ಹಬ್ಬಗಳು ಕೇವಲ ಒಂದು ಸಮಾಜಕ್ಕೆ ಸೀಮಿತವಾಗದೆ ಎಲ್ಲರೂ ಒಟ್ಟಾಗಿ ಸೇರಿ ಸಂತೋಷ ಹಂಚಿಕೊಳ್ಳುವಂತಾಗಬೇಕು.
ಕುಕನೂರು: ಭಾರತೀಯರಲ್ಲಿ ತಾರತಮ್ಯ ಬೇಡ, ಸಹಬಾಳ್ವೆ ಬಾಂಧವ್ಯ ಮುಖ್ಯ ಎಂದು ಕುದರಿಮೋತಿಯ ಶ್ರೀವಿಜಯಮಹಾಂತೇಶ್ವರ ಸ್ವಾಮೀಜಿ ಹೇಳಿದರು.
ತಾಲೂಕಿನ ಕುದರಿಮೋತಿ ಗ್ರಾಮದಲ್ಲಿ ಮಿಲಾದ್-ಉನ್-ನಬಿ ಪ್ರಯುಕ್ತ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಶುಭಾಶಯ ಕೋರಿ ಮಾತನಾಡಿದ ಅವರು, ಶ್ರೇಷ್ಠ ಸಂತ ಪೈಗಂಬರರ ಸಂದೇಶ ಕೇವಲ ಮುಸಲ್ಮಾನರಿಗೆ ಮಾತ್ರ ಸೀಮಿತವಲ್ಲ. ಜಾತಿಗಿಂತ ಪ್ರೀತಿ ಮುಖ್ಯ ಎಂಬುದೇ ಪ್ರವಾದಿಗಳ ಸಂದೇಶ. ಎಲ್ಲರೂ ಪರಸ್ಪರ ಪ್ರೀತಿ, ವಿಶ್ವಾಸ ಹಾಗೂ ಸಹೋದರತ್ವದಿಂದ ಬದುಕಬೇಕು. ಹಿಂದು–ಮುಸ್ಲಿಂ ಎಂಬ ಭೇದವಿಲ್ಲದೆ ಮಾನವೀಯತೆಯೇ ಎಲ್ಲರನ್ನೂ ಒಂದುಗೂಡಿಸುವ ಶಕ್ತಿ ಎಂದು ಹೇಳಿದರು.ಗ್ರಾಮದ ದಳಪತಿ ಹನುಮಗೌಡ ಕೆ.ಪೊಲೀಸ್ ಪಾಟೀಲ್, ಕುದರಿಮೋತಿ ಗ್ರಾಮದ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಹಿಂದು–ಮುಸ್ಲಿಂ ಭಾವೈಕ್ಯತೆಯ ಪರಂಪರೆ ಮುಂದುವರಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.
ಹಬ್ಬಗಳು ಕೇವಲ ಒಂದು ಸಮಾಜಕ್ಕೆ ಸೀಮಿತವಾಗದೆ ಎಲ್ಲರೂ ಒಟ್ಟಾಗಿ ಸೇರಿ ಸಂತೋಷ ಹಂಚಿಕೊಳ್ಳುವಂತಾಗಬೇಕು. ನಮ್ಮ ಗ್ರಾಮದಲ್ಲಿ ಎಲ್ಲ ಸಮಾಜದವರು ಪರಸ್ಪರ ಗೌರವ, ಪ್ರೀತಿ ಮತ್ತು ಸಹೋದರತ್ವದಿಂದ ಬದುಕುತ್ತಿರುವುದು ಹೆಮ್ಮೆಯ ಸಂಗತಿ. ಇದೇ ಸೌಹಾರ್ದತೆ ಮುಂದಿನ ಪೀಳಿಗೆಗೂ ಮಾದರಿಯಾಗಬೇಕು ಎಂದು ತಿಳಿಸಿದರು.ತಾಪಂ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ, ಸೈಲಾನ್ ಸಾಬ ಮಕಾಂದರ್, ಬಸಪ್ಪ ದೊಡ್ಡಮನಿ, ಮಹಾಂತಪ್ಪ ಶಿಡ್ನಳ್ಳಿ, ಮಂಜುನಾಥ ಗಟ್ಟೆಪ್ಪನವರ, ಶಿವಪ್ಪ ಬೇವಿನಗಡ, ಹಾಸೀಮಸಾಬ್ ಮಕಾಂದರ್, ಮಾಬುಸಾಬ ಮಕಾಂದರ್, ಡಾ.ಹುಸೇನ್ ಬಾಷ, ದ್ಯಾಮಣ್ಣ ಉಚ್ಚಲಕುಂಟಿ, ಮಂಜುನಾಥ ಸಜ್ಜನ್, ಬುಡ್ನೇಸಾಬ ನವಲಿ, ಶಿವಪ್ಪ ಬೇವಿನಗಿಡದ್, ಸೋಮಣ್ಣ ಮೂಲಿಮನಿ, ಅಶೋಕ ಗಟ್ಟೆಪ್ಪನವರ, ಶ್ರೀಕಾಂತ್ ಸಜ್ಜನ್, ಹುಸೇನಬಾಷ ಚಂಡಿನಾಳ, ಮಂಜುನಾಥ ನಾಗಲಿಕರ್, ನಾಗರಾಜ ಕೆಂಗಾರ್, ಮಂಜುನಾಥ ಕನ್ಯೇಳ ಸೇರಿದಂತೆ ಇತರರು ಇದ್ದರು.