ಕನ್ನಡಪ್ರಭವಾರ್ತೆ ಸೋಮವಾರಪೇಟೆ
ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಕಾಮನಹಳ್ಳಿ ವೀರೇಶ್ ಗೌಡ ವಹಿಸಿದ್ದರು. ಕಾರ‍್ಯಕ್ರಮದ ಉದ್ಘಾಟನೆಯನ್ನು ಕುಟುಂಬದ ಹಿರಿಯರಾದ ಟಿ ಕೆ ಸುಬ್ಬಯ್ಯನವರು ಕೈಗೊಂಡರು, ಹಾಗೆ ಪುಸ್ತಕ ಬಿಡುಗಡೆಯನ್ನು ಉದ್ಯಮಿಯಾದ ಬೆಳ್ಳಿಗೌಡ ಮಾಡಿದರು.ಕಾರ‍್ಯಕ್ರಮದಲ್ಲಿ ಟ್ರಸ್ಟ್ನ ಸದಸ್ಯರು ಹಾಜರಿದ್ದರು. ಸಮಾರಂಭದಲ್ಲಿ ಹಿರಿಯರನ್ನು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕೆ ಟಿ ಜೋಯಪ್ಪ, ಸಿ ಕೆ ಮಲ್ಲಪ್ಪ, ಕಾರ್ಯದರ್ಶಿ ರಾಜಶೇಖರ್, ಖಜಾಂಚಿ ಪರಮೇಶ್, ಮಂಜೂರು ವಸಂತ, ಶಾಂತಳ್ಳಿ ರಾಮಚಂದ್ರ, ಟಿ ಕೆ ಮಾಚಯ್ಯ ಮತ್ತಿತರರು ಇದ್ದರು. ಶಿವಕುಮಾರ್ ಮತ್ತು ಹಿತ್ತಲಕೇರಿ ಬಿಂಬಿತ ಕಾರ‍್ಯಕ್ರಮ ನಿರೂಪಿಸಿದರು.