ಮೂಡುಬಿದಿರೆ ತಾಲೂಕು ಆಡಳಿತ ಸೌಧದಲ್ಲಿ ನಾಡಪ್ರಭು ಕೆಂಪೇಗೌಡ ಜನ್ಮದಿನಾಚರಣೆ ಕಾರ್ಯಕ್ರಮ ನಡೆಯಿತು. ಮಾಜಿ ಸಚಿವ ಕೆ. ಅಭಯಚಂದ್ರ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಮೂಡುಬಿದಿರೆಬೆಂಗಳೂರನ್ನು ಯೋಜನಾಬದ್ಧವಾಗಿ ಅಭಿವೃದ್ಧಿ ಪಡಿಸಿದ ಕೆಂಪೇಗೌಡರು ನಾಡಪ್ರಭು ಎಂದೇ ಪ್ರಸಿದ್ಧರು. ನಮ್ಮ ರಾಜ್ಯದ ಇತರ ನಗರಗಳ ಅಭಿವೃದ್ಧಿಗೆ ಮಾದರಿಯಾಗಿದೆ ಬೆಂಗಳೂರು. ಕರ್ನಾಟಕದ ಗ್ರಾಮಗ್ರಾಮಗಳಿಂದ ದೇಶವಿದೇಶಗಳಿಂದ ಉದ್ಯಮಿಗಳನ್ನು ಉದ್ಯೋಗಾರ್ಥಿಗಳನ್ನು ತನ್ನೆಡೆಗೆ ಸೆಳೆಯುವ ಮೂಲಕ ನಿಜಕ್ಕೂ ಬೆಂಗಳೂರು ಮಾದರಿ ನಗರವಾಗಿದೆ ಎಂದು ಮಾಜಿ ಸಚಿವ ಕೆ. ಅಭಯಚಂದ್ರ ಹೇಳಿದರು.
ತಾಲೂಕು ಆಡಳಿತ ಸೌಧದಲ್ಲಿ ಶುಕ್ರವಾರ ನಡೆದ ನಾಡಪ್ರಭು ಕೆಂಪೇಗೌಡ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾಜಕ್ಕಾಗಿ ನಾವೇನಾದರೂ ಮಾಡಬೇಕು ಎಂಬುದಕ್ಕೆ ಕೆಂಪೇಗೌಡರು ಮಾದರಿಯಾಗಿದ್ದಾರೆ ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ ಅವರು ಕೆಂಪೇಗೌಡರ ವ್ಯಕ್ತಿತ್ವ, ಜೀವನ, ಆಡಳಿತ ಕ್ರಮಗಳ ಬಗ್ಗೆ ಮಾತನಾಡಿದರು. ಬೆಂಗಳೂರಿನ ನಾಲ್ಕೂ ದಿಕ್ಕುಗಳಲ್ಲಿ ಗೋಪುರ, ರಕ್ಷಣೆಗಾಗಿ ಕಂದಕ, ಜನರ ವೃತ್ತಿಗೆ ತಕ್ಕಂತೆ ಸುಮಾರು ೭೦ ವ್ಯವಸ್ಥಿತ ಪೇಟೆಗಳನ್ನು, ಕೆರೆಗಳನ್ನು, ವಿವಿಧ ದೇಗುಲಗಳನ್ನು ನಿರ್ಮಿಸಿ ಧಾರ್ಮಿಕ ಸೌಹಾರ್ದ ಸಾರಿದವರು ಬೆಂಗಳೂರಿಗೆ ಅವರ ಕೊಡುಗೆ ಅಪಾರ ಎಂದು ತಿಳಿಸಿದರು.ತಹಸೀಲ್ದಾರ್ ಶ್ರೀಧರ ಮುಂದಲಮನಿ ಅವರು ಅಧ್ಯಕ್ಷತೆ ವಹಿಸಿ, ನಾಡಪ್ರಭು ಕೆಂಪೇಗೌಡರ ಆಡಳಿತ ಶೈಲಿ ನಮಗೆಲ್ಲರಿಗೂ ಮಾದರಿಯಾಗಲಿ, ಮಾಜಿ ಸಚಿವರಾಗಿದ್ದರೂ ಊರ ಅಭಿಪ್ರಗತಿ ಬಗ್ಗೆ ಕಾಳಜಿ ಹೊಂದಿರುವ ಅಭಯಚಂದ್ರರAಥ ಹಿರಿಯರ ಮಾರ್ಗದರ್ಶನ ಸದಾ ನಮಗೆ ಒದಗಿ ಬರಲಿ ಎಂದರು.ಗ್ಯಾರಂಟಿ ಯೋಜನೆಗಳ ಅನುಷ್ಠಾನ ತಾಲೂಕು ಸಮಿತಿ ಅಧ್ಯಕ್ಷ ಅರುಣ್‌ಕುಮಾರ್ ಶೆಟ್ಟಿ, ತಾ.ಪಂ. ಕಾರ್ಯನಿರ್ವಹಣಾಽಕಾರಿ ಕುಸುಮಾಧರ ಮುಖ್ಯಅತಿಥಿಗಳಾಗಿದ್ದರು.ಪ್ರಬಂಧ ಸ್ಪರ್ಧೆ: ಕೆಂಪೇಗೌಡ ಜಯಂತಿಯ ಅಂಗವಾಗಿ ತಾಲೂಕು ಮಟ್ಟದ ಶ್ರೀ ನಾಡಪ್ರಭು ಕೆಂಪೇಗೌಡ ಪ್ರಬಂಧ ಸ್ಪರ್ಧೆ
ಏರ್ಪಡಿಸಲಾಗಿತ್ತು ಆಳ್ವಾಸ್ ಕನ್ನಡ ಮಾಧ್ಯಮ ಪ್ರೌಢಶಾಲೆಯ ಸಮರ್ಥ ಚಂದ್ರಗೌಡ ನಾಗನಗೌಡ್ರ ಪ್ರಥಮ, ಕೆಪಿಎಸ್ ಪ್ರೌಢಶಾಲೆ ಮಿಜಾರು ಇಲ್ಲಿನ ಕ್ಷಮಿತಾ ದ್ಬಿತೀಯ, ಮೂಡುಬಿದಿರೆ ಜೈನ ಪ್ರೌಢಶಾಲೆಯ ಆಕಾಂಕ್ಷ ಎಚ್. ಆಚಾರ್ಯ ತೃತೀಯ ಹಾಗೂ ಸರಕಾರಿ ಪ್ರೌಢಶಾಲೆ ಪ್ರಾಂತ್ಯ ಇಲ್ಲಿನ ಸಂಗಮೇಶ ಶಿವಪ್ಪ ಗೂಳಿ ಇವರು ಸಮಾಧಾನಕರ ಬಹುಮಾನ ಗೆದ್ದಿದ್ದು ವಿಜೇತರಿಗೆ ಅತಿಥಿಗಳು ಬಹುಮಾನ ವಿತರಿಸಿದರು. ವಿವಿಧ ಇಲಾಖೆಗಳ ಅಧಿಽಕಾರಿಗಳು, ಶಿಕ್ಷಕರು, ವಿದ್ಯಾರ್ಥಿಗಳು, ಪಾಲಕರು ಪಾಲ್ಗೊಂಡಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.