ನಾಗರಂಗ ನಾಟಕೋತ್ಸವ: ಇಂದು ಪ್ರಾಣಪದ್ಮಿನಿ ನಾಟಕ ಪ್ರದರ್ಶನ

KannadaprabhaNewsNetwork |  
Published : Nov 26, 2025, 01:45 AM IST
25ಕೆಎಂಎನ್ ಡಿ28 | Kannada Prabha

ಸಾರಾಂಶ

ಪ್ರಾಣಪದ್ಮಿನಿ ನಾಟಕವು ವಿಜಯನಗರ ಹಾಗೂ ಮೊಘಲರ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ ರಾಣಿಯೊಬ್ಬಳು ಪ್ರಜೆಗಳಿಗಾಗಿ ತೆಗೆದುಕೊಳ್ಳುವ ನಿರ್ಧಾರದ ಹಿನ್ನೆಲೆಯಲ್ಲಿ ಉಂಟಾಗುವ ಧರ್ಮಸಂಕಟ ಕೇವಲ ಪಾತ್ರಗಳಿಗೆ ಸೀಮಿತವಾಗದೆ ಪ್ರೇಕ್ಷಕರಿಗೂ ವಿಸ್ತರಿಸಿ ಕಾಡುತ್ತದೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಪಟ್ಟಣದ ಕನ್ನಡ ಸಂಘ ವಿಶ್ವಸ್ಥ ಸಮಿತಿ ವತಿಯಿಂದ ಸರ್ಕಾರಿ ಪದವಿ ಪೂರ್ವಕಾಲೇಜು ಆವರಣದಲ್ಲಿ ಆಯೋಜಿಸಿರುವ 17ನೇ ನಾಗರಂಗ ನಾಟಕೋತ್ಸವದ ನಾಲ್ಕನೇ ದಿನವಾದ ನ.26ರ ಬುಧವಾರ ಸಂಜೆ 7.15ಕ್ಕೆ ಸಾಗರದ ಸ್ಪಂದನ ರಿಜಿಸ್ಟರ್ ಪ್ರಸ್ತುತಿಯ ಬಡಿಗೇರ್ ಮಂಜುನಾಥ್ ನಿರ್ದೇಶನದ ‘ಪ್ರಾಣಪದ್ಮಿನಿ’ ಎಂಬ ನಾಟಕ ಪ್ರದರ್ಶನಗೊಳ್ಳಲಿದೆ.

ನಾಟಕದ ಸಾರಾಂಶ:

ಈ ನಾಟಕವು ಪ್ರೇಕ್ಷಕರನ್ನು ಸರಿ ತಪ್ಪುಗಳ ಬಗ್ಗೆ ಯೋಚಿಸುವಂತೆ ಮಾಡುವ ಕಥಾಹಂದರ ಹೊಂದಿದೆ. ವಿಜಯನಗರ ಹಾಗೂ ಮೊಘಲರ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ ರಾಣಿಯೊಬ್ಬಳು ಪ್ರಜೆಗಳಿಗಾಗಿ ತೆಗೆದುಕೊಳ್ಳುವ ನಿರ್ಧಾರದ ಹಿನ್ನೆಲೆಯಲ್ಲಿ ಉಂಟಾಗುವ ಧರ್ಮಸಂಕಟ ಕೇವಲ ಪಾತ್ರಗಳಿಗೆ ಸೀಮಿತವಾಗದೆ ಪ್ರೇಕ್ಷಕರಿಗೂ ವಿಸ್ತರಿಸಿ ಕಾಡುತ್ತದೆ.ಸಾಲುಮರದ ತಿಮ್ಮಕ್ಕರ 11ನೇ ದಿನದ ಪುಣ್ಯತಿಥಿ

ಮದ್ದೂರು: ಪಟ್ಟಣದ ಪುರಸಭೆ ಉದ್ಯಾನವನದ ಸ್ನೇಹ ಬಳಗದಿಂದ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅವರ 11ನೇ ದಿನದ ಪುಣ್ಯತಿಥಿಯನ್ನು ರೈತರಿಗೆ ಸಸಿಗಳನ್ನು ವಿತರಣೆ ಮಾಡಿ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಬಳಗದ ನಿವೃತ್ತ ರಾಜಸ್ವ ನಿರೀಕ್ಷಕ ತಿಮ್ಮೇಗೌಡ ಹಾಗೂ ಸುರೇಶ್ ನೇತೃತ್ವದಲ್ಲಿ ಸಾಲುಮರದ ತಿಮ್ಮಕ್ಕ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಪೂಜೆ ಸಲ್ಲಿಸಿದ ಬಳಿಕ ಸುಮಾರು 50 ಮಂದಿ ರೈತರಿಗೆ ಸಸಿಗಳನ್ನು ವಿತರಣೆ ಮಾಡಲಾಯಿತು.

ನಂತರ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ನಡೆಯಿತು. ಈ ವೇಳೆ ಬಳಗದ ಪ್ರಕಾಶ್, ರಂಜು, ಚೆನ್ನಪ್ಪ, ರಾಮಕೃಷ್ಣ ಮತ್ತಿತರರು ಇದ್ದರು.ಹಣ್ಣು ಹಂಪಲು ವಿತರಣೆ

ಹಲಗೂರು: ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ 78ನೇ ಹುಟ್ಟುಹಬ್ಬದ ಪ್ರಯುಕ್ತ ಸಮೀಪದ ಬಾಳೆ ಹೊನ್ನಿಗ ಗ್ರಾಮದ ವೃದ್ಧರಿಗೆ ಹಣ್ಣು ಹಂಪಲು ವಿತರಿಸಲಾಯಿತು. ಈ ವೇಳೆ ಭಾರತಿನಗರ ಯೋಜನಾಧಿಕಾರಿ ಸುವರ್ಣ ಭಟ್, ಜಿಲ್ಲಾ ಜನಜಾಗೃತಿ ಸದಸ್ಯರಾದ ಧರಣಿ ಮೆಣಸಗೆರೆ, ವಲಯದ ಮೇಲ್ವಿಚಾರಕರು ಗಿರೀಶ್, ಗ್ರಾಪಂ ಸದಸ್ಯರಾದ ನಾಗರಾಜ್, ಕಿರಣ್, ಮಧು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುವೆಂಪು ಸದ್ಭಾವನಾ ಪ್ರಶಸ್ತಿಗೆ ಭಾಜನರಾದ ಶ್ರೀ ಶ್ಯಾಮ್ ಸುಂದರ್ ಹೆಗ್ಡೆ
ಕಿಡ್ನಾಪ್‌ ಆದ 1094 ಮಕ್ಕಳು ಇನ್ನೂ ಪತ್ತೆಯಾಗಿಲ್ಲ!