿನಿ ಜೇಸಿ ಸಂಸ್ಥೆ ಅಧ್ಯಕ್ಷ ಆದರ್ಶ ಬಿ ಗೌಡ ಮಾತನಾಡಿ ವಲಯ 14 ರ ಅಧ್ಯಕ್ಷರ ಅಧಿಕೃತ ಭೇಟಿ ದಿನದಂದೇ ಸದಸ್ಯರಿಗೆ ತರಬೇತಿ ನೀಡುತ್ತಿದ್ದೇವೆ. ಸೆ.6 ರಂದು ಮಡಕೇರಿ ಶುಂಠಿಕೊಪ್ಪದಲ್ಲಿ ನಡೆವ ಸಮ್ಮೇಳನದಲ್ಲಿ ಎಲ್ಲಾ ಸದಸ್ಯರು ಭಾಗವಹಿಸಬೇಕು ಎಂದು ಮನವಿ ಮಾಡಿದರು.ಜೆಸಿಐ ಕೊಪ್ಪ ಅಧ್ಯಕ್ಷೆ ಸುನೀತ ನೆಲಗದ್ದೆ ,ಎಸ್.ಎಸ್. ಸುಶಾಂತ್ ವರ್ಕ್ ಲೈಪ್ ಬ್ಯಾಲೆನ್ಸ್ ಎಂಬ ವಿಷಯದ ಬಗ್ಗೆ ತರಬೇತಿ ನೀಡಿದರು. ಸ್ವಾತಂತ್ರ್ಯ ದಿನಾಚರಣೆಯಲ್ಲಿ 220 ಅಡಿ ಎತ್ತರದ ಟವರ್ ಮೇಲೆ ಬಾವುಟ ಹಾರಿಸಿದ ಜೇಸಿ ಸದಸ್ಯ ಜೋಯಿ ಬ್ರೋ ಅವರನ್ನು ಸನ್ಮಾನಿಸಲಾಯಿತು.