ಉಡುಪಿ: ಬಳಸಿದ ಪಾದರಕ್ಷೆಗಳನ್ನು ಸಂಗ್ರಹಿಸಿ, ಅವುಗಳನ್ನು ನವೀಕರಿಸಿ, ಅಗತ್ಯವುಳ್ಳ ಮಕ್ಕಳಿಗೆ ತಲುಪಿಸುವ ಉದ್ದೇಶದ ನಡಿಗೆ ಎಂಬ 3 ದಿನಗಳ ಅಭಿಯಾನಕ್ಕೆ ಶುಕ್ರವಾರ ನಗರದ ಎಂಜಿಎಂ ಕಾಲೇಜಿನ ಆವರಣದಲ್ಲಿ ಚಾಲನೆ ನೀಡಲಾಯಿತು.ಉಡುಪಿಯ ಶೋಕ ಮಾತಾ ಇಗರ್ಜಿಯ ಧರ್ಮಗುರು ರೆ.ಫಾ. ಡೆನಿಸ್ ಡೆ’ಸಾ ಮತ್ತು ಸಾಂಸ್ಕೃತಿಕ ಸಂಘಟರ ಉಡುಪಿ ವಿಶ್ವನಾಥ ಶೆಣೈ ಗಿಡವೊಂದನ್ನು ನೆಟ್ಟು ಅಭಿಯಾನ ಉದ್ಘಾಟಿಸಿದರು. ಹಳ್ಳಿಮಕ್ಕಳ ಉಚಿತ ಕೊಡುಗೆ: ಈ ಸಂದರ್ಭದಲ್ಲಿ ಮಾತನಾಡಿದ, ಈ ಬಳಸಿದ ಪಾದರಕ್ಷೆಗಳನ್ನು ಮರುಬಳಕೆಗೆ ಸಿದ್ದ ಮಾಡುವ ಮುಂಬೈ ಮೂಲದ ಗ್ರೀನ್‌ಸೋಲ್ ಸಂಸ್ಥೆಯ ಸಹಸ್ಥಾಪಕ ಶ್ರೇಯಾನ್ಸ್ ಭಂಡಾರಿ, ಕಳೆದ 10 ವರ್ಷಗಳಿಂದ ಈ ಉಪಕ್ರಮವನ್ನು ನಡೆಸುತ್ತಾ ಪರಿಸರದ ರಕ್ಷಣೆಗೆ ಕೊಡುಗೆ ನೀಡಲಾಗುತ್ತಿದೆ. ಇದು ಕೇವಲ ಪಾದರಕ್ಷೆಗಳ ಸಂಗ್ರಹ ಮಾತ್ರವಲ್ಲ. ನವೀಕರಿಸಿದ ಪಾದರಕ್ಷೆಗಳನ್ನು ನಮ್ಮ ಸ್ವಯಂಸೇವಕರು ಹಳ್ಳಿಗಳಿಗೆ ತೆರಳಿ, ಅಲ್ಲಿ ಅಗತ್ಯವಿರುವ ಮಕ್ಕಳಿಗೆ ಉಚಿತವಾಗಿ ನೀಡಲಿದ್ದಾರೆ ಎಂದರು
ಉಡುಪಿಯಲ್ಲಿ ವಿಶ್ವ ದಾಖಲೆ ?: ಶ್ರೇಯಾನ್ಸ್ ಭಂಡಾರಿ ಅವರು, ಅಮೆರಿಕದಲ್ಲಿ ಈ ಹಿಂದೆ ಮರುಬಳಕೆಗಾಗಿ ಸಾರ್ವಜನಿಕ ಅಭಿಯಾನದಲ್ಲಿ 16,000 ಜೊತೆ ಪಾದರಕ್ಷೆಗಳನ್ನು ಸಂಗ್ರಹಿಸಿದ್ದ ವಿಶ್ವದಾಖಲೆಯಾಗಿದೆ. ಮೂಲಕ ದಾಖಲೆ ನಿರ್ಮಿಸಲಾಗಿತ್ತು. ಒಟ್ಟು 3 ದಿನಗಳಲ್ಲಿ 20,000 ಜೊತೆಗೂ ಹೆಚ್ಚು ಪಾದರಕ್ಷೆಗಳು ಸಂಗ್ರಹವಾಗುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.