ಮರಿಯಮ್ಮನಹಳ್ಳಿ: ವಿಶ್ವವಿದ್ಯಾಲಯದ ಪಠ್ಯಗಳಲ್ಲಿ ಮರಿಯಮ್ಮನಹಳ್ಳಿಯ ಹಿರಿಯ ರಂಗಕಲಾವಿದೆ ಡಾ.ಕೆ. ನಾಗರತ್ನಮ್ಮ ಅವರ ಕುರಿತು ಜೀವನ ಸಾಧನೆಯ ವಿಷಯ ಅಳವಡಿಸಬೇಕು ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಡಾ. ರವಿ ಬಿ. ಹೇಳಿದರು.
ಇಲ್ಲಿನ ದುರ್ಗಾದಾಸ್ ಕಲಾಮಂದಿರದಲ್ಲಿ ಇಲ್ಲಿನ ರಂಗಸಿರಿ ಕಲಾ ಟ್ರಸ್ಟ್ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾಲಯ ನಾಟಕ ವಿಭಾಗ ಇವರ ಸಹಯೋಗದಲ್ಲಿ ಭಾನುವಾರ ನಡೆದ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣ ಡಾ.ಕೆ. ನಾಗರತ್ನಮ್ಮ ಅವರ ರಂಗ ಬದುಕು- ಸಾಧನೆ ಅಭಿವೃದ್ಧಿಯ ಸ್ವರೂಪ ಕುರಿತು ನಡೆದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.ಡಾ.ಕೆ.ನಾಗರತ್ನಮ್ಮ ಗ್ರಾಮೀಣ ರಂಗಭೂಮಿಯ ಬಹುದೊಡ್ಡ ಪ್ರತಿಭಾವಂತ ಕಲಾವಿದೆ. ಅವರ ಕಲೆ ಮತ್ತು ಸಾಧನೆಯ ಕುರಿತು ವಿದ್ಯಾರ್ಥಿಗಳಿಗೆ ಗ್ರಾಮಾಂತರ ರಂಗಭೂಮಿ ಬದುಕು ಮತ್ತು ಸಾಧನೆ- ಅಭಿವ್ಯಕ್ತಿ ಸ್ವರೂಪ ಕುರಿತು ಪರಿಯಿಸಲು ವಿಶ್ವವಿದ್ಯಾಲಯದ ಪಠ್ಯದಲ್ಲಿ ಅವರ ಜೀವನ ಚಿರಿತ್ರೆಯ ಪಾಠ ಅಳವಡಿಸಬೇಕು ಎಂದು ಅವರು ಹೇಳಿದರು.
ಡಾ.ಕೆ.ನಾಗರತ್ನಮ್ಮ ಜೀವನ ತೆರೆದ ಪುಸ್ತಕದಂತೆ ನಾವು ರಂಗಭೂಮಿ ಸೇವೆ ಸಲ್ಲಿಸುವಂತಹ ಅವಕಾಶ ದೊರಕಿರುವುದೇ ನಮ್ಮ ಪುಣ್ಯ ಎಂದು ಭಾವಿಸಿ ಸುದೀರ್ಘಕಾಲ ರಂಗಭೂಮಿ ಸೇವೆ ಸಲ್ಲಿಸಿರುವುದುರಿಂದ ಅವರಿಗೆ ಅನೇಕ ಪ್ರಶಸ್ತಿಗಳು ಹುಡಿಕೊಂಡು ಬಂದಿವೆ. ನಾಗರತ್ನಮ್ಮ ಅವರಿಗೆ ಸಿಕ್ಕ ಪ್ರಶಸ್ತಿಗಳು ಮತ್ತು ಅವರ ರಂಗಭೂಮಿ ಸೇವೆ ಮುಂದಿನ ಪೀಳಿಗೆಗೆ ತಿಳಿಸುವ ಉದ್ದೇಶದಿಂದ ವಿಶ್ವವಿದ್ಯಾಲಯದ ಪಠ್ಯಗಳಲ್ಲಿ ಅವರ ಜೀವನ ಚರಿತ್ರೆ ಪಠವಾಗಿ ಅಳವಡಿಸುವ ಮೂಲಕ ಅವರಿಗೆ ಗೌರವ ಸಲ್ಲಿಸಬೇಕು ಎಂದು ಹೇಳಿದರು.ಹಂಪಿ ಕನ್ನಡ ವಿಶ್ವವಿದ್ಯಾಲಯದ ನಾಟಕ ವಿಭಾಗದ ಮುಖ್ಯಸ್ಥ ಡಾ. ವೀರೇಶ್ ಬಡಿಗೇರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಸಾಹಿತಿ, ನಿವೃತ್ತ ಜಿಲ್ಲಾ ಉಪಯೋಜನಾ ಸಮನ್ವಯಾಧಿಕಾರಿ ಡಾ.ಲಲಿತಾ ಹೊಸಪ್ಯಾಟಿ, ಡಾ.ಕೆ. ನಾಗರತ್ನಮ್ಮ ಅಭಿನಂದನಾ ಸಮಿತಿ ಅಧ್ಯಕ್ಷ ಡಿ. ರಾಘವೇಂದ್ರ ಶೆಟ್ಟಿ, ಕೃಷಿ ವಿಜ್ಞಾನಿ ಡಾ. ಅಶೋಕ ಸಭೆಯಲ್ಲಿ ಮಾತನಾಡಿದರು. ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತೆ ಡಾ. ಕೆ. ನಾಗರತ್ನಮ್ಮ ಸಭೆಯಲ್ಲಿ ಉಪಸ್ಥಿತರಿದ್ದರು.ಕೆ.ಪಂಕಜ ಬಸವರಾಜ ಮತ್ತು ತಂಡದವರು ಪ್ರಾರ್ಥಿಸಿದರು. ಕಲಾವಿದರಾದ ಎಚ್.ಮಂಜುನಾಥ ಸ್ವಾಗತಿಸಿದರು. ಎಚ್.ಉಮೇಶ್ ವಂದಿಸಿದರು. ಉಪನ್ಯಾಸಕ ವಿನಯಕುಮಾರ್ ಆರ್.ಪಿ. ನಿರೂಪಿಸಿದರು.