ಮೈಸೂರಿನ ಮದರ್‌ ಹುಡ್ ಹಾಸ್ಪಿಟಲ್‌ ಗೆ ಎನ್‌.ಎಬಿಎಚ್ ನರ್ಸಿಂಗ್ ಉತ್ಕೃಷ್ಟತೆ ಪ್ರಮಾಣೀಕರಣ

KannadaprabhaNewsNetwork |  
Published : Feb 07, 2025, 12:32 AM IST
30 | Kannada Prabha

ಸಾರಾಂಶ

ಈ ಘಟಕ ಎನ್‌.ಎಬಿಎಚ್‌ ಅಂತಿಮ ಮಾನ್ಯತೆ ಪ್ರಕ್ರಿಯೆ ಅಲ್ಲದೆ, ನರ್ಸಿಂಗ್ ಉತ್ಕೃಷ್ಟತೆಯ ಪ್ರಾಮಾಣೀಕರಣಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.

ಕನ್ನಡಪ್ರಭ ವಾರ್ತೆ ಮೈಸೂರುನಗರದ ಮದರ್‌ ಹುಡ್ ಹಾಸ್ಪಿಟಲ್ ಪ್ರತಿಷ್ಠಿತ ಎನ್‌.ಎಬಿಎಚ್ ನರ್ಸಿಂಗ್ ಎಕ್ಸಲೆನ್ಸ್ ಸರ್ಟಿಫಿಕೇಷನ್ ಸ್ವೀಕರಿಸುವುದರೊಂದಿಗೆ ಮತ್ತೊಂದು ಮೈಲುಗಲ್ಲನ್ನು ಸಾಧಿಸಿದೆ.ರೋಗಿಗಳಿಗೆ ಅಸಾಧಾರಣ ಮಟ್ಟದ ಆರೈಕೆ ನೀಡುವುದು ಅಲ್ಲದೆ, ಅತ್ಯುನ್ನತ ಮಟ್ಟದ ನರ್ಸಿಂಗ್ ಅಭ್ಯಾಸಗಳ ನಿರ್ವಹಣೆಗೆ ಆಸ್ಪತ್ರೆಯ ಬದ್ಧತೆಯನ್ನು ಈ ಮಾನ್ಯತೆ ಪುನರ್‌ ದೃಢೀಕರಿಸುತ್ತದೆ. ಮದರ್‌ ಹುಡ್ ಹಾಸ್ಪಿಟಲ್‌ ಗೆ ಪ್ರಸ್ತುತ ವರ್ಷ ಗಮನಾರ್ಹ ಸಾಧನೆಯ ವರ್ಷವಾಗಿದ್ದು, ಈ ಘಟಕ ಎನ್‌.ಎಬಿಎಚ್‌ ಅಂತಿಮ ಮಾನ್ಯತೆ ಪ್ರಕ್ರಿಯೆ ಅಲ್ಲದೆ, ನರ್ಸಿಂಗ್ ಉತ್ಕೃಷ್ಟತೆಯ ಪ್ರಾಮಾಣೀಕರಣಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಆರೋಗ್ಯ ಸೇವೆ ನೀಡುವಲ್ಲಿ ಗುಣಮಟ್ಟ, ಸುರಕ್ಷತೆ ಮತ್ತು ಉತ್ಕೃಷ್ಟತೆಗಳಿಗೆ ಆಸ್ಪತ್ರೆಯ ಬದ್ಧತೆಯನ್ನು ಈ ಎರಡು ಮಾನ್ಯತೆಗಳು ಎತ್ತಿ ತೋರುತ್ತವೆ. ಅಲ್ಲದೆ, ಮೈಸೂರಿನ ಮಹಿಳೆಯರು ಮತ್ತು ಮಕ್ಕಳ ಆರೋಗ್ಯ ಸೇವೆಯಲ್ಲಿ ವಿಶೇಷ ಮಾನದಂಡವನ್ನು ಆಸ್ಪತ್ರೆ ಸ್ಥಾಪಿಸಿರುವುದಕ್ಕೆ ಸಾಕ್ಷಿಯಾಗಿವೆ.ನಗರದ ಮದರ್‌ ಹುಡ್ ಹಾಸ್ಪಿಟಲ್‌ ನ ಸೌಲಭ್ಯ ನಿರ್ದೇಶಕ ಬಿ.ಜೆ. ಸಂದೀಪ್ ಪಟೇಲ್ ಮಾತನಾಡಿ, ಎನ್‌.ಎಬಿಎಚ್ ನರ್ಸಿಂಗ್ ಎಕ್ಸಲೆನ್ಸ್ ಸರ್ಟಿಫಿಕೇಷನ್‌ ಸ್ವೀಕರಿಸಲು ನಾವು ಬಹಳಷ್ಟು ಹೆಮ್ಮೆಪಡುತ್ತೇವೆ. ನಮ್ಮ ಸಂಪೂರ್ಣ ತಂಡದ ಪರಿಶ್ರಮ, ಸಮರ್ಪಣಾ ಮನೋಭಾವ ಮತ್ತು ಬದ್ಧತೆಗಳಿಗೆ ಈ ಮಾನ್ಯತೆ ಸಾಕ್ಷಿಯಾಗಿದೆ ಎಂದು ತಿಳಿಸಿದ್ದಾರೆ. ಸಹಾನುಭೂತಿಯ ಉನ್ನತ ಗುಣಮಟ್ಟದ ಆರೈಕೆಯನ್ನು ನೀಡುವತ್ತ ನಾವು ಯಾವಾಗಲೂ ಗಮನಹರಿಸಿದ್ದೇವೆ. ನಮ್ಮ ರೋಗಿಗಳಿಗೆ ಸುರಕ್ಷಿತ ಮತ್ತು ಪೋಷಣೆಯ ಪರಿಸರ ಸೃಷ್ಟಿಯಲ್ಲಿ ನಮ್ಮ ಪ್ರಯತ್ನವನ್ನು ಈ ಪ್ರಾಮಾಣೀಕರಣ ಒತ್ತಿ ಹೇಳುತ್ತವೆ ಎಂದರು.ಹೆಚ್ಚು ಉತ್ತಮವಾದ ನರ್ಸಿಂಗ್ ಮಟ್ಟಗಳು, ರೋಗಿಯ ಸುರಕ್ಷತೆಯ ಶಿಷ್ಟಾಚಾರಗಳು ಅಲ್ಲದೆ, ಸತತ ಸುಧಾರಣೆಯ ಸಂಸ್ಕೃತಿಗಳನ್ನು ಪ್ರದರ್ಶಿಸುವ ಆರೋಗ್ಯ ಸೇವಾ ಸಂಸ್ಥೆಗಳಿಗೆ ಎನ್‌.ಎಬಿಎಚ್ ನರ್ಸಿಂಗ್ ಎಕ್ಸಲೆನ್ಸ್ ಸರ್ಟಿಫಿಕೇಷನ್‌ ಮಾನ್ಯತೆಯನ್ನು ನೀಡಿ ಗೌರವಿಸಲಾಗುತ್ತದೆ. ನಗರದ ಮದರ್‌ ಹುಡ್ ಹಾಸ್ಪಿಟಲ್ ಈ ಕಾರ್ಯದಲ್ಲಿ ಸತತವಾಗಿ ತೊಡಗಿಸಿಕೊಂಡಿದ್ದು, ವೈಯಕ್ತಿಕ ಆರೈಕೆ ಪೂರೈಸುವುದಲ್ಲದೆ, ಆರೋಗ್ಯ ಸೇವಾ ಪ್ರಯಾಣದಲ್ಲಿ ಮಹಿಳೆಯರು ಮತ್ತು ಮಕ್ಕಳನ್ನು ಸಬಲೀಕರಿಸುತ್ತಿದೆ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ-ಬಿ.ಜೆ. ಸಂದೀಪ್ ಪಟೇಲ್, ಮೊ. 99645 99237 ಸಂಪರ್ಕಿಸುವುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''