ನೋವಿನಲ್ಲೂ ಮತ ಚಲಾಯಿಸಿದ ನಾಗರೆಡ್ಡಿ ಗೌಡರ ಕುಟುಂಬ ಸದಸ್ಯರು

KannadaprabhaNewsNetwork |  
Published : May 08, 2024, 01:07 AM IST
ಫೋಟೋ- ನಾಗರೆಡ್ಡಿ ಫ್ಯಾಮಿಲಿ ಸೇಡಂಕಲಬುರಗಿ ಲೋಕಸಭೆ ಮತಕ್ಷೇತ್ರದಲ್ಲಿ ಬರುವ ಸೇಡಂ ಪಟ್ಟಣದಲ್ಲಿ ಅಲ್ಲಿನ ಮಾಜಿ ಶಾಸಕ ನಾಗರೆಡ್ಡಿ ಪಾಟೀಲರ ಕುಟುಂದ 20 ಕ್ಕೂ ಹೆಚ್ಚು ಸದಸ್ಯರು ನಿನ್ನೆಯಷ್ಟೇ ನಾಗರೆಡ್ಡಿಯವರ ನಿಧನದ ನೋವಿನಲ್ಲಿದ್ದರೂ ಕೂಡಾ ನೋವನ್ನು ಎದೆಯಲ್ಲಿ ಬಚ್ಚಿಟ್ಟುಕೊಂಡೇ ಪ್ರಜಾಪ್ರಭುತ್ವದ ಪವಿತ್ರ ಕರ್ತವ್ವಾದಂತಹ ಮತದಾನವನ್ನು ಮಾಡಿ ಬಂದು ಸರ್ವರ ಗಮನ ಸೆಳೆದರು. | Kannada Prabha

ಸಾರಾಂಶ

ಮೊನ್ನೆಯಷ್ಟೇ ಮಾಜಿ ಶಾಸಕರು, ಶಿಕ್ಷಣ ಪ್ರೇಮಿಗಳಾದ ಡಾ.ನಾಗರೆಡ್ಡಿ ಪಾಟೀಲರು ನಿಧನರಾಗಿದ್ದು, ನೋವಿನಿಂದ ಇನ್ನೂ ಚೇತರಿಸಿಕೊಂಡಿರದ ನಾಗರೆಡ್ಡಿ ಪಾಟೀಲರ ಕುಟುಂಬದವರು ಇಂದಿನ ಲೋಕಸಭೆ ಮತದಾನದಲ್ಲಿ ಪಾಲ್ಗೊಳ್ಳೋದನ್ನ ಮರೆಯಲಿಲ್ಲ.

ಕನ್ನಡಪ್ರಭ ವಾರ್ತೆ ಕಲಬುರಗಿ/ಸೇಡಂ

ಮೊನ್ನೆಯಷ್ಟೇ ಮಾಜಿ ಶಾಸಕರು, ಶಿಕ್ಷಣ ಪ್ರೇಮಿಗಳಾದ ಡಾ.ನಾಗರೆಡ್ಡಿ ಪಾಟೀಲರು ನಿಧನರಾಗಿದ್ದು, ಇಡೀ‌ ಸೇಡಂ ತಾಲೂಕು ಶೋಕದಲ್ಲಿ ಮುಳುಗಿತ್ತು. ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಸಹ ಟ್ವಿಟ್ ಮಾಡುವ ಮೂಲಕ ಹಿರಿಯ ಚೇತನಕ್ಕೆ ಗೌರವ ಸಂತಾಪ ಸಲ್ಲಿಸಿದ್ದರು. ಸರಕಾರಿ ಗೌರವದೊಂದಿಗೆ ನಾಗರೆಡ್ಡಿ ಗೌಡರ ಅಂತ್ಯಕ್ರಿಯೆ ನಡೆದಿತ್ತು.

ನಿನ್ನೆಯ ನೋವಿನಿಂದ ಇನ್ನೂ ಚೇತರಿಸಿಕೊಂಡಿರದ ನಾಗರೆಡ್ಡಿ ಪಾಟೀಲರ ಕುಟುಂಬದವರು ಇಂದಿನ ಲೋಕಸಭೆ ಮತದಾನದಲ್ಲಿ ಪಾಲ್ಗೊಳ್ಳೋದನ್ನ ಮರೆಯಲಿಲ್ಲ. ಎದೆಯಲ್ಲಿದ್ದ ನಾಗರೆಡ್ಡಿಯವರ ಅಗಲಿಕೆ ನೋವಿನಲ್ಲೂ ಇಂದಿನ ಲೋಕಸಭೆ ಮತದಾನಕ್ಕೆ ಆಗಮಿಸಿ ಎಲ್ಲರೂ ಮತ ಹಾಕಿದರು.

ನೋವನ್ನು ಎದೆಯಲ್ಲಿಟ್ಟುಕೊಂಡ ಇಡೀ‌ ಕುಟುಂಬದ 20 ಕ್ಕೂ ಹೆಚ್ಚು ಸದಸ್ಯರು ಮತದಾನದ ಕರ್ತವ್ಯವನ್ನು‌ ನೆರವೇರಿಸಿದರು. ಒಮ್ಮೆಲೇ ಎಲ್ಲರೂ ಮತದಾನಕ್ಕೆ ತೆರಳುವ ಮೂಲಕ ಪ್ರಜಾಪ್ರಭುತ್ವದ ಪರಮ ಮತದಾನದ ಕರ್ತವ್ಯವನ್ನು ನೆರವೇರಿಸಿ ಗಮನ ಸೆಳೆದರು.

ದಿ. ನಾಗರೆಡ್ಡಿಯವರ 20 ಜನರ ಸದಸ್ಯರ ಕುಟುಂಬ ಸೇರಿ ಮತಗಟ್ಟೆಗೆ ಹೋಗಿ ಮತದಾನ ಮಾಡುವ ಮೂಲಕ ಇನ್ನಿತರರಿಗೆ ಮಾದರಿಯಾಗಿದ್ದಾರೆ. ಬಿಸಿಲಿದೆ, ಹೇಗೆ ಹೋಗೋದು ಎಂದು ಮನೆಯಲ್ಲಿ ಕೂಡದೆ ಬೇಗ ಮತದಾನ ಮಾಡಿ ಬನ್ನಿರೆಂದು ಸೇಡಂ ಸೇರಿದಂತೆ ಕಲಬುರಗಿಯಾದ್ಯಂತ ಸಾಮಾಜಿಕ ಜಾಲ ತಣಗಳಲ್ಲಿ ಸೇಡಂನಲ್ಲಿನ ಈ ಬೆಳವಣಿಗೆ ವೈರಲ್‌ ಆಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾ.1ರಿಂದ ಸೇವೆ ಬಂದ್‌ ಸರ್ಕಾರಿ ವೈದ್ಯರಿಂದ ಎಚ್ಚರಿಕೆ
ಚರಿತ್ರೆ ತಿಳಿದಿದ್ದರಷ್ಟೇ ಚರಿತ್ರೆ ಸೃಷ್ಟಿಸಲು ಸಾಧ್ಯ: ಸಿಎಂ