ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಕಳೆದ 3 ವರ್ಷಗಳಿಂದ ನಮ್ಮ ಸಂಸ್ಥೆ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಪ್ರಥಮ ಸ್ಥಾನ ಪಡೆಯುತ್ತಿದೆ ಎಂದು ಆಕ್ಸಫರ್ಡ್ ಪಾಟೀಲ್ಸ್ ಶಿಕ್ಷಣ ಸಂಸ್ಥೆ ಚೇರಮನ್ ಎಂ.ಎಸ್.ಪಾಟೀಲ್ ಹೇಳಿದರು.ತಾಲೂಕಿನ ನಾಗರಬೆಟ್ಟ ಆಕ್ಸಫರ್ಡ್ ಪಾಟೀಲ್ಸ್ ಶಿಕ್ಷಣ ಸಂಸ್ಥೆಯಲ್ಲಿ ಜೂನಿಯರ್ ಜೀನಿಯಸ್ ಅವಾರ್ಡ್ ಪರೀಕ್ಷೆಯ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನೀಟ್ ಪರೀಕ್ಷೆಗೆ ಬೇಕಾದ ತರಬೇತಿಯನ್ನು 6ನೇ ತರಗತಿಯಿಂದಲೇ ನೀಡಲಾಗುತ್ತದೆ. ಅಲ್ಲದೇ, ಶೇ.60 ರಷ್ಟು ಫಲಿತಾಂಶಕ್ಕೆ ಇದು ಅನುಕೂಲವಾಗಿದೆ ಎಂದು ತಿಳಿಸಿದರು.
ಕೋರಿ ಸಿದ್ದೇಶ್ವರ ಶಾಖಾಮಠದ ಸಿದ್ದಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಜೂನಿಯರ್ ಜೀನಿಯಸ್ ಸ್ಟೂಡೆಂಟ್ ಅವಾರ್ಡ್ ಸ್ಪರ್ಧೆಯಲ್ಲಿ 9ನೇ ತರಗತಿಯ ಸೀಜಲ್ ಮಾಳಿ, ನಿಂಗರಾಜ ಹಿರೇನಿಂಗಪ್ಪನವರ ಪ್ರಥಮ, ಸಾಗರ ಪಡೆಕನೂರ, ಉಸ್ಮಾನ್ ನದಾಫ್ ದ್ವೀತಿಯ, ತೃತೀಯ ಸ್ಥಾನವನ್ನು ನಾಲ್ಕು ವಿದ್ಯಾರ್ಥಿಗಳು, 5ನೇ ಸ್ಥಾನವನ್ನು 5 ವಿದ್ಯಾರ್ಥಿಗಳು ಪಡೆದರು. 8ನೇ ತರಗತಿಯಲ್ಲಿ ಸೃಷ್ಟಿ ನ್ಯಾಮಣ್ಣವರ ಪ್ರಥಮ, ಆದಿತಿ ನಾಜಮನ್ಯಾ ದ್ವಿತೀಯ, ಭೂಮಿಕಾ ಪಾಟೀಲ್ ತೃತೀಯ, 4ನೇ ಸ್ಥಾನವನ್ನು ಇಬ್ಬರು ಹಾಗೂ 5ನೇ ಸ್ಥಾನವನ್ನು ಮೂರು ವಿದ್ಯಾರ್ಥಿಗಳು ಪಡೆದರು.
ಪ್ರಥಮ ಬಹುಮಾನ ₹20 ಸಾವಿರ, ದ್ವಿತೀಯ ₹15 ಸಾವಿರ, ತೃತೀಯ ₹10 ಸಾವಿರ, 4ನೇ ಸ್ಥಾನ ₹8 ಸಾವಿರ, 5ನೇ ಸ್ಥಾನ ₹5 ಸಾವಿರ ನೀಡಲಾಯಿತು. ಕೋಳೂರ ಶಾಲೆಯ ಮುಖ್ಯ ಶಿಕ್ಷಕ ರುದ್ರೇಶ್ ಕಿತ್ತೂರು, ಹುಣಚಗಿ ಶಿಕ್ಷಕರಾದ ಅಶೋಕ್ ಪೂಜಾರಿ, ಸಂಗಮೇಶ ಹೂಗಾರ ಮಾತನಾಡಿದರು. ದರ್ಶನ್ ಗೌಡ ಪಾಟೀಲ್, ಮುಖ್ಯ ಶಿಕ್ಷಕ ಇಸ್ಮಾಯಿಲ್ ಮನಿಯಾರ ನಿರೂಪಿಸಿದರು, ಗುರುರಾಜ ಕನ್ನೂರ ಸ್ವಾಗತಿಸಿ, ವಂದಿಸಿದರು.ಕಳೆದ 3 ವರ್ಷಗಳಿಂದ ನಮ್ಮ ಸಂಸ್ಥೆ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಪ್ರಥಮ ಸ್ಥಾನ ಪಡೆಯುತ್ತಿದೆ. ನೀಟ್ ಪರೀಕ್ಷೆಗೆ ಬೇಕಾದ ತರಬೇತಿಯನ್ನು 6ನೇ ತರಗತಿಯಿಂದಲೇ ನೀಡಲಾಗುತ್ತದೆ. ಅಲ್ಲದೇ, ಶೇ.60 ರಷ್ಟು ಫಲಿತಾಂಶಕ್ಕೆ ಇದು ಅನುಕೂಲವಾಗಿದೆ.-ಎಂ.ಎಸ್.ಪಾಟೀಲ,
ನಾಗರಬೆಟ್ಟ ಆಕ್ಸಫರ್ಡ್ ಪಾಟೀಲ್ಸ್ ಶಿಕ್ಷಣ ಸಂಸ್ಥೆಯ ಚೇರಮನ್.