ನಾಡಿದ್ದು ಎನ್‌ಕೆ ಮಲ್ಟಿ ಸೂಪರ್‌ ಸ್ಪೆಶಾಲಿಟಿ ಆಸ್ಪತ್ರೆ ಉದ್ಘಾಟನೆ

KannadaprabhaNewsNetwork |  
Published : Oct 26, 2026, 01:15 AM IST
ಫೋಟೋ- ಎನ್‌ ಕೆ ಹಾಸ್ಪಿಟಲ್‌ಆಸ್ಪತ್ರೆ ಕಟ್ಟಡ ನೋಟ | Kannada Prabha

ಸಾರಾಂಶ

ಸುಸಜ್ಜಿತ ಹಾಗೂ ಅತ್ಯಾಧುನಿಕ ವೈದ್ಯಕೀಯ ಸವಲತ್ತು, ಪರಿಣಿತ ವೈದ್ಯರು, ಸಿಬ್ಬಂದಿಗಳೊಂದಿಗೆ ಕಲ್ಯಾಣ ನಾಡಲ್ಲಿ ಆರೋಗ್ಯ ರಂಗದಲ್ಲೇ ಹೊಸ ಕ್ರಾಂತಿ ಮಾಡುವ ಉದ್ದೇಶದೊಂದಿಗೆ ಕಲಬುರಗಿಯಲ್ಲಿ ಅ.28 ರಂದು ಪೂರಣ ಎನ್.ಕೆ ಸೂಪರ್‌ ಸ್ಪೇಶಾಲಿಟಿ ಆಸ್ಪತ್ರೆ ಲೋಕಾರ್ಪಣೆ ಮಾಡಲಾಗುತ್ತಿದೆ ಎಂದು ಆಸ್ಪತ್ರೆಯ ಮುಖ್ಯ ವೈದ್ಯ, ಗ್ಯಾಸ್ಟ್ರೋಸರ್ಜನ್‌ ಡಾ. ಆರೀಫ್‌ ರಜಾ ಅಹ್ಮದ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಕಲಬುರಗಿಸುಸಜ್ಜಿತ ಹಾಗೂ ಅತ್ಯಾಧುನಿಕ ವೈದ್ಯಕೀಯ ಸವಲತ್ತು, ಪರಿಣಿತ ವೈದ್ಯರು, ಸಿಬ್ಬಂದಿಗಳೊಂದಿಗೆ ಕಲ್ಯಾಣ ನಾಡಲ್ಲಿ ಆರೋಗ್ಯ ರಂಗದಲ್ಲೇ ಹೊಸ ಕ್ರಾಂತಿ ಮಾಡುವ ಉದ್ದೇಶದೊಂದಿಗೆ ಕಲಬುರಗಿಯಲ್ಲಿ ಅ.28 ರಂದು ಪೂರಣ ಎನ್.ಕೆ ಸೂಪರ್‌ ಸ್ಪೇಶಾಲಿಟಿ ಆಸ್ಪತ್ರೆ ಲೋಕಾರ್ಪಣೆ ಮಾಡಲಾಗುತ್ತಿದೆ ಎಂದು ಆಸ್ಪತ್ರೆಯ ಮುಖ್ಯ ವೈದ್ಯ, ಗ್ಯಾಸ್ಟ್ರೋಸರ್ಜನ್‌ ಡಾ. ಆರೀಫ್‌ ರಜಾ ಅಹ್ಮದ್‌ ಹೇಳಿದರು.ಜಾಫ್ರಾಬಾದ್‌ ಕ್ರಾಸ್‌ ರಿಂಗ್‌ ರಸ್ತೆಯಲ್ಲಿರುವ ಎನ್‌ಕೆ ಆಸ್ಪತ್ರೆ ಕಟ್ಟಡದಲ್ಲಿ ಬುಧವಾರ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನರ, ಮೂತ್ರಪಿಂಡ, ಹೃದಯ, ಮೂಳೆ, ಲಿವರ್‌, ಗ್ಯಾಸ್ಟ್ರೋ ಸಹಿತ ಹತ್ತು ಹಲವು ರೋಗಗಳಿಗೆ ಈ ಆಸ್ಪತ್ರೆಯಲ್ಲಿ ಸೂಪರ್‌ ಸ್ಪೇಶಾಲಿಟಿ ವಿಭಾಗಗಳನ್ನು ಸಿದ್ದಪಡಿಸಲಾಗಿದೆ ಎಂದರು.ಆಸ್ಪತ್ರೆಯಲ್ಲಿ ವಿಶೇಷವಾಗಿ ತೀವ್ರ ನಿಗಾ ಘಟಕದ 50 ಹಾಸಿಗೆಗಳು ಸಹಿತ 200 ಹಾಸಿಗೆಗಳು ಇವೆ. ತುರ್ತು ನಿಗಾ ಘಟಕ ಪ್ರತ್ಯೇಕ ತಜ್ಞರ ತಂಡದೊಂದಿಗೆ ಸಿದ್ಧಗೊಳಿಸಲಾಗಿದೆ. ದೆಹಲಿ, ಬೆಂಗಳೂರು, ಕಲಬುರಗಿ, ಹೈದ್ರಾಬಾದ್‌ನಲ್ಲಿ ಕಾರ್ಯನಿರ್ವಹಿಸಿ ಪರಿಣಿತರಾಗಿರುವ ತಜ್ಞ ವೈದ್ಯರು ಆಸ್ಪತ್ರೆಯಲ್ಲಿದ್ದಾರೆ. ಟ್ರಾಮಾ ಕೇರ್‌, ಕ್ರಿಟಿಕಲ್‌ ಕೇರ್‌ಗಾಗಿ ಆಸ್ಪತ್ರೆಯಲ್ಲಿ ತಜ್ಞರ ತಂಡವನ್ನುನಿಯೋಜಿಸಲಾಗಿದ್ದು, ನಿರಂತರ ಸೇವೆಗೆ ಲಭ್ಯವಿರಲಿದೆ ಎಂದು ಆಸ್ಪತ್ರೆಯ ವಿಶೇಷತೆಗಳನ್ನು ಡಾ. ಆರೀಫ್‌ ವಿವರಿಸಿದರು.4 ಮಾಡ್ಯುಲರ್‌ ಆಪರೇಷನ್‌ ಥೇಟರ್‌, 1 ಮಿನಿ ಆಪರೇಷನ್‌ ಥೇಟರ್‌ ಸಹಿತ ಅತ್ಯಾಧುನಿಕ ಯಂತ್ರೋಪಕರಣಗಳಿರುವ ವಿವಿಧ ವೈದ್ಯಕೀಯ ವಿಭಾಗಗಳಲ್ಲಿ ತಜ್ಞರ ರೋಗಿಗಳಿಗೆ ತಪಸಮೆ ಮಾಡಿ ಸೂಕ್ತ ಸಲಹೆ, ಚಿಕಿತ್ಸೆ ನೀಡಲಿದ್ದಾರೆ. ಕಲಬುರಗಿ ರೋಗಿಗಳು ಚಿಕಿತ್ಸೆಗಾಗಿ ಹೈದ್ರಾಬಾದ್‌, ಸೊಲ್ಲಾಪುರ ಹೋಗದಂತೆ ಮಾಡುವುದೇ ಎನ್‌ಕೆ ಆಸ್ಪತ್ರೆಯ ಉದ್ದೇಶ. ಬಡವರಿಗೆ ರಿಯಯ್ತಿ ಚಿಕಿತ್ಸೆ ನೀಡುವ ಚಿಂತನೆ ಇದೆ. ವಿಮೆ ಸವಲತ್ತು ಒದಗಿಸಲಾಗುತ್ತಿದೆ. ಸರ್ಕಾರದ ವಿಮಾ ಯೋಜನೆಗಳಲ್ಲಿ ಆಸ್ಪತ್ರೆಯನ್ನು ಶೀಘ್ರ ಸೇರ್ಪಡೆಗೊಳಿಸಲಾಗುವುದು ಎಂದರು.ಎನ್‌ಕೆ ಟ್ರಸ್ಟ್‌ ಅಡಿಲ್ಲಿ ಸಿದ್ಧಗೊಂಡಿರುವ ಆಸ್ಪತ್ರೆಯು ತಮ್ಮ ತಂದೆ ನಾಸೀರ್‌ ಅಹ್ಮದ್‌ ಅವರ ಸ್ಮರಣಾರ್ಥ ನಿರ್ಮಿಸಲಾಗಿದೆ. ಇದನ್ನು ಬಡವರ ಪರ ಹಾಗೂ ಜನಮುಖಿಯಾಗಿ ಚಿಕಿತ್ಸೆ ನೀಡುವ ಆಸ್ಪತ್ರೆನ್ನಾಗಿಸುವ ಸಂಕಲ್ಪ ತಮ್ಮದಾಗಿದೆ ಎಂದು ಡಾ. ಅರೀಫ್‌ ಸ್ಪಷ್ಟಪಡಿಸಿದರು.ಸುದ್ದಿಗೋಷ್ಟಿಯಲ್ಲಿ ಡಾ. ಹಿನಾಯತುಲ್ಲಾ ಖಾನ್‌, ಡಾ. ತಾಹೇರ್‌, ಡಾ. ರಹೇಮಾನ್‌, ಡಾ. ಜಫರ್‌ ಸಹಿತ ಅನೇಕರಿದ್ದರು. ಎನ್‌ಕೆ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸದಾಕಾಲ ಕಾಳಜಿ ದೊರಕುವಂತೆ ಆಸ್ಪತ್ರೆಯಲ್ಲಿನ ಎಲ್ಲಾ ವಿಭಾಗಗಳಲ್ಲಿ ಕಾರ್ಯಕ್ಷಮತೆ ರೂಪಿಸಲಾಗುತ್ತಿದೆ. ಆಸ್ಪತ್ರೆಯಲ್ಲಿನ ಮೂತ್ರಪಿಂಡ ವಿಭಾಗದಲ್ಲಿ ಎಲ್ಲಾ ಆಧುನಿಕ ಸವಲತ್ತುಗಳಿವೆ. ಶೀಘ್ರದಲ್ಲೇ ಈ ಆಸ್ಪತ್ರೆಯನ್ನು ಮೂತ್ರಪಿಂಡ ಕಸಿ ಸೆಂಟರ್‌ ಆಗಿ ಅಭಿವೃದ್ಧಿ ಪಡಿಸಲು ಸರ್ವ ಪ್ರಯತ್ನ ಮಾಡಲಾಗುತ್ತಿದೆ ಎಂದರು.ಎಐಜಿ ಆಸ್ಪತ್ರೆ ಅಧ್ಯಕ್ಷ ಡಿ. ನಾಗಶ್ವರ ರೆಡ್ಡಿ, ನಿರ್ದೇಶಕ ಡಾ. ಜಿವಿ ರಾವ್‌, ಮದ್ರಾಸ್‌ನ ರೇಲಾ ಸಂಸ್ಥೆ, ಮೆಡಿಕಲ್‌ ಸಂಟರ್‌ನ ಅಧ್ಯಕ್ಷ ಪ್ರೊ. ಮೊಹಮದ್‌ ರೇಲಾ ಕಲಬುರಗಿಗೆ ಆಗಮಿಸಿ ಆಸ್ಪತ್ರೆ ಲೋಕಾರ್ಪಣೆ ಮಾಡುವರು. ಇದಲ್ಲದೆ ಕಲಬುರಗಿ ಉಸ್ತುವಾರಿ, ಗೃಹ ಸಚಿವ ಪ್ರಿಯಾಂಕ್‌ ಖರ್ಗೆ, ಡಾ.ಶರಣಪ್ರಕಾಶ ಪಾಟೀಲ್‌, ಡಾ.ಅಜಯ್‌ ಸಿಂಗ್‌, ಸ್ಥಳೀಯ ಸಾಸಕರು, ಎಂಎಲ್‌ಸಿಗಳು ಸಹಿತ ಗಣ್ಯರು ಆಸ್ಪತ್ರೆಗೆ ಉದ್ಘಾಟನೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ಡಾ. ಆರೀಫ್‌ ಅಹ್ಮದ್‌ ಮಾಹಿತಿ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮನ್‌ ಕಿ ಬಾತ್‌ನಲ್ಲಿ ಕಲ್ಬುರ್ಗಿಯ ತೊಗರಿ ಘಮ
ಭಕ್ತಿ ತತ್ವದಲ್ಲಿ ಸಮರ್ಪಣಾ ಭಾವವಿರಲಿ: ಡಾ.ಎಂ.ಆರ್.ಜಯರಾಮ್