ದಿ. ಮಾಜಿ ಶಾಸಕರಾದ ನಾಗನಗೌಡ ಕಂದುಕೂರು ಅವರು ತಮ್ಮ ಸುಧೀರ್ಘ ಕಾಲದ ರಾಜಕೀಯ ಜೀವನದಲ್ಲಿ ಸೋಲು-ಗೆಲುವುಗಳನ್ನ ಸಮನಾಗಿ ಕಂಡವರು.
ಕನ್ನಡಪ್ರಭ ವಾರ್ತೆ ಯಾದಗಿರಿ
ದಿ. ಮಾಜಿ ಶಾಸಕರಾದ ನಾಗನಗೌಡ ಕಂದುಕೂರು ಅವರು ತಮ್ಮ ಸುಧೀರ್ಘ ಕಾಲದ ರಾಜಕೀಯ ಜೀವನದಲ್ಲಿ ಸೋಲು-ಗೆಲುವುಗಳನ್ನ ಸಮನಾಗಿ ಕಂಡವರು. ನಂಬಿದ ಕಾರ್ಯಕರ್ತರ ಎಂದೂ ಕೈ ಬಿಟ್ಟವರಲ್ಲ ಎಂದು ಯರಗೋಳದ ವಿಜಯಕುಮಾರ ದಿಬ್ಬಾ ಹೇಳಿದರು.
ಗುರುಮಠಕಲ್ ಮತಕ್ಷೇತ್ರದ ಮಾಜಿ ಶಾಸಕರಾದ ದಿ. ನಾಗನಗೌಡ ಕಂದಕೂರು ಅವರ ನುಡಿ ನಮನ ಅಂಗವಾಗಿ ಸಮೀಪದ ಯರಗೋಳ ಗ್ರಾಮದ ಸರ್ಕಾರಿ ಸಾಮಾನ್ಯ ತರಬೇತಿ ಕೇಂದ್ರದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭೀಮಾಶಂಕರ್ ಮಮ್ಮದರ ಮಾತನಾಡಿ, ಕಂದಕೂರ ಮನೆತನದ ದಿ. ನಾಗನಗೌಡ ಕಂದಕೂರು ಅವರು ಕಾರ್ಯಕರ್ತರ ಸಂಕಷ್ಟಗಳಿಗೆ ಬೆನ್ನೆಲುಬಾಗಿದ್ದರು. ತಮ್ಮ ಜೀವನದಲ್ಲಿ ಪಕ್ಷ ನಿಷ್ಠೆ, ಜಾತ್ಯತೀತ ತತ್ವ, ಸಮಾನತೆ, ಮಾನವೀಯತೆ, ಕಾಳಜಿ ಅಳವಡಿಸಿಕೊಂಡಿದ್ದರು ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಣ್ಣ ಅಲ್ಲಿಪೂರ ಅವರು ದಿ. ನಾಗನಗೌಡರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಲಾರ್ಪಣೆ ಮಾಡಿ, ಮೌನಚರಣೆ ಸಲ್ಲಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.