ನಾಡಪ್ರಭು ಕೆಂಪೇಗೌಡರು ಅಜರಾಮರ: ಜಿಗಣೇಹಳ್ಳಿ ನೀಲ ಕಂಠಪ್ಪ

KannadaprabhaNewsNetwork | Published : Jun 30, 2025 12:34 AM

ಕಡೂರು, ದೂರದೃಷ್ಟಿಯ ಚಿಂತನೆ ಜೊತೆ ಎಲ್ಲ ವರ್ಗಗಳಿಗೆ ಸಾಮಾಜಿಕ ನ್ಯಾಯ ನೀಡಿ ಬೃಹತ್ ಬೆಂಗಳೂರಿನ ನಿರ್ಮಾತೃ ನಾಡಪ್ರಭು ಮಾಗಡಿ ಕೆಂಪೇಗೌಡರು ಅಜರಾಮರ ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಜಿಗಣೇಹಳ್ಳಿ ನೀಲ ಕಂಠಪ್ಪ ಹೇಳಿದರು.

ಜಿಗಣೇಹಳ್ಳಿ ಗ್ರಾಮದ ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ ಜಯಂತಿ

ಕನ್ನಡಪ್ರಭ ವಾರ್ತೆ, ಕಡೂರು

ದೂರದೃಷ್ಟಿಯ ಚಿಂತನೆ ಜೊತೆ ಎಲ್ಲ ವರ್ಗಗಳಿಗೆ ಸಾಮಾಜಿಕ ನ್ಯಾಯ ನೀಡಿ ಬೃಹತ್ ಬೆಂಗಳೂರಿನ ನಿರ್ಮಾತೃ ನಾಡಪ್ರಭು ಮಾಗಡಿ ಕೆಂಪೇಗೌಡರು ಅಜರಾಮರ ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಜಿಗಣೇಹಳ್ಳಿ ನೀಲ ಕಂಠಪ್ಪ ಹೇಳಿದರು.

ತಾಲೂಕಿನ ಜಿಗಣೇಹಳ್ಳಿ ಗ್ರಾಮದ ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಗ್ರಾಮಸ್ಥರು ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ 516 ನೇ ಜಯಂತಿ ಉದ್ಘಾಟಿಸಿ ಮಾತನಾಡಿದರು.

ಸಕಲ ಸೌಲಭ್ಯ ಒಳಗೊಂಡ ಮಹಾನಗರವನ್ನು ನಿರ್ಮಿಸುವ ಚಿಂತನೆಯಲ್ಲಿ ಅತ್ಯಂತ ಸುವ್ಯವಸ್ಥಿತ ಮೂಲ ಸೌಕರ್ಯದ ನಗರ ನಿರ್ಮಾಣಕ್ಕೆ ಮುಂದಾದವರು ಕೆಂಪೇಗೌಡರು. ಒಂದು ನಗರ ನಿರ್ಮಾಣವಾದರೆ ಅಲ್ಲಿ ಅಗತ್ಯವಿರುವ ಪ್ರತಿ ಸೌಲಭ್ಯ ಗಳನ್ನು ಒದಗಿಸಬೇಕು. ಕೆರೆ ಕಟ್ಟೆಗಳು, ಚರಂಡಿ ವ್ಯವಸ್ಥೆ, ಉದ್ಯೋಗಾಧಾರಿತ ಬಡಾವಣೆಗಳು, ಮಾರುಕಟ್ಟೆ ವ್ಯವಸ್ಥೆ ಎಲ್ಲವನ್ನೂ ಒದಗಿಸಿ ಜನರು ನೆಮ್ಮದಿಯ ಜೀವನ ನಡೆಸಬೇಕೆಂಬ ಅವರ ಕನಸು ಬೆಂಗಳೂರು ನಗರ ನಿರ್ಮಾಣದೊಂದಿಗೆ ನನಸಾಗಿದೆ ಎಂದರು.

ಇಂದು ಬೆಂಗಳೂರು ಉದ್ಯಾನ ನಗರಿ ಎಂದು ಹೆಸರಾಗಿದೆ. ಅದಕ್ಕೆ ಮೂಲ‌ಕಾರಣ ಕೆಂಪೇಗೌಡರು ಕಟ್ಟಿಸಿದ ಕೆರೆಗಳು. ಸದಾ ಕಾಲವೂ ನೀರಿನಿಂದ ಸಮೃದ್ಧವಾಗಿದ್ದ ಕೆರೆಗಳು ನಗರಕ್ಕೆ ಕುಡಿಯುವ ನೀರಿನೊಂದಿಗೆ ಕೃಷಿ ಕಾರ್ಯಗಳಿಗೂ ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಾಗಿತ್ತು. ಉದ್ಯೋಗದ ಸ್ವರೂಪ ಆಧರಿಸಿ ಪ್ರತ್ಯೇಕ ಬಡಾವಣೆಗಳನ್ನು ನಿರ್ಮಿಸಿದ್ದು ಕೆಂಪೇಗೌಡರ ದೂರದೃಷ್ಟಿಗೆ ಮತ್ತೊಂದು ಉದಾಹರಣೆಯಾಗಿದೆ.

ಬೆಂಗಳೂರಿನ ಅರಳೇಪೇಟೆ, ಕುಂಬಾರಪೇಟೆ, ಉಪ್ಪಾರ ಪೇಟೆ ಮುಂತಾದವು ಜಾತಿ ಆಧರಿಸದೆ ಜನಕ್ಕೆ ಬೇಕಾದ ಪದಾರ್ಥ ಗಳನ್ನು ತಯಾರಿಸುವವರಿಗಾಗಿ ರಚಿತವಾದ ಬಡಾವಣೆಗಳಾಗಿದ್ದವು. ಉತ್ಪಾದಿಸಿದ ವಸ್ತುಗಳ ಮಾರಾಟಕ್ಕಾಗಿ ಪ್ರತ್ಯೇಕ ಮಾರುಕಟ್ಟೆ ವ್ಯವಸ್ಥೆಯಿತ್ತು. ಇವೆಲ್ಲವೂ ಕೆಂಪೇಗೌಡರ ಹೆಸರನ್ನು ಅಜರಾಮರಗೊಳಿಸಿದೆ. ಇಂದಿನ ಬೆಂಗಳೂರಿನ ಹಿರಿಮೆಗೆ ಸುಭಧ್ರ ಅಡಿಪಾಯ ಹಾಕಿದ ಕೆಂಪೇಗೌಡರು ಇಂದಿನ ಆಡಳಿತಗಾರರಿಗೆ ಮಾದರಿ ಎಂದು ಶ್ಲಾಘಿಸಿದರು. ಕಾರ್ಯಕ್ರಮಕ್ಕೂ ಮುನ್ನ ಕೆಂಪೇಗೌಡರ ಭಾವಚಿತ್ರವನ್ನು ಗ್ರಾಮದಲ್ಲಿ ಅದ್ಧೂರಿಯಾಗಿ ಮೆರವಣಿಗೆ ಮಾಡಲಾ ಯಿತು. ಗ್ರಾಮದ ಗೌಡರಾದ ಎಂ.ಉಮೇಶ್, ಮಂಜಪ್ಪ, ಮಹೇಶ್, ಕರಿಯಪ್ಪ,ಮಲ್ಲಪ್ಪ,ಮರಿಯಪ್ಪ, ಕೆಂಚಪ್ಪ, ಕೆಂಪೇಗೌಡ ಯುವಕ ಬಳಗ, ಜಿಗಣೇಹಳ್ಳಿ ಗ್ರಾಮಸ್ಥರು, ಕೆಂಪೇಗೌಡ ಬಳಗದ ಪದಾಧಿಕಾರಿಗಳು ಇದ್ದರು.

29ಕೆೆಕೆಡಿಯು2.

ಕಡೂರು ತಾಲೂಕಿನ ಜಿಗಣೇಹಳ್ಳಿ ಗ್ರಾಮದ ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಗ್ರಾಮಸ್ಥರು ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ 516 ನೇ ಜಯಂತಿ ಕಾರ್ಯಕ್ರಮ ನಡೆಯಿತು.