ಕನ್ನಡಪ್ರಭ ವಾರ್ತೆ ಪಾಂಡವಪುರ
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಒಳಮೀಸಲಾತಿ ವಿಚಾರದಲ್ಲಿ ನಾಗಮೋಹನದಾಸ್ ಅವರು ಸರ್ಕಾರಕ್ಕೆ ನೀಡಿರುವ ವರದಿ ಅವೈಜ್ಞಾನಿಕವಾಗಿದೆ. ವರದಿಯಲ್ಲಿ ಬಲಗೈ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಪರಿಶಿಷ್ಟ ಜಾತಿ ಬಲಗೈ ಸಮುದಾಯದ ಒಳಮೀಸಲಾತಿ ರಕ್ಷಣ ಸಮಿತಿ ಸದಸ್ಯ ಕಣಿವೆ ರಾಮು ಆಕ್ರೋಶ ಹೊರಹಾಕಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕಿನ ಪರಿಶಿಷ್ಟ ಜಾತಿ ಬಲಗೈ ಸಮುದಾಯದ ಒಳಮೀಸಲಾತಿ ರಕ್ಷಣ ಸಮಿತಿ ಸದಸ್ಯರು ಸಭೆ ನಡೆಸಿ ಚರ್ಚಿಸಿ ನಾಗಮೋಹನ್‌ದಾಸ್ ನೀಡಿರುವ ವರದಿ ವಿರುದ್ಧ ಆಗಸ್ಟ್ 14ರಂದು ಪಟ್ಟಣದಲ್ಲಿ ಪ್ರತಿಭಟನೆ ನಡೆಸಲು ತೀರ್ಮಾನಿಸಿದರು.
ದಲಿತ ಸಮುದಾಯದ ಒಳಮೀಸಲಾತಿ ವರ್ಗೀಕರಣ ವರದಿ ನೀಡುವಂತೆ ರಾಜ್ಯ ಸರ್ಕಾರ ನಾಗಮೋಹನ್‌ದಾಸ್ ನೇತೃತ್ವದಲ್ಲಿ ಸಮಿತಿ ರಚಿಸಿ ವರದಿ ತಯಾರಿಸಿದ್ದು, ಸಿದ್ದಗೊಳಿಸಿ ಸರಕಾರಕ್ಕೆ ನೀಡಿದ್ದಾರೆ. ಆದರೆ ಈ ವರದಿಯಲ್ಲಿ ಪರಿಶಿಷ್ಟ ಜಾತಿ ಬಲಗೈ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದರು.ವರದಿಯಲ್ಲಿ ಪರಿಶಿಷ್ಟ ಜಾತಿ ಬಲಗೈ ಸಮುದಾಯ ಕಡಿಮೆ ಇದ್ದು ಎಡಗೈ ಸಮುದಾಯ ಹೆಚ್ಚಿದೆ ಎಂಬುದಾಗಿ ನೀಡಿದ್ದಾರೆ. ಬಲಗೈ ಸಮುದಾಯ ವಲಯ ಎಂಬುದಾಗಿ ಜಾತಿ ನೋಂದಾಯಿಸಿದ್ದೇವೆ. ಅಲ್ಲದೇ, ಬಲಗೈ ಸಮುದಾಯದವರು ವಲಯ ಎಂಬುವುದರ ಜತೆಗೆ ಛಲವಾದಿ, ಆದಿಕರ್ನಾಟಕ, ಆದಿದ್ರಾವಿಡ, ಏಕೆ ಎಂಬುದಾಗಿ ಉಪಜಾತಿ ನೋಂದಾಯಿಸಿದ್ದಾರೆ ಎಂದರು.
ವರದಿ ರಚಿಸಿರುವ ನಾಗಮೋಹನ್‌ದಾಸ್ ಅವರು ಬಲಗೈ ಸಮುದಾಯಕ್ಕೆ ವಲಯ, ಛಲವಾದಿ, ಆದಿಕರ್ನಾಟಕ, ಆದಿದ್ರಾವಿ ಹಾಗೂ ಏಕೆ ಎಂಬ ಜಾತಿಗಳನ್ನು ಸೇರಿಸಿ ಎಲ್ಲವು ಬಲಗೈ ಪಂಗಡ ಎಂಬುದಾಗಿ ವರದಿ ನೀಡಬೇಕು. ಹಾಗಾಗಿ ಈ ವರದಿಯನ್ನು ತಿರಿಸ್ಕರಿಸುವ ಜತೆಗೆ ಇದರ ವಿರುದ್ಧ ಇದೇ ಆಗಸ್ಟ್ 14ರಂದು ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.ಮುಖಂಡ ಕನಗನಮರಡಿ ಬೊಮ್ಮರಾಜು ಮಾತನಾಡಿ, ನಾಗಮೋಹನ್‌ದಾಸ್ ಅವರ ವರದಿಯನ್ನು ಬಲಗೈ ಸಮುದಾಯ ಒಪ್ಪುವುದಿಲ್ಲ ಎಂದರು.
ಈ ವೇಳೆ ಸಮಿತಿ ಸದಸ್ಯರಾದ ವಡ್ಡರಹಳ್ಳಿ ಕೆಂಪರಾಜು, ವಕೀಲ ನಲ್ಲಹಳ್ಳಿ ಸುರೇಶ್, ಅಂತನಹಳ್ಳಿ ಶಿವಸ್ವಾಮಿ, ಬಸರಾಜು, ಬೇಬಿನಾಗೇಶ್, ಬ್ಯಾಡರಹಳ್ಳಿ ಪ್ರಕಾಶ್, ಅಂದಾನಯ್ಯ, ವೆಂಕಟೇಶ್, ಪಾಪಯ್ಯ, ಗಿರಿಯಾರಹಳ್ಳಿ ಮೂರ್ತಿ, ಬೇವಿನಕುಪ್ಪೆ ದೇವರಾಜು, ವರದರಾಜು, ಟಿ.ಎಸ್.ಛತ್ರ ಸಿದ್ದಲಿಂಗಮೂರ್ತಿ, ಬಳೇಅತ್ತಿಗುಪ್ಪೆ ರವಿ, ವರದರಾಜು, ಹರಳಹಳ್ಳಿ ಲೋಕೇಶ್, ಕುಮಾರಸ್ವಾಮಿ, ಎಂ.ವಿ.ಕೃಷ್ಣ, ಪರಮೇಶ್, ವೆಂಕಟೇಶ್, ಶ್ರೀಧರ, ಪ್ರಸನ್ನ, ಜವರಪ್ಪ, ಮಂಜು, ಕೆನ್ನಾಳು ಮಹೇಶ್ ಸೇರಿದಂತೆ ಹಲವರು ಹಾಜರಿದ್ದರು.