ಕನ್ನಡಪ್ರಭ ವಾರ್ತೆ ಮೂಡಲಗಿ
ತಾಲೂಕಿನ ನಾಗನೂರ ಪಟ್ಟಣದ ನಾಗನೂರ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಸಭಾಭವನದಲ್ಲಿ ಸಂಘದ ಪ್ರಗತಿ ಕುರಿತು ಕರೆದಿದ್ದ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಸಹಕಾರಿ ಸಂಘವು ಕಳೆದ ಮಾರ್ಚ್ ಅಂತ್ಯಕ್ಕೆ ₹97.30 ಲಕ್ಷ ಶೇರು ಬಂಡವಾಳ ಹೊಂದಿ, ₹140.90 ಕೋಟಿ ಠೇವು ಸಂಗ್ರಹಿಸಿ, ವಿವಿಧ ತೆರನಾದ ₹116.81 ಕೋಟಿ ಸಾಲಗಳು ವಿತರಿಸಿ, ₹32.5 ಕೋಟಿ ಶಾಸನ ಬದ್ಧ ಹೂಡಿಕೆ ಮಾಡಿ, ₹13.29 ಕೋಟಿ ನಿಧಿಗಳನ್ನು ಹೊಂದುವುದರೊಂದಿಗೆ ಒಟ್ಟು ₹158.13 ಕೋಟಿ ದುಡಿಯುವ ಬಂಡವಾಳ ಹೊಂದಿದೆ ಎಂದರು. ಸಹಕಾರಿ ಸಂಘವು ಈಗಾಗಲೇ 14 ಶಾಖೆಗಳನ್ನು ಹೊಂದಿ ಎಲ್ಲ ಶಾಖೆಗಳು ಪ್ರಗತಿಯಲ್ಲಿದ್ದು, ಮುಂಬರುವ ದಿನಗಳ ಇನ್ನೂ 5 ಶಾಖೆಗಳ ಆರಂಭಿಸುವ ಮತ್ತು ಶಾಖೆಗಳ ಸ್ವಂತ ಕಟ್ಟಡ ಹೊಂದಲು ನಿವೇಶ ಖರೀದಿಸುವ ಗುರಿ ಹೊಂದಲಾಗಿದೆ ಎಂದರು.ಪ್ರಧಾನ ವ್ಯವಸ್ಥಾಪಕ ಪ್ರಕಾಶ ಅಂಗಡಿ ಮಾತನಾಡಿ, ಸಹಕಾರಿ ಸಂಘದ ಗ್ರಾಹಕರು ಸಕಾಲಕ್ಕೆ ವ್ಯವಹಾರ ನಡೆಸಿದರಿಂದ ಪ್ರಗತಿ ಪತಥದತ್ತ ಸಾಗುತ್ತಿವೆ ಎಂದರು.ಸಭೆಯಲ್ಲಿ ಪಟ್ಟಣದ ಹಿರಿಯರಾದ ಬಾಳಗೌಡ ಪಾಟೀಲ, ಸಹಕಾರಿ ಸಂಘದ ಉಪಾಧ್ಯಕ್ಷ ಶಿವಲಿಂಗಪ್ಪ ಗೋಟೂರ, ನಿರ್ದೇಶಕರಾದ ವೆಂಕಪ್ಪ ಪೂಜೇರಿ, ಮಲ್ಲಪ್ಪ ಲಕ್ಷ್ಮಪ್ಪ ಬಂಡಿ, ರುದ್ರಪ್ಪ ಭಾಗೋಜಿ, ಸುಭಾಸ ಸಣ್ಣಕ್ಕಿ, ಶಿವಾನಂದ ದಡ್ಡಿ, ರಾಮಪ್ಪ ಪದ್ದಿ, ಕೆಂಪಣ್ಣ ನಿಡಸೋಸಿ, ಶ್ರೇಯಾಂಶ ಮೆಳವಂಕಿ, ಕೆಂಪಣ್ಣ ಕರಿಹೊಳಿ, ದುಂಡಪ್ಪ ಬೆಳಕೂಡ, ವಿಠಲ ಬೆಳಕೂಡ, ಬಾಳಪ್ಪ ಬಡಕುಂದ್ರಿ, ರಾಮಗೌಡ ತಡಸನವರ, ರತ್ನಾ ಪಾಟೀಲ, ಜಯಶ್ರೀ ಕರಿಹೋಳಿ, ಸಂಘದ ಹಣಕಾಸು ಅಭಿವೃದ್ಧಿ ಅಧಿಕಾರಿಗಳಾದ ಭೀಮಪ್ಪ ಬಂಡಿವಡ್ಡರ, ಶಿವಾನಂದ ಕರೋಳಿ ಹಾಗೂ ಎಲ್ಲಾ ಶಾಖೆಗಳ ಸಿಬ್ಬಂದಿ ವರ್ಗದವರು ಇದ್ದರು. ಸಿದ್ಧಾರೂಢ ಕೆಸರಗೊಪ್ಪ ನಿರೂಪಿಸಿದರು. ಪ್ರಕಾಶ ಅಂಗಡಿ ಸ್ವಾಗತಿಸಿದರು. ರಮೇಶ ಕಂಬಿ ವಂದಿಸಿದರು.