ಕನ್ನಡಪ್ರಭ ವಾರ್ತೆ ಪಾವಗಡ ತಾಲೂಕಿನ ನಾಗಲಮಡಿಕೆ ಗ್ರಾಮದ ಸುಪ್ರಸಿದ್ಧ ಶ್ರೀ ಅಂತ್ಯ ಸುಬ್ರಮಣ್ಯೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಹಮ್ಮಿಕೊಂಡಿದ್ದು ಷಷ್ಟಿ ಪ್ರಯುಕ್ತ ಭಾನುವಾರ ಮಧ್ಯಾಹ್ನ 12 ಗಂಟೆಗೆ ಶ್ರೀ ಸುಬ್ರಮಣ್ಯಸ್ವಾಮಿಯ ಬ್ರಹ್ಮರಥೋತ್ಸವ ಹಮ್ಮಿಕೊಂಡಿರುವುದಾಗಿ ತಹಸೀಲ್ದಾರ್ ಡಿ.ಎನ್.ವರದರಾಜು ಹಾಗೂ ತಾಪಂ ಇಒ ಜಾನಕಿರಾಮ್ ತಿಳಿಸಿದ್ದಾರೆ.ತಾಲೂಕು ಆಡಳಿತ ಹಾಗೂ ದೇವಸ್ಥಾನದ ಸಮಿತಿಯಿಂದ ಜ.5ರಿಂದ ಜ.10ರವರೆವಿಗೆ ಇಲ್ಲಿನ ಸುಪ್ರಸಿದ್ದ ತಾಲೂಕಿನ ನಾಗಲಮಡಿಕೆ ಗ್ರಾಮದ ಶ್ರೀ ಸುಬ್ರಮಣ್ಯಸ್ವಾಮಿ ಜಾತ್ರಾಮಹೋತ್ಸವ ಕೈಗೊಂಡಿದ್ದು ಅನೇಕ ರೀತಿಯ ಧಾರ್ಮಿಕ ವಿಧಿವಿಧಾನಗಳ ಮೂಲಕ ಪೂಜೆಗಳು ಜರುಗಲಿವೆ. ಜ.5ರಂದು ಹಮ್ಮಿಕೊಂಡಿದ್ದ ಶ್ರೀ ಸುಬ್ರಮಣ್ಯಸ್ವಾಮಿಯ ಬ್ರಹ್ಮ ರಥೋತ್ಸವಕ್ಕೆ ಶಾಸಕ ಎಚ್.ವಿ.ವೆಂಕಟೇಶ್ ಚಾಲನೆ ನೀಡಲಿದ್ದು, ಮಾಜಿ ಸಚಿವ ವೆಂಕಟರಮಣಪ್ಪ, ಪುರಸಭೆ ಅಧ್ಯಕ್ಷ ಪಿ.ಎಚ್.ರಾಜೇಶ್ ಹಾಗೂ ಸ್ಥಳೀಯ ಗ್ರಾಪಂ ಅಧ್ಯಕ್ಷ ಹಾಗೂ ಸದಸ್ಯರು ಭಾಗವಹಿಸಲಿದ್ದಾರೆ.
ಇದೇ ವೇಳೆ ಕಂದಾಯ ಇಲಾಖೆಯ ಆರ್‌ಐ ನಾರಾಯಣ್, ಗ್ರಾಪಂ ಅಭಿವೃದ್ಧಿ ಅಧಿಕಾರಿ ಹನುಮಂತರಾಯಪ್ಪ, ಕಂದಾಯ ಅಧಿಕಾರಿಗಳಾದ ಮಧು, ರವಿಕುಮಾರ್, ಪಾರುಪತ್ತೇದಾರ ಉಮಾಶಂಕರ್ ಇತರರಿದ್ದರು.
ಕೋಟ್ಅನೇಕ ವರ್ಷಗಳಿಂದ ಆಚರಣೆ ಇದ್ದ ಮಡೆ ಸ್ನಾನವನ್ನು ನಿಷೇಧಿಸಿದ್ದು, ಆಚರಣೆ ಜಾರಿಯಾಗದಂತೆ ಕಂದಾಯ ಮತ್ತು ಪೋಲಿಸ್ ಇಲಾಖೆಯ ಅಧಿಕಾರಿಗಳು ನಿಗಾವಹಿಸಿದ್ದಾರೆ. ಭಕ್ತಾಧಿಗಳು ದೇವಸ್ಥಾನ ಆವರಣ ಸೇರಿದಂತೆ ಎಲ್ಲಿಯೂ ಸಹ ಆಚರಣೆ ಮಾಡಬಾರದು. ಜಿಲ್ಲಾಡಳಿತ ಕೈಗೊಂಡಿರುವ ವ್ಯವಸ್ಥೆಗೆ ಸಹಕರಿಸಬೇಕು.
- ಜಾನಕಿರಾಮ್ ಇಒ ತಾಪಂ ಪಾವಗಡ