ಮಾಹೆ ‘ಯಕ್ಷಗಾನ’ ಸಾಕ್ಷ್ಯಚಿತ್ರಕ್ಕೆ ನಾಗ್ಪುರ ಚಿತ್ರೋತ್ಸವ ಪ್ರಶಸ್ತಿ

KannadaprabhaNewsNetwork |  
Published : Apr 03, 2026, 02:45 AM IST
01ಮಾಹೆ | Kannada Prabha

ಸಾರಾಂಶ

ಮಣಿಪಾಲ್‌ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿವಿ ನಿರ್ಮಿಸಿದ ‘ಡಿಸರ್ನಿಂಗ್ ಇಂಡಿಯಾ : ಯಕ್ಷಗಾನ’ ಸಾಕ್ಷ್ಯಚಿತ್ರವು ‘ನಾಗ್ಪುರ ಚಲನಚಿತ್ರೋತ್ಸವ 2026’ರಲ್ಲಿ ವೃತ್ತಿಪರ ವಿಭಾಗದ ‘ಅತ್ಯುತ್ತಮ ಸಾಕ್ಷ್ಯಚಿತ್ರ’ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.

ಮಣಿಪಾಲ: ಮಣಿಪಾಲ್‌ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿವಿ ನಿರ್ಮಿಸಿದ ‘ಡಿಸರ್ನಿಂಗ್ ಇಂಡಿಯಾ : ಯಕ್ಷಗಾನ’ ಸಾಕ್ಷ್ಯಚಿತ್ರವು ‘ನಾಗ್ಪುರ ಚಲನಚಿತ್ರೋತ್ಸವ 2026’ರಲ್ಲಿ ವೃತ್ತಿಪರ ವಿಭಾಗದ ‘ಅತ್ಯುತ್ತಮ ಸಾಕ್ಷ್ಯಚಿತ್ರ’ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.ಮಾಹೆಯ ‘ಅಂತರ ಸಾಂಸ್ಕೃತಿಕ ಅಧ್ಯಯನ ಮತ್ತು ಸಂವಾದ ಕೇಂದ್ರ’ (ಸಿಐಎಸ್‌ಡಿ) ಈ ಸಾಕ್ಷ್ಯಚಿತ್ರ ನಿರ್ಮಿಸಿದ್ದು, ಕರಾವಳಿ ಕರ್ನಾಟಕದ ಹೆಮ್ಮೆಯ ಕಲೆಯಾದ ಯಕ್ಷಗಾನದ ಐತಿಹಾಸಿಕ ವಿಕಸನ ಮತ್ತು ಸಾಂಸ್ಕೃತಿಕ ಮಹತ್ವವನ್ನು ಇದು ಜಗತ್ತಿಗೆ ಪರಿಚಯಿಸಿದೆ.

ಈ ಬಾರಿಯ ನಾಗ್ಪುರ ಚಲನಚಿತ್ರೋತ್ಸವಕ್ಕೆ ದೇಶದಾದ್ಯಂತ ವಿವಿಧ ವಿಭಾಗಗಳಲ್ಲಿ ಒಟ್ಟು 304 ಚಲನಚಿತ್ರಗಳು ಬಂದಿದ್ದವು. ಅವುಗಳಲ್ಲಿ 189 ಚಿತ್ರಗಳನ್ನು ಪ್ರದರ್ಶನಕ್ಕೆ ಆಯ್ಕೆ ಮಾಡಲಾಗಿತ್ತು. ಇದರಲ್ಲಿ ಮಾಹೆಯ ‘ಯಕ್ಷಗಾನ’ ಸಾಕ್ಷ್ಯಚಿತ್ರವು ಕಲಾತ್ಮಕ ಮೌಲ್ಯ ಮತ್ತು ಆಳವಾದ ಸಂಶೋಧನೆಗಾಗಿ ಈ ಪ್ರಶಸ್ತಿ ತನ್ನದಾಗಿಸಿಕೊಂಡಿತು. ನಾಗ್ಪುರದ ರಾಷ್ಟ್ರಸಂತ ತುಕಾಡೋಜಿ ಮಹಾರಾಜ್ ವಿಶ್ವವಿದ್ಯಾಲಯದಲ್ಲಿ ಮಾ, 29 ರಂದು ಈ ಚಿತ್ರದ ಪ್ರದರ್ಶಿಸಲಾಯಿತು.

ಸಿಐಎಸ್‌ಡಿ ತನ್ನ ‘ಲಿವಿಂಗ್ ಕಲ್ಚರ್ಸ್ ಆಫ್ ತುಳುನಾಡು’ ಎಂಬ ಸಂಶೋಧನಾ ಯೋಜನೆಯ ಭಾಗವಾಗಿ ಈ ಸಾಕ್ಷ್ಯಚಿತ್ರ ಸಿದ್ಧಪಡಿಸಲಾಗಿದೆ. ಕರಾವಳಿಯ ಸಂಪ್ರದಾಯಗಳನ್ನು ಸಂರಕ್ಷಿಸುವ ಮತ್ತು ವಿಶ್ಲೇಷಿಸುವ ಉದ್ದೇಶವನ್ನು ಈ ಯೋಜನೆ ಹೊಂದಿದೆ.

ಈ ಸಾಕ್ಷ್ಯಚಿತ್ರವು ಈಗಾಗಲೇ ವಾರಾಣಸಿಯ ಅಂತಾರಾಷ್ಟ್ರೀಯ ಕಿರುಚಿತ್ರೋತ್ಸವದಲ್ಲಿ ‘ಜ್ಯೂರಿ ಪ್ರಶಸ್ತಿ’ ಪಡೆದಿದೆ. ಜತೆಗೆ ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ನಡೆದ ‘ವರ್ಲ್ಡ್ ಕಲ್ಚರ್ಸ್ ಫಿಲ್ಮ್ ಫೆಸ್ಟಿವಲ್’ನಲ್ಲಿ ಸೆಮಿಫೈನಲಿಸ್ಟ್ ಹಂತಕ್ಕೆ ಆಯ್ಕೆಯಾಗಿತ್ತು.

ಸಿಐಎಸ್‌ಡಿ ಸಂಯೋಜಕ ಡಾ. ಪ್ರವೀಣ್ ಕೆ. ಶೆಟ್ಟಿ ಅವರು, ಈ ಪ್ರಶಸ್ತಿಯು ಶೈಕ್ಷಣಿಕ ಸಂಶೋಧನೆ ಮತ್ತು ಸಾಂಸ್ಕೃತಿಕ ದಾಖಲೀಕರಣದ ನಡುವೆ ಅರ್ಥಪೂರ್ಣ ಸೇತುವೆ ನಿರ್ಮಿಸುವ ಹಾಗೂ ಅಂತರಶಿಸ್ತೀಯ ಸಂಶೋಧನೆಗೆ ಉತ್ತೇಜನ ನೀಡಿದೆ. ಈ ಸಾಕ್ಷ್ಯಚಿತ್ರದ ಯಶಸ್ಸು, ಆಳವಾದ ಸಂಶೋಧನೆ ಮತ್ತು ನವೀನ ಕಥಾವಾಚನದ ಮೂಲಕ ಭಾರತದ ಪರಂಪರೆಗಳೊಂದಿಗೆ ನಿರಂತರ ಸಂಪರ್ಕವನ್ನು ಸಾಧಿಸುವಲ್ಲಿ ಸಿಐಎಸ್‌ಡಿ ವಹಿಸುತ್ತಿರುವ ಮಹತ್ವದ ಪಾತ್ರವನ್ನು ಪುನರುಚ್ಚರಿಸುತ್ತದೆ ಎಂದು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೇ 8 ರಂದು ರಾಜ್ಯಮಟ್ಟದ ರೈತ ಜಾಗೃತಿ ಸಮಾವೇಶ
ಪ್ರಧಾನಿ ಬಗ್ಗೆ ಮಾತನಾಡಲು ಕಾಂಗ್ರೆಸ್ಸಿನವರಿಗೆ ನೈತಿಕತೆ ಇಲ್ಲ: ಯತ್ನಾಳ