ಕನ್ನಡಪ್ರಭ ವಾರ್ತೆ ಚಾಮರಾಜನಗರ
ನಗರದ ಡಾ.ರಾಜ್ ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಅಖಿಲ ಕರ್ನಾಟಕ ಕನ್ನಡ ಮಹಾಸಭಾದ ವತಿಯಿಂದ ನಡೆದ ನಾಡಪ್ರಭು ಕೆಂಪೇಗೌಡ ರವರ ಜಯಂತೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು
ಕೆಂಪೇಗೌಡರು ಬೆಂಗಳೂರನ್ನು ಯೋಜನಾಬದ್ಧವಾಗಿ ನಿರ್ಮಿಸಿದರು, ಎಲ್ಲಾ ಸಮುದಾಯಗಳಿಗೂ ಅವಕಾಶ ಕಲ್ಪಿಸಿದರು ಮತ್ತು ನಗರದ ಅಭಿವೃದ್ಧಿಗೆ ಹಲವು ಕೆರೆಗಳನ್ನು ನಿರ್ಮಿಸಿದರು ಎಂದರು.ಕೆಂಪೇಗೌಡರು ಬೆಂಗಳೂರನ್ನು ನಿರ್ಮಿಸುವಾಗ, ನಗರವು ಭವಿಷ್ಯದಲ್ಲಿ ಹೇಗೆ ಬೆಳೆಯುತ್ತದೆ ಎಂದು ಯೋಚಿಸಿದ್ದರು. ಅವರು ನಗರವನ್ನು ನಾಲ್ಕು ದಿಕ್ಕುಗಳಲ್ಲಿ ವಿಸ್ತರಿಸಲು ಗಡಿ ಗೋಪುರಗಳನ್ನು ನಿರ್ಮಿಸಿದರು. ಇದು ನಗರವು ಅತೀ ವೇಗವಾಗಿ ಬೆಳೆಯಲು ಕಾರಣವಾಯಿತು. ಅವರು ಪ್ರತಿ ವೃತ್ತಿಯವರಿಗೂ ಪ್ರತ್ಯೇಕ ಪೇಟೆಗಳನ್ನು ನಿರ್ಮಿಸಿದರು, ಇದರಿಂದಾಗಿ ಎಲ್ಲಾ ಸಮುದಾಯದ ಜನರು ನೆಮ್ಮದಿಯಿಂದ ಬದುಕಲು ಸಾಧ್ಯವಾಯಿತು. ಅವರು ನೀರಿನ ಅಭಾವ ಉಂಟಾಗದಂತೆ ಅನೇಕ ಕೆರೆಗಳನ್ನು ನಿರ್ಮಿಸಿದರು ಎಂದರು.
ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ನಾಡುಪ್ರಭು ಕೆಂಪೇಗೌಡರು ನಿರ್ಮಿಸಿರುವ ಬೆಂಗಳೂರು ಬೃಹತ್ ಮಟ್ಟದಲ್ಲಿ ಬೆಳೆದು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆಪಡೆದುಕೊಂಡಿದೆ. ಅವರು ನಾಡಿಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದರು.
ಬೆಂಗಳೂರು ಸುಂದರನಗರವನ್ನು ಶಕ್ತಿ ಕೇಂದ್ರವನ್ನು ಅಂತಾರಾಷ್ಟ್ರೀಯ ಮಟ್ಟದ ಸಿಟಿಯನ್ನು ನಿರ್ಮಾಣ ಮಾಡುವುದಕ್ಕೆ ಸಂಕಲ್ಪದ ಬೀಜಗಳನ್ನು ಬಿತ್ತಿದ್ದದವರು ನಾಡಪ್ರಭು, ಮಹಾಪ್ರಭು ಕೆಂಪೇಗೌಡರು ಅವರನ್ನು ನಾವೆಲ್ಲರೂ ಗೌರವದಿಂದ ಗೌರವಿಸಬೇಕಾಗುತ್ತದೆ. ಅಂತಹ ಧೀಮಂತ ನಾಯಕರು ಹುಟ್ಟಬೇಕು. ಅವರ ನಮಗೆಲ್ಲ ಪ್ರೇರಣೆಯಾಗಬೇಕು ಆ ಮೂಲಕ ಒಂದು ಗ್ರಾಮ, ಒಂದು ಜಿಲ್ಲೆ, ತಾಲೂಕು ನಿರ್ಮಾಣ ಆಗಲು ಸಾಧ್ಯವಾಗುತ್ತದೆ ಅವರ ಆದರ್ಶಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳೋಣ ಎಂದರು.
ಅಖಿಲ ಕರ್ನಾಟಕ ಕನ್ನಡ ಮಹಾಸಭಾದ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಪ್ರಾಸ್ತಾವಿಕ ಭಾಷಣ ಮಾಡಿದರು.ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಾಜಿ ಶಾಸಕ ಆರ್.ನರೇಂದ್ರ, ಚೂಡಾಧ್ಯಕ್ಷ ಮಹಮ್ಮದ್ ಅಕ್ಕರ್, ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಜವರೇಗೌಡ, ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರ ಆಪ್ತ ಸಹಾಯಕ ಎಸ್.ಎಂ.ರವೀಂದ್ರ, ಗಣಿ ಉದ್ಯಮಿ ಶ್ರೀನಿಧಿಕುದರ್, ರೈತ ಮುಖಂಡ ಮೂಡ್ಲುಪುರ ನಾಗರಾಜು, ಕರಿಯನಕಟ್ಟೆ ಜಯಪ್ರಕಾಶ್ ಸೇರಿದಂತೆ
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ನಯನ, ನಾಗೇಶ್ ರಾಗಿ ಮುದ್ದನಹಳ್ಳಿ, ಜಿ.ಪಂ.ಉಪಕಾರ್ಯದರ್ಶಿ ಶೃತಿ, ಚಾಮರಾಜನಗರ ವಿಶ್ವವಿದ್ಯಾಲಯ ಕುಲ ಸಚಿವ ಆರ್.ಲೋಕನಾಥ್, ಕಾವೇರಿ ನದಿ ಸಂರಕ್ಷಣಾ ಸಮಿತಿ ಎಚ್.ಕೆ.ರಾಮು, ಮೈಸೂರು ಸಿಂಡಿಕೇಟ್ ಮಾಜಿ ಸದಸ್ಯ ಡಾ.ಇ.ಸಿ.ನಿಂಗರಾಜೇಗೌಡ, ಸುಶೀಲ ನಂಜಪ,ಬ್ರೈಟ್ ಕಾಲೇಜ್ ಅಧ್ಯಕ್ಷ ಯದುನಂದನ್, ನಗರಸಭಾ ಮಾಜಿ ಅಧ್ಯಕ್ಷ ಸುರೇಶ್‌ನಾಯಕ, ದೊಡ್ಡರಾಯಪೇಟೆ ರವಿಗೌಡ, ಪಣ್ಯದಹುಂಡಿರಾಜು, ಅರುಣ್ ಕುಮಾರ್ ಗೌಡ ಇತರರು ಹಾಜರಿದ್ದರು.