ಕನ್ನಡಪ್ರಭ ವಾರ್ತೆ ಬೀದರ್
ದಿ. ಡಾ.ಗುರುಪಾದಪ್ಪ ನಾಗಮಾರಪಳ್ಳಿ ಅವರು ಸಹಕಾರ ಕ್ಷೇತ್ರದ ಮೂಲಕ ಅಭಿವೃದ್ಧಿ ಸಾಧಿಸಿದ, ಬಡವರನ್ನು ಆರ್ಥಿಕವಾಗಿ ಸಶಕ್ತಗೊಳಿಸಿದ ಧೀಮಂತ ನಾಯಕರು ಎಂದು ಹಿರಿಯರಾದ ವಿಶ್ವನಾಥ್ ಸಾವ್ಕಾರ್ ಸ್ಮರಿಸಿದರು.ಔರಾದ್ ತಾಲೂಕಿನ ಚಿಂತಾಕಿ ಗ್ರಾಮದಲ್ಲಿ ಭಾನುವಾರ ದಿ. ಡಾ. ಗುರುಪಾದಪ್ಪ ನಾಗಮಾರಪಳ್ಳಿ ಅವರ 9 ನೇ ವರ್ಷದ ಪುಣ್ಯ ಸ್ಮರಣೆ ನಿಮಿತ್ತ ಗುರುಪಾದಪ್ಪ ನಾಗಮಾರಪಳ್ಳಿ ಮಲ್ಟಿ ಸೂಪರ್ ಸ್ಪೇಷಾಲಿಟಿ ಸಹಕಾರ ಆಸ್ಪತ್ರೆ ವತಿಯಿಂದ ಹಮ್ಮಿಕೊಂಡಿದ್ದ ಉಚಿತ ಅರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿ, ಹಣಕಾಸು ವ್ಯವಹಾರ ನಡೆಸುವ ಬ್ಯಾಂಕ್ಗೆ ಹೊಸ ರೂಪ ನೀಡಿ, ಜನ ಸಾಮಾನ್ಯರ ಏಳಿಗೆಗೆ ಶ್ರಮಿಸುವಂತೆ ಮಾಡಿದದರು.
ದಿ. ನಾಗಮಾರಪಳ್ಳಿ ಅವರು ದಾಖಲೆ ಅವಧಿಯಲ್ಲಿ ನಾರಂಜಾ ಕಾರ್ಖಾನೆ ನಿರ್ಮಿಸಿದರು. ಅವರ ನಾಯಕತ್ವದಲ್ಲಿ ಡಿಸಿಸಿ ಬ್ಯಾಂಕ್ ದೇಶದ ಗಮನ ಸೆಳೆಯುವಂತೆ ಬೆಳೆದಿದೆ ಎಂದರು.ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಉಮಾಕಾಂತ್ ನಾಗಮಾರಪಳ್ಳಿ ಅವರು ಎಸ್ಎಚ್ ಜಿ ಮೂಲಕ ಜಿಲ್ಲೆಯಲ್ಲಿ ಮೌನ ಕ್ರಾಂತಿ ಮಾಡಿದವರು ದಿ. ನಾಗಮಾರಪಳ್ಳಿ ಎಂದು ಹೇಳಿದರು. ಗುರುಪಾದಪ್ಪ ನಾಗಮಾರಪಳ್ಳಿ ಸಹಕಾರ ಆಸ್ಪತ್ರೆ ಅಧ್ಯಕ್ಷ ಸೂರ್ಯಕಾಂತ್ ನಾಗಮಾರಪಳ್ಳಿ ಮಾತನಾಡಿ, ತಂದೆಯವರು ಆರಂಭಿಸಿದ ಆಸ್ಪತ್ರೆಯನ್ನು ಯಶಸ್ವಿಯಾಗಿ ಮುನ್ನಡೆಸಲಾಗುತ್ತಿದೆ ಎಂದರು.
ತಾಯಿ, ಮಗುವಿನ ಅರೋಗ್ಯ ರಕ್ಷಣೆಯಲ್ಲಿ ನಾಗಮಾರಪಳ್ಳಿ ಆಸ್ಪತ್ರೆ ವಿಶೇಷ ಸಾಧನೆ ಮಾಡಿದೆ. ನವಜಾತ ಶಿಶುಗಳ ಆರೈಕೆಗೆ ಹೆಸರಾಗಿದೆ ಎಂದರು. ಆಸ್ಪತ್ರೆ ಉಪಾಧ್ಯಕ್ಷ ತರುಣ್ ಸೂರ್ಯಕಾಂತ್ ನಾಗಮಾರಪಳ್ಳಿ, ನಾರಂಜಾ ಕಾರ್ಖಾನೆ ಅಧ್ಯಕ್ಷ ಸಿದ್ರಾಮ್ ಡಿ.ಕೆ., ಆಸ್ಪತ್ರೆ ನಿರ್ದೇಶಕರಾದ ಆಕಾಶ್ ನಾಗಮಾರಪಳ್ಳಿ, ಗ್ರಾಮ ಪಂಚಾಯತ್ ಅಧ್ಯಕ್ಷ ಗುರುನಾಥ ರೆಡ್ಡಿ, ಪ್ರಮುಖರಾದ ಭೀಮರಾವ್ ಪಾಟೀಲ್ ಡಿಗ್ಗಿ, ಹಾವಶೆಟ್ಟಿ ಪಾಟೀಲ್, ವೀರಶೆಟ್ಟಿ ಪಟ್ನೆ, ಸಂಜು ಸಿದ್ದಾಪುರ್, ಮಾಧವರಾವ್ ಪಾಟೀಲ್, ಜಗನ್ನಾಥ ಪಾಟೀಲ್ ಸಾಂಗವಿ, ಸೋಮಶೇಖರ್ ಪಾಟೀಲ್, ಹಾವಗಿರಾವ್ ಬಿರಾದಾರ್, ಸಂಗಮೇಶ ಪಾಟೀಲ್ ಅಲಿಯಂಬುರೆ, ವಿಜಯಕುಮಾರ್ ಪಾಟೀಲ್, ಎನ್ ಎಸ್ ಎಸ್ ಕೆ ನಿರ್ದೇಶಕ ಝರೆಪ್ಪ ಮಮದಾಪುರ್, ಶಿವಕುಮಾರ್ ಕನ್ನಾ, ಡಾ. ದೀಪಕ್ ಚೊಕ್ದೆ, ಡಾ. ಕಾರ್ತಿಕ ಪಾಟೀಲ್, ಡಾ. ಸುಷ್ಮಾ ಜಿ. ಮತ್ತಿತರ ಗಣ್ಯರು ಉಪಸ್ಥಿತರಿದ್ದರು.